Saturday, May 4, 2013


ಶರಣರು ಮತ್ತು ಪರಿಸರ


 ಡಾ. ಬಸವರಾಜ ಬಲ್ಲೂರ

ಮೊ: 9242428179 /9738418468 E-mail :basavaballur@gmail.com

 

ಪರಿಸರ ಸಂರಕ್ಷಣೆ ಇಂದಿನ ತುತರ್ು ಅಗತ್ಯಗಳಲ್ಲಿ ಒಂದಾಗಿದೆ. ಗಾಂಧೀಜಿಯ ಒಂದು ಮಾತಿದೆ ನಿಸರ್ಗಕ್ಕೆ ಮನುಷ್ಯರ ಎಲ್ಲ ಆಸೆಗಳನ್ನು ಪೂರೈಸುವ ಶಕ್ತಿಯಿದೆ. ಆದರೆ ಒಂದೇ ಒಂದು ದುರಾಸೆಯನಲ್ಲ ಎಂಬುದು ಇದರರ್ಥ. ನಾವು ಪರಿಸರದೊಂದಿಗೆ ಬದುಕಬೇಕು. ಅದೂ ಸದಾಶಯದೊಂದಿಗೆ. ಅಂದಾಗ ನಮ್ಮ ಎಲ್ಲ ಆಸೆಗಳು ಪೂರೈಕೆಯಾಗುತ್ತವೆ. ಪರಿಸರವೆಂದರೆ ಕೇವಲ ಸುತ್ತಲಿನ ಭೂಮಿ ಮಾತ್ರವಲ್ಲ. ಪಂಚಭೂತಗಳೊಂದಿಗೆ ಚರಾಚರ ವಸ್ತುಗಳೆಲ್ಲ ಸೇರಿದ ಅಖಂಡ ವಿಶ್ವ. ಆದರೆ ದುರಂತದ ಸಂಗತಿಯೆಂದರೆ ನಮ್ಮ ಪಂಚಭೂತಗಳು ಇಂದು ಅತ್ಯಂತ ಕಲುಷಿತವಾಗಿವೆ. ಪರಿಸರ ವಿಜ್ಞಾನಿಗಳು ನಿರಂತರ ಎಚ್ಚರಿಸುತ್ತಿದ್ದಾರೆ. ಭೂಮಿ ಬಿಸಿಯಾಗುತ್ತಿದೆ. ಅಂತರ್ ಜಲ ಪ್ರಮಾಣ ಕಡಿಮೆಯಾಗಿದೆ. ಋತುಮಾನಗಳು ಬದಲಾಗುತ್ತಿವೆ. ಹಿಮ ಕರಗುತ್ತಿದೆ. ಹೀಗೆ ಅನೇಕ ರೀತಿಯ ವ್ಯತ್ಯಯ (ಬದಲಾವಣೆ)ಗಳು ನಮ್ಮ ಪರಿಸರದಲ್ಲಾಗುತ್ತಿವೆ. ಇದಕ್ಕೆ ಮುಖ್ಯ ಕಾರಣವೆಂದರೆ, ಮನುಷ್ಯರ ಅಹಂ ಮತ್ತು ದುರ್ಬಲವಾದ ಮನಸ್ಸು ಹಾಗೂ ಸಂಪತ್ತಿನ ಕ್ರೋಢಿಕರಣ. ಬಸವಾದಿ ಶರಣರ ಆಶಯವೆಂದರೆ ಅಹಂ ನಿರಸವಾಗುವುದು ಮನಸ್ಸಿನ ಪ್ರಾಬಲ್ಯ ಹೆಚ್ಚಿಸುವುದು ಮತ್ತು ಅಸಂಗ್ರಹ ತತ್ವವನ್ನು ಜಾರಿಗೆ ತರುವುದಾಗಿತ್ತು.

