ಕರ್ನಾಟಕ ಏಕೀಕರಣ ಶಿಲ್ಪಿ ಮರೆತ ಸರಕಾರ
ಡಾ. ಬಸವರಾಜ ಬಲ್ಲೂರ
ಮೊ: 9242428179 /9738418468
ಕನ್ನಡತ್ವದ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಬೆರಳೆಣಿಕೆಯ ಕೆಲವೇ ಮಹನಿಯರಲ್ಲಿ ಡಾ.ಜಯದೇವಿ ತಾಯಿ ಲಿಗಾಡೆ ಒಬ್ಬರು. ಭಾರತ ಸ್ವಾತಂತ್ರ್ಯ ಚಳವಳಿ, ಹೈದ್ರಾಬಾದ ಕನಾಟಕ ವಿಮೋಚನೆ ಮತ್ತು ಕನರ್ಾಟಕ ಏಕೀಕರಣಕ್ಕಾಗಿ ದುಡಿದ ದಿಟ್ಟ ಮಹಿಳಾ ಸಾಹಿತಿ ಡಾ.ಜಯದೇವಿ ತಾಯಿ ಲಿಗಾಡೆ ಜನಿಸಿ ಇದೆ 2012ರ ಜೂನ್ 23ಕ್ಕೆ ನೂರು ವರುಷ ಪೂರೈಸಿದ ಸಂಧರ್ಭದಲ್ಲಿ ಯಾವುದೆ ಕಾರ್ಯ ಚಟುವಟಿಕೆ ಕೈಗೊಳ್ಳದ ಸಕರ್ಾರ ಕನರ್ಾಟಕ ಶಿಲ್ಪಿಯನ್ನೆ ಮರೆತಂತಾಗಿದೆ.
ಇಡೀ ಭಾರತೀಯ ದೇಶಿ ಸಂಸ್ಕೃತಿಯ ಚಿಂತನೆಯಲ್ಲಿ ಅನನ್ಯವಾದ ಸಾಂಸ್ಕೃತಿಕ ವ್ಯಕ್ತಿತ್ವ ಹೊಂದಿರುವ ಡಾ.ಜಯದೇವಿತಾಯಿ ಲಿಗಾಡೆ ಕನ್ನಡ ನಾಡು ಕಂಡ ಅಪರೂಪದ ವ್ಯಕ್ತಿತ್ವ, ಸಾವಿರದ ಪದಗಳ ಕವಿಯಿತ್ತಿಯಾಗಿರುವ ಅವರು ನೆಲಮೂಲ ಸಂಸ್ಕೃತಿಯ ಪ್ರತಿಪಾದಕರು. ಅನುಭವವೇ ಮನುಷ್ಯರ ನಿಜವಾದ ಶಾಲೆ ಎಂಬ ಬಕರ್್ನ ಮಾತುಗಳು ಲಿಗಾಡೆಯವರ ಜೀವನ ವಿಧಾನದ ಅವಲೋಕನದಿಂದ ವಿದಿತವಾಗುತ್ತದೆ. ನನಗಾಗಿ ಬದುಕುವುದು ಬದುಕಲ್ಲ ನಮಗಾಗಿ ಬದುಕು ಎಂಬ ಸತ್ಯದ ಅರಿವಿನ ಮೂಲಕ ಬದುಕಿನ ಸಾರ್ಥಕತೆ ಕಂಡುಕೊಂಡವರು.
ಡಾ.ಎಮ್ ಎಮ್ ಕಲಬುಗರ್ಿಯವರು ಮೌಲ್ಯವನ್ನು ಕುರಿತು ಬರೆಯುತ್ತಾ. ಮೂರು ರೀತಿಯ ಮೌಲ್ಯಗಳನ್ನು ಹೇಳುತ್ತಾರೆ. ಒಂದು ಮೌಲ್ಯವನ್ನು ಬರೆಯುವುದು. ಅದಕ್ಕೆ ಉದಾ: ಪಂಪ: ಎರಡನೆಯದು ಮೌಲ್ಯವನ್ನು ಬರೆಯುವುದು ಮತ್ತು ಬದುಕುವುದು, ಅದಕ್ಕೆ ಹರಿಹರ ಉದಾಹರಣೆ. ಮೂರನೆಯದು ಮೌಲ್ಯವನ್ನು ಬರೆದು ಮೌಲ್ಯವನ್ನು ಬದುಕಿ ಮೌಲ್ಯವನ್ನೇ ಸಾಮಾಜಿಕ ಬದುಕಲ್ಲಿ ಆಚರಣೆಯಲ್ಲಿ ತರುವುದು. ಅದಕ್ಕೆ ಬಸವಣ್ಣನವರನ್ನು ಉದಾಹರಿಸುತ್ತಾರೆ. ಹೀಗೆ ಮೌಲ್ಯವನ್ನು ಸಾಹಿತ್ಯಿಕವಾಗಿ ಬರೆದು, ವೈಯಕ್ತಿಕವಾಗಿ ಬದುಕಿ ಸಾಮಾಜಿಕವಾಗಿ ಆಚರಣೆಯಲ್ಲಿ ತಂದವರಲ್ಲಿ ಡಾ.ಜಯದೇವಿ ತಾಯಿ ಲಿಗಾಡೆ ಕೂಡ ಒಬ್ಬರು. ಅವರ ಬದುಕಿನ ಉದ್ದೇಶ ಸ್ಪಷ್ಟವಾಗಿತ್ತು, ನೇರವಾಗಿತ್ತು. ಅವರ ನಿಧರ್ಾರಗಳೂ ನಿಚ್ಚಳವಾಗಿದ್ದವು. ಅದಕ್ಕೆ ಅನೇಕ ರೀತಿಯ ಕಷ್ಟಗಳ ಮಧ್ಯದಲ್ಲಿಯೂ ಸಾರ್ಥಕ ಬದುಕನ್ನು ಬದುಕಿದ ಅವರು ಲೇಸೆನಿಸಿಕೊಂಡು ಬದುಕಿದರು.
