ಸತ್ಯಾಗ್ರಹ-ಆತ್ಮಾವಲೋಕನ
ಆಧುನಿಕ ಜಗತ್ತಿನ ಬಹುಮುಖ್ಯ ತಲ್ಲಣವೆಂದರೆ ಹಿಂಸೆ ಅದು ನಾನಾ ಮುಖದಲ್ಲಿದೆ. ಹಸಿವು, ಬಡತನ, ಭಯೋತ್ಪಾದನೆ, ಸೇಡು, ಅವಮಾನ, ಅಹಂಪ್ರತಿಷ್ಠೆ, ಸೋಕಿಯ ಬದುಕು, ಕೋಲೆ, ಸುಲಿಗೆ, ಅಜ್ಞಾನ, ದ್ವೇಷ, ಪ್ರೀತಿಯ ನಾಟಕ, ಸತ್ಯದ ಮುಖವಾಡಗಳು, ಹೆಸರು ಮತ್ತು ಪ್ರಸಿದ್ಧಿಯ ತವಕ ಹೀಗೆ ಪಟ್ಟಿ ಬೆಳೆಯುತ್ತದೆ. ಇವೆಲ್ಲ ವ್ಯಕ್ತಿಯೊಳಗೆ ತುಂಬಿಕೊಳ್ಳುತ್ತಲೇ ಸಮಾಜ ಕಲುಷಿತವಾಗಿ ಇಡೀ ವ್ಯವಸ್ಥೆ ಕಡೆ ನಾವೆ ಬಟ್ಟುಮಾಡಿ ತೋರಿಸುವಂತಾಗಿದೆ.
ಇತ್ತಿಚೀನ ದಿನಗಳಲ್ಲಿ ಭ್ರಷ್ಟಾಚಾರ ವಿರೋಧಿ ಅಲೆ ಎದ್ದಿದೆ, ಭ್ರಷ್ಟಾಚಾರ ತೊಲಗಿದರೆ ಜಾಗತಿಕ ಶಾಂತಿ ಸಾಧ್ಯವೆಂದು ಬಿಂಬಿಸಲಾಗುತ್ತಿದೆ. ಭ್ರಷ್ಟಾಚಾರ ಮುಕ್ತ ಸಮಾಜ ರೂಪುಗೊಳ್ಳಬೇಕು ಎಂಬುವುದು ಎಲ್ಲರ ನಿಲುವಾಗಿದೆ. ರಾಷ್ಟ್ರಮಟ್ಟದಲ್ಲಿ, ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಬೆಂಬಲ ಪಡೆದ ಅಣ್ಣಾ ಹಜಾರೆ ಆಧುನಿಕ ಗಾಂಧಿಯಂತೆ ಬಿಂಬಿಸಲಾಯಿತು. ಇಂತಹ ಅನೇಕ ಸಂದರ್ಭಗಳಲ್ಲಿ ಬಸವಣ್ಣ ಮತ್ತು ಗಾಂಧಿ ಮತ್ತೆ ಮತ್ತೆ ನೆನಪಾಗುತ್ತಲೆ ಪ್ರಸ್ತುತರಾಗುತ್ತಾರೆ.
ಬಸವಣ್ಣನವರ ಸತ್ಯಶುದ್ಧ ಕಾಯಕ ದಾಸೋಹ ಪ್ರಜ್ಞೆ ಮೇಲಿನ ಎಲ್ಲ ಹಿಂಸೆಗಳಿಗೆ ಪರಿಹಾರವಾಗಬಲ್ಲ ಶಕ್ತಿಯಿದೆ. ಹಾಗೆ ಗಾಂಧಿಜಿಯವರ ಸತ್ಯ, ಅಹಿಂಸೆ ಸಹ ಅಷ್ಟೇ. ಇವು ಸಾರ್ವಕಾಲಿಕ ಮೌಲ್ಯಗಳು ಆದರೆ ಈ ಮೌಲ್ಯಗಳು ವ್ಯಕ್ತಿಯ ಒಳಗಿನಿಂದ ಬಂದರೆ ಇವುಗಳಿಗೆ ಅರ್ಥವಿದೆ. ಸಾಮಾಜಿಕ ಒತ್ತಡ ಬಾಹ್ಯ ಆಡಂಬರದಿಂದ ಏನ್ನನ್ನು ಸಾಧಿಸಲು ಸಾಧ್ಯವಿಲ್ಲ. ಜನ ನೋಡಿ ಅಥವಾ ಜನ ನೋಡಲೆಂದು ಪ್ರತಿಭಟನೆಗೆ ಇಳಿಯುವುದು. ಮತ್ತು ತಕ್ಷಣ ಹೆಸರು ಗಳಿಸುವುದು ಆತ್ಮಸಾಕ್ಷಿಯಿಲ್ಲದವರ ವರ್ತನೆಗಳು. ಇಂಥವರಿಂದ ಏನನ್ನು