ಭಾರತೀಯ ಸಂದರ್ಭದಲ್ಲಿ ಹೆಣ್ಣಿನ ಮೇಲೆ ಆದ ಆಕ್ರಮಣದಂತೆ ಪ್ರಕೃತಿ ಮೇಲೆಯೂ ಆಕ್ರಮಣ ನಡೆದಿದೆ. ಆಥರ್ಿಕವಾಗಿ ಪುರುಷ ಸದೃಢವಾದಂತೆ, ಅವನ ಆಸೆ ಆಕಾಂಕ್ಷೆಗಳು ಹೆಚ್ಚಾದವು. ಅದರಂತೆ ಹೊಸ ವಸ್ತುವಿನ ಉತ್ಪಾದನೆಯಾದವು. ಇದರಿಂದ ನಿಸರ್ಗದ ಮೇಲೆ ದಾಳಿ ಮಾಡಲು ಅನುವಾಯಿತು.

ನಮಗೆ ಒಂದು ಬಿಳಿ ಹಾಳೆ ಯಾವ ಲೆಕ್ಕಕ್ಕೂ ಇಲ್ಲ. ಸಣ್ಣ ತಪ್ಪಾದರೂ ಸರಿ ಹರಿದು ಬಿಸಾಕುತ್ತೇವೆ. ಆದರೆ ಒಂದು ಹಾಳೆ ತಯಾರಾಗಲು ಅರ್ಧ ಮರ ಬೇಕಾಗಬಹುದು. ಮರವೆಂದರೆ ಕೇವಲ ನಾಲ್ಕು ಟೊಂಗೆಗಳ ಒಂದು ಆಕೃತಿಯಲ್ಲ. ನೂರಾರು ಜನರಿಗೆ ನೆರಳಾಗಿ ಆಮ್ಲಜನಕ ಘಟಕವಾಗಿ ಸಾವಿರಾರು ಪಕ್ಷಿಗಳಿಗೆ ಆಶ್ರಯವಾಗಿ, ಉರುವಲಾಗಿ, ಉಪಯುಕ್ತ ವಸ್ತುವಾಗಿ ಹೀಗೆ ಬಹುಪಯೋಗಿಯಾಗಿ ಬಳಕೆಯಾಗಿರುವ ಒಂದು ಪರಿಸರ. ಹಾಗೇ ಒಂದು ಸಣ್ಣ ಗುಂಡು ಸೂಜಿ ಕೂಡ ಉತ್ಪಾದನೆಯಾಗಲು ಬೇಕಾಗುವ ಕಚ್ಚಾ ಗಣಿ ಅದೇಷ್ಟೋ ಪಾಲು.

ಆಧುನಿಕ ಜಗತ್ತನ್ನು ವಸ್ತುಗಳ ಲೋಕ ವೆಂದು ಕರೆಯುತ್ತೇವೆ. ವಸ್ತು ವ್ಯಾಮೋಹ ಹೆಚ್ಚಾಗಿದೆ. ಹತ್ತು ರೂಪಾಯಿ ಆದಾಯ ಹೆಚ್ಚಾದರೆ ಹೊಸ ವಸ್ತು ತರುವ ಆಲೋಚನೆ ಮಾಡುತ್ತೇವೆ. ಇದರ ಅಡ್ಡ ಪರಿಣಾಮಗಳ ಬಗ್ಗೆ ಎಂದು ಆಲೋಚಿಸಿಲ್ಲ. 1985 ಮೇ ತಿಂಗಳಲ್ಲಿ ಅಂಟಾಟರ್ಿಕ್ ಮೇಲಿನ ವಾತಾವರಣದ ಓಜೋನ್ ಪದರದಲ್ಲಿ ರಂಧ್ರವೊಂದು ಕಾಣಿಸಿಕೊಂಡಾಗ ವಿಶ್ವದ ವಿಜ್ಞಾನಿಗಳ ಸಮುದಾಯ ತಲ್ಲಣಗೊಂಡಿತ್ತು. ಓಜೋನ್ ಎಂದರೆ ಭೂಮಿಯಿಂದ ಸುಮಾರು 30 ಕಿ.ಮೀ. ಎತ್ತರದಲ್ಲಿ ಭೂಮಿಗೆ ಹಿಡಿದಿರುವ ಒಂದು ಕೊಡೆ ಇದು ಭೂಮಿಯ ಮೇಲಿನ ಎಲ್ಲ ಜೀವ ಸಂಕುಲಗಳನ್ನು ಸೂರ್ಯನ ನೇರವಾದ ಅತೀ ನೇರಳೆ ಕಿರಣಗಳಿಂದ ರಕ್ಷಿಸುತ್ತದೆ. ಇಂತಹ ಜೀವ ರಕ್ಷಕ ಓಜೋನ್ ಪದರಿಗೆ ರಂಧ್ರ ಬೀಳುತ್ತಿರುವುದು ಜೀವ ಸಂಕುಲದ ವಿನಾಶದ ಸಂಕೇತವಾಗಿದೆ. ದಿನನಿತ್ಯ ನಾವು ಬಳಸುವ ವೈಭವದ ವಸ್ತು (ಇಂಧನ ಸಾಮಗ್ರಿ, ರೆಫ್ರಿಜನಲ್ ಕ್ಲೋರೀನ್, ಪ್ಲೋರಿನ್, ಇಂಗಾಲದ ಕ್ರಿಮಿನಾಶಕ ಇತ್ಯಾದಿ) ಗಳಿಂದ ಓಜೋನ್ ಹಾಳಾಗಿ ಭೂಮಿಯ ಶಾಖ ಹೆಚ್ಚಾಗುತ್ತಿದೆ. ನಗರೀಕರಣದಿಂದ ಕಾಡು ನಾಡಾಗುತ್ತಿದೆ. ಇದರಿಂದ ಋತುಮಾನವು ಬದಲಾಗಿದೆ. ಇದರಿಂದ ಹಿಮ ಕರಗಿ ಸಮುದ್ರದ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಕೆಲವೇ ವರ್ಷಗಳಲ್ಲಿ ಕಡಲ ತೀರದ ಊರುಗಳು ಮುಳುಗಿ ಮುಂದೆ ಎಲ್ಲರೂ ಮುಳುಗುತ್ತೇವೆ. ಅದಕ್ಕಾಗಿಯೇ ವಚನಕಾರರು ಖಾಸಗಿ ಆಸ್ತಿಯನ್ನು ವಿರೋಧಿಸಿ ಸಂಗ್ರಹ ತತ್ವದ ದಾಸೋಹವನ್ನು ರೂಢಿಸಿದರು.

ಅನ್ನದೊಳಗೊಂದಗುಳ, ಸೀರೆಯೊಳೆಗೊಂದೆಳೆಯ ಇಂದಿಂಗೆ ನಾಳಿಂಗೆನೆಂದೆನಾದೊಡೆ ನಿಮ್ಮಾಣೆ ಎನ್ನುವ ಬಸವಣ್ಣನವರ ಮಾತಿನಲ್ಲಿ ಅಸಂಗ್ರಹ ತತ್ವದ ಆಶಯಗಳಿವೆ. ಸರಳ ಬದುಕಿನ ಸೂತ್ರವಿದೆ. ಸರಳ ಬದುಕಿನಿಂದ ಮಾತ್ರ ಜಗತ್ತು ಸುಂದರವಾಗಿಡಲು ಸಾಧ್ಯವಿದೆ. ಅದಕ್ಕಾಗಿ ನಮ್ಮ ಪಂಚಭೂತಗಳು ಶುದ್ಧವಾಗಿರಬೇಕು. ಜೊತೆಗೆ ನಮ್ಮ ಮನಸ್ಸು ಕೂಡ. ಪಂಚಭೂತಗಳಾದ ನೆಲ, ಜಲ, ಅಗ್ನಿ, ಗಾಳಿ ಮತ್ತು ಆಕಾಶಗಳು ಶುದ್ಧವಾಗಿಡುವ ಕುರಿತು ಚೆನ್ನಬಸವಣ್ಣನ ನಿಲುವೆಂದರೆ,