ವಸ್ತು ವ್ಯಾವೋಹದ ಆಧುನಿಕ ಜನರ ಮಧ್ಯ ಜಯದೇವಿ ತಾಯಿಯವರು ಶ್ರೀಮಂತಿಕೆಯಿದ್ದಾಗಲೂ ವಸ್ತು ನಿಮರ್ೋಹಿಗಳಾಗಿದ್ದರು. ಆಗರ್ಭ ಶ್ರೀಮಂತರಾಗಿದ್ದರೂ ಬಂಗಾರದ ಒಡವೆಗಳನ್ನು ಹೊಂದಿರದೆ ಕೈ-ಕೊರಳಲ್ಲಿ ರುದ್ರಾಕ್ಷಿ ಸರ ಧರಿಸಿದ್ದು ನೋಡಿದರೆ ಅವರ ಜೀವನದ ಸರಳತೆ ವಿದಿತವಾಗುತ್ತಿತ್ತು. ಅದರಲ್ಲೂ ಅವರಲ್ಲಿ ಸಂಗ್ರಹ ರೂಪದ ಹಣ ಕೂಡ ಇರುತ್ತಿರಲಿಲ್ಲ. ಕಲ್ಯಾಣದಿಂದ ಸೋಲಾಪೂರ. ಮುಂಬೈ ಹೀಗೆ ಊರಿಂದೂರಿಗೆ ಹೋದಾಗ ಟಿಕೇಟು ತೆಗಿಸಿ ಆಟೋಗೆಂದು ಹಣ ನೀಡಿ ಕಳುಹಿಸಿದರೆ, ಬಡವರು, ಭಿಕ್ಷುಕರು ಎದುರಾಗಿ ಭಿಕ್ಷೆ ಕೇಳಿದಾಗ ಇದ್ದ ಎಲ್ಲ ಹಣ ನೀಡಿ, ಬರಿಗೈಲಿ ಹೋಗಿ ಆಟೋದವನಿಗೆ ಮನೆ ಮುಂದೆ ನಿಲ್ಲಿಸಿ ಮನೆಯವರಿಂದ ಹಣ ಪಡೆದು ಕೊಟ್ಟ ಉದಾಹರಣೆಗಳಿಗೆ ಕೊರತೆಯಿಲ್ಲ. ಪ್ರಕೃತಿಯ ಸರಳತೆ, ದಾಸೋಹಭಾವ, ಅಹಂನಿರಸನ ಅವರ ಬದುಕಿನ ಮೂಲ ಸಿದ್ಧಾಂತವಾಗಿದ್ದವು.