ನೀರಿಕ್ಷಿಸಲಾಗುವುದು. ಆತ್ಮಸಾಕ್ಷಿಯಿಲ್ಲದಿದ್ದರೆ ಏನನ್ನು ಸಾಧ್ಯವಿಲ್ಲ. ಅದಕ್ಕೆ ಬಸವಣ್ಣ ಪ್ರತಿಕ್ಷಣ ಆತ್ಮಲೋಕನಕ್ಕೆ ತೆರೆದುಕೊಳ್ಳುವ ಮೂಲಕ ಮನಶುದ್ಧಿಗೆ ಒಡ್ಡಿಕೊಂಡು ಪರೀಕ್ಷಿಸಿಕೊಳ್ಳುವುದು ಹಾಗೇಯೆ ಗಾಂಧಿಜಿ ಅನೇಕ ಸಂದರ್ಭದಲ್ಲಿ ತನ್ನನ್ನು ಪರೀಕ್ಷೆ ಮಾಡಿಕೊಳ್ಳುವುದು ಪ್ರತಿಯೊಬ್ಬರ ದಿನಚರಿಯ ಭಾಗವಾಗಬೇಕು. ಅಂದಾಗ ಸತ್ಯ, ಅಹಿಂಸೆ ತತ್ವಗಳಿಗೆ ಒಂದು ಅರ್ಥ ಮತ್ತು ಬೆಲೆ ಬರುತ್ತದೆ.
ಸತ್ಯ ಎನ್ನುವುದು ಅತ್ಯಂತಿಕ ಮೌಲ್ಯವಾಗಿದೆ. ಎಲ್ಲಾ ದಾಸನಿಗರು ಸತ್ಯದ ಪರವಾಗಿ ನಿಲ್ಲುವುದು ಮತ್ತು ಎಲ್ಲಾ ತತ್ವ ಸಿದ್ಧಾಂತಗಳು ಸತ್ಯವನ್ನೆ ಪ್ರತಿಪಾದಿಸಿರುವುದು ನೋಡಿದರೆ ಅದರ ಸಾರ್ವಕಾಲಿಕತೆ ವಿದಿತವಾಗುತ್ತದೆ. ಸತ್ಯವನ್ನೆ ನುಡಿಯುವುದು. ನುಡಿಯನ್ನು ನಡೆಯಲಿ ಪೂರೈಸುವುದು, ಬಸವಾದಿ ಶರಣರ ನಿಲುವಾಗಿತ್ತು. ಮುಂದೆ ಗಾಂಧಿಜಿ ಅದನ್ನು ಅಕ್ಷರಶಃ ಪಾಲಿಸಿದರು. ಹೀಗೆ ನಡೆ-ನುಡಿ ಒಂದಾದ ಬದುಕು ನಮಗೆ ಇಂದು ಆದರ್ಶವಾಗಬೇಕಾಗಿದೆ.
ಸತ್ಯಾಗ್ರಹವೆಂದರೆ ಸತ್ಯಕ್ಕಾಗಿ ಆಗ್ರಹಿಸುವುದು, ವೈಯಕ್ತಿಕ ಸ್ವಾರ್ಥಕ್ಕಾಗಿ ಅಲ್ಲ. ಗಾಂಧಿಜಿಯವರ ಸತ್ಯಾಗ್ರಹ ಸಮಷ್ಠಿಯ ಒಳತಿಗಾಗಿತ್ತು. ರಾಷ್ಟ್ರೀಯ ಚಳವಳಿಗೆ ಹಾಗೂ ಸ್ವಾತಂತ್ರ್ಯ ಆಂದೋಲನದಲ್ಲಿ ಸತ್ಯಾಗ್ರಹದ ಪಾತ್ರ ಬಹುದೊಡ್ಡದು. ಬಸವಾದಿ ಶರಣರ ಕಾಲಕ್ಕೂ ಸತ್ಯಾಗ್ರಹವಿತ್ತು. ಅನೇಕ ಜಂಗಮರು ಸಾಮಾಜಿಕ ಅನುಷ್ಠಗಳನ್ನು ತೊಡೆಯಲು ಊರ ಒಳತಿಗಾಗಿ ವ್ಯಕ್ತಿಯ ಆತ್ಮಶುದ್ಧಿಗಾಗಿ ಸತ್ಯಾಗ್ರಹ ಮಾಡಿದವರಾಗಿದ್ದಾರೆ. ಅದರಲ್ಲಿ ಮುಳ್ಳು ಆವುಗೆ ಕಾಯಕ, ತೆಕ್ಕೆ ಕಾಯಕ, ಶಸ್ತ್ರ ಧಾರಿ ಮೊದಲಾದ ಹೆಸರಿನಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ್ದಾರೆ. ದೋಷಗಳನ್ನು ಕಂಡಲ್ಲಿ ಮೇಲಿನ ಕಾಯಕಗಳ ಮೂಲಕ ಅಂದರೆ ಮುಳ್ಳು ಆವುಗೆ ಮೇಲೆ ನಿಂತು, ಕಂಬಕ್ಕೆ ತೆಕ್ಕೆ ಬಿದ್ದು, ಅಸ್ತ್ರಗಳನ್ನು ಚುಚ್ಚಿಕೊಳ್ಳುವುದರ ಮೂಲಕ ತಪ್ಪು ಸರಿಪಡುವವರೆಗೆ ಹೋಗುತ್ತಿರಲಿಲ್ಲಾ. ಹೀಗೆ ಅಹಿಂಸಾತ್ಮಕವಾದ ಸತ್ಯಾಗ್ರಹವಿತ್ತು. ಗಾಂಧಿಜಿಯವರು ಸತ್ಯಾಗ್ರಹಕ್ಕೆ ಹೊಸಕಾಯಕಲ್ಪ ನೀಡಿದರು. ಇಂದು ನಡೆಸುತ್ತಿರುವ ಸತ್ಯಾಗ್ರಹಗಳು ಬಹುತೇಕ ಸಂದರ್ಭಗಳಲ್ಲಿ ಸ್ವ-ಪ್ರತಿಷ್ಠೆ, ಸಂತ ಲಾಭಕ್ಕಾಗಿ ನಡೆಯುತ್ತಿವೆ. ಸತ್ಯಾಗ್ರಹದಿಂದ ಎಲ್ಲವನ್ನು ಮಣಿಸಬಹುದು ಎಂಬ ತಪ್ಪು ಕಲ್ಪನೆ ಮನೆ ಮಾಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ಪ್ರಜೆಗಳೆ ಪ್ರಭುಗಳು ಸಂಸತ್ತು ಶ್ರೇಷ್ಠ, ಸಂವಿಧಾನವೆ ಪರಮೋಚ್ಛ ಅದನ್ನು ಮಣಿಸುವುದು. ಸಂವಿಧಾನಕ್ಕೆ ಮಾಡುವ ಅಪಮಾನವಾಗುತ್ತದೆ. ಸತ್ಯದ ನಿಲುವು ಅರೀತವರು ಸಾಮಾಜಿಕ ನ್ಯಾಯದಪರ ನಿಂತು ಸತ್ಯಾಗ್ರಹದಲ್ಲಿ ಭಾಗವಹಿಸುವಂತಾಗಬೇಕು. ಅಂದಾಗ ಅದಕ್ಕೊಂದು ಮೌಲ್ಯ ಬರುತ್ತದೆ.
ಭಾಲ್ಕಿ ಹಿರೇಮಠ ಸಂಸ್ಥಾನವು ಹೀಗೆ ಸಾಮಾಜಿಕ ನ್ಯಾಯವನ್ನು ಮಠದ ಮೂಲ ಸಿದ್ದಾಂತವೆಂದು ತಿಳಿದಿದ್ದು, ಪೂಜ್ಯ ಶ್ರೀ ಡಾ|| ಬಸವಲಿಂಗ ಪಟ್ಟದ್ದೇವರು ಬಸವಣ್ಣ ಮತ್ತು ಗಾಂಧಿಜಿಯವರ ತತ್ವಾದರ್ಶಗಳಿಗೆ ಬದ್ಧರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಬುದ್ಧ ಅರ್ಥವಾಗದಿದ್ದರೆ, ಲಿಂಗಾಯತರಿಗೆ ಬಸವಣ್ಣ ಅರ್ಥವಾಗುವುದಿಲ್ಲಾ ಹಾಗೆ ಬಸವಣ್ಣ ಅರ್ಥವಾಗದಿದ್ದರೆ ದಲಿತರಿಗೆ ಅಂಬೇಡ್ಕರ ಅರ್ಥವಾಗುವುದಿಲ್ಲ ಹಾಗೆ ಗಾಂಧಿಯನ್ನು ಅಥರ್ೈಸಿಕೊಳ್ಳಲು ಸಾಧ್ಯವಿಲ್ಲ. ಎಂದು ಪ್ರತಿಪಾದಿಸುತ್ತಲೆ, ಸಾಮಾಜಿಕ ಶುದ್ಧಿಕರಣಕ್ಕೆ ನಿಂತವರು. ಆದ್ದರಿಂದ ಬಸವಣ್ಣ ಮತ್ತು ಗಾಂಧಿಯವರು ಇವತ್ತಿಗೂ ಪ್ರಸ್ತುತ
ಡಾ. ಬಸವರಾಜ ಬಲ್ಲೂರ
No comments:
Post a Comment