ನಾನು ಮೆಟ್ಟುವ ಭೂಮಿಯ ಭಕ್ತನ ಮಾಡಿದಲ್ಲದೆ ಮೆಟ್ಟೆನಯ್ಯ

ನಾ ನೋಡುತಿಹ ಆಕಾಶದ ಚಂದ್ರ ಸೂರ್ಯರ

ಭಕ್ತನ ಮಾಡಿದಲ್ಲದೆ ನಾ ನೋಡೆನಯ್ಯ

ಆಲವ ಭಕ್ತನ ಮಾಡಿದಲ್ಲದೆ ನಾನು ಬಳಸೆನಯ್ಯ

ನಾನು ಕೊಂಬ ಹದಿನೆಂಟು ಧಾನ್ಯವ ಭಕ್ತನ ಮಾಡಿದಲ್ಲದೆ

ಕೊಳ್ಳೆನು ಕೂಡಲ ಚನ್ನಸಂಗಾ ನಿಮ್ಮಾಣೆ

ಭೂಮಿಯನನ್ನೊಳಗೊಂಡ ಎಲ್ಲ ವಸ್ತುಗಳನ್ನು ಭಕ್ತ ಮಾಡೋದು ಎಂದರೆ ಅವನನ್ನು ಪರಿಶುದ್ಧವಾಗಿ ಮಾಡುವುದು. ಭಕ್ತ ಎಂದರೆ ಆರಾಧನೆ, ಪೂಜೆ ಎಂದರ್ಥ. ನಾವು ಯಾವ ವಸ್ತುಗಳನ್ನು ಆರಾಧಿಸುತ್ತೇವೆಯೋ, ಪೂಜಿಸುತ್ತೇವೆಯೋ ಅವುಗಳನ್ನು ಮಲೀನಗೊಳಿಸುವುದಿಲ್ಲ. ದೇವರನ್ನು ಆರಾಧಿಸುತ್ತೇವೆಂದರೆ ದೇವಾಲಯವನ್ನು ಮಲೀನಗೊಳಿಸುವುದಿಲ್ಲ. ದುರಂತವೆಂದರೆ ಭೂಮಿ, ಆಕಾಶ (ಚಂದ್ರ) ಅಗ್ನಿ, (ಸೂರ್ಯ) ಜಲ, (ಗಂಗೆ) ಮೊದಲಾದವುಗಳನ್ನು ಆರಾಧಿಸಿಯೂ ಅಪವಿತ್ರಗೊಳಿಸಿದ್ದೇವೆ. ಹಾಗೆ ನೋಡಿದರೆ ಜನಪದ ಗರತಿಯ ಮೊದಲ ನಮನ ಭೂಮಿಗಿದೆ.