ಮೂಲತಃ ಮಹಾರಾಷ್ಟ್ರದ ಸೊನ್ನಲಾಪುರ (ಸೊಲಾಪುರ)ದವರಾದ ಲಿಗಾಡೆತಾಯಿ ಮಂಡ್ಯದಲ್ಲಿ ಜರುಗಿದ 48ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷರಾಗಿದ್ದು ಕನ್ನಡದಲ್ಲಿ ಸಾವಿರದ ಪದಗಳು, ತಾಯಿಯ ಪದಗಳು, ತಾರಕ ತಮಬೂರಿ, ಬಂದೇವ ಕಲ್ಯಾಣಕ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ತ್ರಿಪದಿಯಲ್ಲಿ ಮಹಾಕಾವ್ಯ (ಶ್ರೀ ಸಿದ್ದರಾಮೇಶ್ವರ ಪುರಾಣ) ಬರೆದ ಮೊದಲ ಮಹಿಳೆ ಎಂಬ ಅಗ್ಗಳಿಕೆಗೆ ಪಾತ್ರರಾದ ತಾಯಿಯವರು ಶೂನ್ಯ ಸಂಪಾದನೆಯನ್ನೊಳಗೊಂಡತೆ ಅನೇಕ ವಚನಗಳನ್ನು ಮರಾಠಿಗೆ ಅನುವಾದಿಸಿ ಭಾಷಿಕ ಸಾಮರಸ್ಯ ಮೆರೆದ ಕನ್ನಡದ ಸಾಂಸ್ಕೃತಿಕ ರಾಯಭಾರಿಗಳು. ಏಕೀಕೃತ ಕನರ್ಾಟಕದ ಅಭಿವೃದ್ದಿಯಲ್ಲಿ ನಿಣರ್ಾಯಕ ಪಾತ್ರವಹಿಸಿದ ಮುತ್ಸದ್ದಿ ಮಹಿಳೆಯ. ಹೈದ್ರಾಬಾದ ಕನರ್ಾಟಕದ ವಿಮೋಚನೆ ಮತ್ತು ಕನರ್ಾಟಕ ಏಕೀಕರಣ ಒಳಗೊಂಡಂತೆ ಸಮಗ್ರ ಕನರ್ಾಟಕದ ಅಭಿವೃದ್ಧಿಗೆ ದುಡಿದ ಜಯದೇವಿ ತಾಯಿಯವರಿಗೆ ಮಹಾರಾಷ್ಟ್ರದಲ್ಲಿ ಗುರುತಿಸುವುದಿಲ್ಲ. ಕನರ್ಾಟಕದಲ್ಲಿ ಅವರ ನೆನಪೇ ಇಲ್ಲ. ಅತ್ಯಂತ ಸಾಮಾನ್ಯ ಬರಹಗಾರರಿಗೆ ಸಂದ ಗೌರವ, ನೆರವು ಅವರಿಗೆ ಬಂದಿಲ್ಲ. ಸೋಲಾಪೂರ ಕನರ್ಾಟಕ್ಕೆ ಸೇರಬೇಕೆಂಬ ಜಯದೇವಿ ತಾಯಿ ಲಿಗಾಡೆಯವರ ಹೋರಾಟ ಫಲಪ್ರದವಾಗದಾಗ ತಾವೇ 1980ರಲ್ಲಿ ಸೋಲಾಪೂರ ತೊರೆದು ಕನರ್ಾಟಕದ ಗಡಿಭಾಗ, ಬಸವಾದಿ ಶರಣರ ಕಾಯಕಭೂಮಿಯಾದ ಬಸವಕಲ್ಯಾಣದಲ್ಲಿ ಭಕ್ತಿಭವನ ಕಟ್ಟಿಕೊಂಡು ನೆಲೆಸಿದರು. ಕನ್ನಡ ಕೋಟೆ ಎಂಬ ಪ್ರಕಾಶನ ಸಂಸ್ಥೆ ತೆರೆದು, ಕನ್ನಡಕ್ಕಾಗಿ ದುಡಿಯುತ್ತ 1986ರ ಜುಲೈ 24ರಂದು ಕನ್ನಡ ನೆಲದಲ್ಲಿ ಕೊನೆಯುಸಿರೆಳೆದರು. ಜನ್ಮ ಶತಮಾನೊತ್ಸವ ಆಚರಿಸುವುದನ್ನೆ ಮರೆತು ನಮ್ಮ ಸಕರ್ಾರ ತಮ್ಮ ಆಂತರಿಕ ಕಲಹದಲ್ಲಿ ನಾಡು ನುಡಿ ಸಂಸ್ಕೃತಿಯ ಸಂವರ್ಧಕರನ್ನು ನಿರ್ಲಕ್ಷಿಸಿದಂತಾಗಿದೆ.
ಕನ್ನಡ ಸಾಹಿತ್ಯ, ಸಂಸೃತಿಯ ತವರುನೆಲವಾದ ಬಸವಕಲ್ಯಾಣದಲ್ಲಿರುವ ಅವರ ಸಮಾಧಿ (ಗದ್ದುಗೆ)ಯನ್ನು ಸ್ಮಾರಕ ಮಾಡುವ ಸೌಜನ್ಯವನ್ನು ಕೂಡ ನಮ್ಮ ಸಕರ್ಾರ ತೋರಿಸಲಿಲ್ಲ.