ಎದ್ದೊಂದು ಗಳಿಗೆಯ ಯಾರ್ಯಾರ ನೆನೆಯಲಿ

ಎಳ್ಳು ಜೀರಗೆ ಬೆಳೆವ | ಭೂದೇವಿಯ

ಎದ್ದೊಂದು ಗಳಿಗೆ ನೆನದೇನ ||

      ನಮ್ಮ ಪೂರ್ವಜರಿಗೆ ಭೂಮಿಯ ಶಕ್ತಿ ಮತ್ತು ಗುಣ ಗೊತ್ತಿದ್ದವು. ಅದಕ್ಕಾಗಿ ಅದನ್ನು ಆರಾಧಿಸಿದರು. ಪ್ರೀತಿಸಿದರು. ಭೂಮಿಯನ್ನು ಹಾಳು ಮಾಡಲಿಲ್ಲ. ರಾಸಾಯನಿಕ ಗೊಬ್ಬರ, ಕೀಟನಾಶಕ, ಪ್ಲಾಸ್ಟಿಕ್ ಮೊದಲಾದ ಬಳಕೆಗಳಿಂದ ಭೂಮಿಯ ಸತ್ವ ನಾಶವಾಗುತ್ತಿದೆ. ಅಲ್ಲದೆ ಸಂಪತ್ತಿನ ದಾಹದಿಂದ ಹೆಚ್ಚು ಇಳುವರಿ ಬರುವ ಹೈಬ್ರಿಡ್ ತಳಿಗಳನ್ನು ಬಳಿಸಿ ಭೂಮಿಯ ಫಲವತ್ತತೆ ಕಡಿಮೆಯಾಗುತ್ತಿದೆ. ಹಿಂದೆ ಭೂಮಿ ಕಾಯ್ದಿಡುವ ಪದ್ಧತಿ ಇತ್ತು. ನಮ್ಮಲ್ಲಿ ವರ್ಷಕ್ಕೆರಡು ತಿಂಗಳಾದರೂ ಒಮ್ಮೊಮ್ಮೆ ಒಂದೇ ಬೆಳೆ ಪಡೆದು ಸಂತೃಪ್ತರಾಗಿದ್ದೆವು. ಅದಕ್ಕೆ ಚನ್ನಬಸವಣ್ಣನವರು ಭೂಮಿಯ ಭಕ್ತನ ಮಾಡಬೇಕೆಂದಿದ್ದಾರೆ. ಒಂದು ಉದಾಹರಣೆ ಗಮನಿಸುವುದಾದರೆ ಗಂಗಾಸ್ನಾನ ತುಂಗಾಪಾನ ವೆಂಬ ನಾಣ್ಣುಡಿಯೊಂದಿದೆ. ಇಂದು ಗಂಗೆಯಲ್ಲಿ ಮಿಂದರೆ (ಸ್ನಾನ ಮಾಡಿದರೆ) ಎಲ್ಲ ಚರ್ಮರೋಗಗಳು ತಗಲುತ್ತವೆಂದು ವೈದ್ಯ ಲೋಕ ದೃಢಪಡಿಸಿದೆ. ಅಷ್ಟರ ಮಟ್ಟಿಗೆ ಗಂಗೆಯನ್ನು ಅಪವಿತ್ರಗೊಳಿಸಿದ್ದೇವೆ. ಭೂಮಿಯ ಜಲಮಾಲಿನ್ಯಕ್ಕೆ ಒಂದು ಉದಾ: ಎಂದರೆ ಕೇವಲ ಅಮೇರಿಕದ ನೀರಿನಲ್ಲಿ 50 ಸಾವಿರ ವಾಣಿಜ್ಯ, 65 ಸಾವಿರ ಮೀನು ಹಿಡಿಯುವ ಹಡಗುಗಳು, 1600 ಸಕರ್ಾರಿ ಹಡಗುಗಳ ಸುಮಾರು 8 ದಶಲಕ್ಷ ಮನೋರಂಜನಾ ದೋಣಿಗಳು ತೇಲುತ್ತವೆ. ಇವುಗಳ ಹೊಲಸು ವಿಸರ್ಜನೆಯೊಂದಿಗೆ 5 ದಶಲಕ್ಷ ಜನರ ಮಲಮೂತ್ರ ವಿಸರ್ಜನೆಯೂ ಸೇರಿರುತ್ತವೆ. ಸಾಮಾನ್ಯವಾಗಿ ನಗರ ಪ್ರದೇಶಗಳ ಚರಂಡಿ ನೀರು ಶುದ್ಧ ನೀರಿಗೆ ಬೆರಕೆಯಾಗಿ ಜಲಮಾಲಿನ್ಯ ಉಂಟಾಗುತ್ತದೆ. ನಮ್ಮಲ್ಲಿ ಅನೇಕ ರೋಗಗಳ ತವರು ಅಶುದ್ಧ ನೀರು. ಪಟ್ಟಣಗಳಲ್ಲಿ ಚರಂಡಿ ಮತ್ತು ಕುಡಿಯುವ ನೀರು ಜೊತೆಯಾಗಿಯೇ ಚಲಿಸುವುದರಿಂದ ವರ್ಷಕ್ಕೆ 16,600 ಎಳೆಯ ಮಕ್ಕಳ ಸಾವಾಗುತ್ತದೆ. ಮನುಷ್ಯರ ದೇಹದಲ್ಲಿನ ರಕ್ತನಾಳಗಳು ಸಹ ಶುದ್ಧ ರಕ್ತನಾಳ-ಅಶುದ್ಧ ರಕ್ತನಾಗಳೆಂದಿವೆ. ಆದರೆ ಮಳೆ ನೀರು, ನಾಲಿ ನೀರು, ಬೆರೆತುಗೊಂಡು ಶುದ್ಧ ನೀರು ಸೇರುವುದು ಜಲ ಮಾಲಿನ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ನೀರಲ್ಲಿದ್ದ ಮೀನುಗಳು ಮಾಯವಾಗಿವೆ. ಭೂಮಿಯ ಮೇಲೆ ಜೀವಿ ಬದುಕಲು ಗಾಳಿಯ ನಂತರ ನೀರೇ ಮುಖ್ಯವಾಗಿದೆ. ಅದಕ್ಕಾಗಿ ಶರಣರು ಜಲವ ಭಕ್ತನ ಮಾಡಬೆಕೆಂದು ಸಾರಿದ್ದಾರೆ.

ನಮ್ಮ ಕಾಳುಗಳೂ ಅಷ್ಟೆ. ಇಂದು ಎಲ್ಲ ಆಹಾರ ಕಲುಷಿತವಾಗಿದೆ. ರಾಸಾಯನ ಲೇಪಿತ ಧಾನ್ಯಗಳು ವಿಷಪೂರಿತವಾಗಿರುತ್ತದೆ. ಕಾಳುಗಳನ್ನು ಹಸನಾಗಿಸುತ್ತಿಲ್ಲ ದೇಶಿಯ ಎಲ್ಲ ತಳಿಗಳು ಇಲ್ಲವಾಗಿವೆ. ಬೀಜಕ್ಕಾಗಿ ಸಂಪೂರ್ಣ ಪರಾವಲಂಬಿಯಾಗಿದ್ದೇವೆ. ಇದರಿಂದ ನಿಜರ್ಿವೀಕರಣ ಸಮಸ್ಯೆ ಎದುರಾಗುತ್ತಿದೆ. ಇದ್ದ ಆಹಾರದಲ್ಲಿ ಪ್ರೋಟಿನ್ ಕೊರತೆಯಾಗಿದೆ. ಹೈಬ್ರಿಡ್ ಧಾನ್ಯದಲ್ಲಿ ರೋಗ ನಿರೋಧಕ ಶಕ್ತಿಯೇ ಇಲ್ಲ. ಕುರಿತು ನಾವು ಯಾರೂ ಚಿಂತನೆ ಮಾಡಿಲ್ಲ. ಒಂದು ಜೊತೆ ಬಟ್ಟೆ ಖರೀದಿಸಲು ಕನಿಷ್ಠ ಎರಡು ತಾಸು ವ್ಯಯ ಮಾಡುತ್ತೇವೆ. ಆದರೆ ಫಾಸ್ಟಪುಡ್ ಸೇವಿಸಲು ಒಂದು ಕ್ಷಣ ಕೂಡ ಆಲೋಚಿಸುತ್ತಿಲ್ಲಾ. ಅದಕ್ಕೆ ಬಸವಣ್ಣನವರು ನಮಗೆ ಉಣಲು ಕಲಿಸಿದ್ದಾರೆ. ಉಡಲು ಕಲಿಸಿದ್ದಾರೆ. ಅಕ್ಕಮಹಾದೇವಿ ಆಹಾರದ ಕಿರಿದು ಮಾಡಿರೆಂದು ಹೇಳುತ್ತಾಳೆ. ನಾವು ಮಾತ್ರ ಯಾವುದನ್ನು ಲೆಕ್ಕಿಸದೆ ಆರಾಮವಾಗಿದ್ದೇವೆ. ಮತ್ತು ಅವಸಾನದತ್ತ ಮುಖ ಮಾಡಿದ್ದೇವೆ. ಯಾಕೆ ಬಸವಾದಿ ಶರಣರು ಇವುಗಳ ಜಾಗೃತಿ ಉಂಟು ಮಾಡಿರುವುರೆಂದರೆ ನಮ್ಮ ಆಹಾರ, ನಮ್ಮ ಪರಿಸರ, ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ. ಸಾತ್ವಿಕ ಪರಿಸರ ಆಹಾರ-ಸಾತ್ವಿಕ ಮನಸ್ಸಿನ ಮನುಷ್ಯರನ್ನು ನಿಮರ್ಾಣ ಮಾಡುತ್ತದೆ.

ಎಲ್ಲ ಕಾರಣಗಳಿಂದ ನಾವು ನೆಲ, ಜಲ, ಗಾಳಿ, ಸೂರ್ಯ, ಚಂದ್ರ, ಧಾನ್ಯ ಮೊದಲಾದವುಗಳನ್ನೊಳಗೊಂಡ ಜೀವ ಪರಿಸರ, ಭೌತಿಕ ಪರಿಸರ ಮತ್ತು ಸಾಂಸ್ಕೃತಿಕ ಪರಿಸರ ಸಂರಕ್ಷಿಸಿಕೊಳ್ಳಬೇಕಾದ ಅಗತ್ಯವಿದೆ.