ಜಯದೇವಿ ತಾಯಿಯವರು ಕೇವಲ ಲೇಖಕಿ ಮಾತ್ರ ಆಗಿರದೇ ರಾಜ್ಯ - ರಾಜಕಾರಣಕ್ಕೂ ಚುಕ್ಕಾಣಿಯಾಗಿದ್ದರು.ಎಸ್. ನಿಜಲಿಂಗಪ್ಪ, ರಾಮಕೃಷ್ಣ ಹೆಗಡೆಯವರಂತಹ ಮುತ್ಸದ್ದಿ ಮುಖ್ಯಮಂತ್ರಿ ಒಳಗೊಂಡಂತೆ ಅನೇಕ ರಾಜಕಾರಣಿಗಳು, ಸಚಿವರು ಸಹ ಕನರ್ಾಟಕದ ಅಭಿವೃದ್ಧಿಯ ವಿಷಯದಲ್ಲಿ ಅವರ ಸಲಹೆ ಸೂಚನೆ ಪಡೆಯುತ್ತಿದ್ದರು. ಬಸವರಾಜ ಪಾಟೀಲ ಅಟ್ಟೂರ ಅವರು ಮಂತ್ರಿಯಾಗಲೂ ನೆರವಾಗಿ ಗಡಿಭಾಗಕ್ಕೆ ನ್ಯಾಯ ತಂದುಕೊಟ್ಟವರು. ಕನರ್ಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಉನ್ನತ ಶಿಕ್ಷಣಕ್ಕೆ ಕಾಯಕಲ್ಪ ನೀಡಿದರು. ಆದರೂ ಯಾವುದೇ ಪ್ರತಿಫಲಾಪೇಕ್ಷ ಇಲ್ಲದೇ ಸಮಷ್ಟಿ ಕಲ್ಯಾಣ ಬಯಸಿದರು. ಅಂಥವರನ್ನು ಗೌರವಿಸುವುದು ಸಮಸ್ತ ಕನ್ನಡಿಗರ ಜವಾಬ್ದಾರಿಯಾಗಿದೆ. ಲಿಗಾಡೆಯವರು ಹೊರಗೆ ಬೇರೆ ರಾಜ್ಯದಲ್ಲಿ ಇಷ್ಟೆಲ್ಲಾ ಕೆಲಸ ಮಾಡಿದರೆ ರಾಷ್ಟ್ರೀಯ ನಾಯಕತ್ವದ ಮನ್ನಣೆ ಸಿಗಬಹುದಿತ್ತು. ಗಡಿನಾಡು ಅನಾದರಕ್ಕೆ ಒಳಗಾಗುತ್ತದೆ ಎಂಬುದಕ್ಕೆ ಲಿಗಾಡೆಯವರೆ ಸಾಕ್ಷಿ ಎಂಬಂತಾಗಿದೆ. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು, ಕನರ್ಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಅಭಿವೃದ್ದಿ ಪ್ರಾಧಿಕಾರ,ಶರಣ ಸಾಹಿತ್ಯ ಪರಿಷತ್ತು, ಬಸವ ಸಮಿತಿ, ವೀರಶೈವ ಮಹಾಸಭೆ ಹೀಗೆ ಯಾವ ಸಂಘ ಸಂಸ್ಥೆಗಳು ನೆನಪಿಸಿಲ್ಲ. ಕೊನೆಗೆ ಅವರು ನೆಲೆಸಿದ ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಹ ಮೌನವಹಿಸಿದ್ದು ವಿಷಾದದ ಸಂಗತಿ.
ಈಗಲಾದರೂ ಸಕರ್ಾರ, ಸಂಘ ಸಂಸ್ಥೆಗಳು ಮುಂದೆ ಬಂದು ಡಾ.ಜಯದೇವಿ ತಾಯಿ ಲಿಗಾಡೆಯವರ ಜನ್ಮ ಶತಮಾನೋತ್ಸವ ಆಚರಿಸಲಿ. ಬಸವಕಲ್ಯಾಣದಲ್ಲಿರುವ ಅವರ ಸಮಾಧಿ ಸ್ಥಳವಾದ ಶಿದ್ಧಶೈಲ, ಅವರು ನೆಲೆಸಿದ ಭಕ್ತಿ ಭವನ ಸ್ಮಾರಕ ಮಾಡುವುದು, ಲಿಗಾಡೆಯವರ ಹೆಸರಲ್ಲಿ ಪ್ರತಿ ವರ್ಷ ಒಂದು ರಾಷ್ಟ್ರೀಯ ಮಹಿಳಾ ಸಾಹಿತ್ಯ ಪ್ರಶಸ್ತಿ ನೀಡುವುದು ಅಗತ್ಯವಾಗಿದೆ.
ಡಾ. ಬಸವರಾಜ ಬಲ್ಲೂರ
ಮೊ: 9242428179 /9738418468
E-mail :basavaballur@gmail.com

ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
ReplyDelete