ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು
ಹೀರೆಮಠ ಸಂಸ್ಥಾನ ಭಾಲ್ಕಿ,
ಜಿಲ್ಲಾ ಬೀದರ (ಕನರ್ಾಟಕ ರಾಜ್ಯ)
ಹೀರೆಮಠ ಸಂಸ್ಥಾನ ಭಾಲ್ಕಿ,
ಜಿಲ್ಲಾ ಬೀದರ (ಕನರ್ಾಟಕ ರಾಜ್ಯ)
ಕನರ್ಾಟಕದ ಒಂದು ಮೂಲೆಯಲ್ಲಿರುವ ಬೀದರ ಜಿಲ್ಲೆಯ ಭಾಲ್ಕಿಯ ಹಿರೇಮಠ ಸಂಸ್ಥಾನ ತನ್ನ ವಿಧಾಯಕವಾದ ಜನಪರ-ಜೀವಪರ ಕಾರ್ಯಗಳ ಮೂಲಕ ದಕ್ಷಿಣ ಭಾರತದ ಪ್ರತಿಷ್ಠಿತ ಮಠಗಳಲ್ಲಿ ಒಂದಾಗಿದೆ. ಸುಮಾರು ಎಂಟುನೂರು ವರ್ಷಕ್ಕೂ ಮೇಲ್ಪಟ್ಟ ಐತಿಹಾಸಿಕ ಪರಂಪರೆಯುಳ್ಳ ಈ ಮಠವು ಜನಪ್ರಿಯಗೊಂಡದ್ದು ನಡೆದಾಡುವ ದೇವರು ಕಾಯಕ ಪರಿಣಾಮಿಗಳೆಂದೇ ಹೆಸರಾಗಿದ್ದ ಡಾ. ಚನ್ನಬಸವಪಟ್ಟದ್ದೇವರಿಂದ. ಅವರ ಮುಂದಿನ ಪಟ್ಟಾಧಿಕಾರಗಳಾಗಿರುವ ಪೂಜ್ಯ ಡಾ|| ಬಸವಲಿಂಗ ಪಟ್ಟದ್ದೇವರು ಶ್ರೀ ಮಠದ ಸವರ್ಾಂಗಿಣ ಅಭಿವೃದ್ಧಿಗೆ ನಿಂತು, ಲಿಂಗಾಯತ ಧರ್ಮ (ಬಸವ ತತ್ವ ಆಧಾರಿತ)ಪ್ರಸಾರ, ಶಿಕ್ಷಣ, ಸಾಹಿತ್ಯ, ಕಲೆ, ಸಂಸ್ಕೃತಿಯ ವಿಕಾಸ ಮಾಡುತ್ತಲೇ ಸಾಮಾಜಿಕ, ಧಾಮರ್ಿಕ ಬೆಳವಣಿಗೆ ದುಡಿಯುತ್ತಿರುವರು. ಸಾಂಪ್ರದಾಯಿಕ, ಧಾಮರ್ಿಕ ಪರಂಪರೆಯ ಮಠವನ್ನು ಪ್ರಗತಿಪರ ಬಸವತತ್ವ ನಿಷ್ಠೆ ಮಠವಾಗಿಸಿದ ಕೀತರ್ಿ ಪೂಜ್ಯ ಶ್ರೀ ಡಾ|| ಬಸವಲಿಂಗ ಪಟ್ಟದ್ದೇವರಿಗೆ ಸಲ್ಲುತ್ತದೆ. ಸಾಮಾಜಿಕ ಸಮತೆ, ಧರ್ಮಸಹಿಷ್ಣುತೆ ಶ್ರೀಗಳ ಜೀವನ ಸಿದ್ಧಾಂತವಾಗಿದ್ದು, ದೀನ-ದಲಿತರಿಗೆ, ಬಡವರಿಗೆ, ಅನಾಥರಿಗೆ ವಿಧವೆಯರಿಗೆ, ಕಲಾವಿದರಿಗೆ, ಆಶ್ರಯ ನೀಡುವ ಮೂಲಕ ಜನತೆಯ ಮಠವಾಗಿಸಿದ್ದಾರೆ. ಅಂತೆಯೇ ಖ್ಯಾತ ಸಂಶೋಧಕರಾದ ಡಾ|| ಎಂ.ಎಂ. ಕಲ್ಬುಗರ್ಿಯವರು ಒಂದು ಕಡೆ ಬರೆಯುತ್ತ ನಾಡಿನ ಗುರುಸ್ಥಲ ಮಠಗಳಿಗೆ ಭಾಲ್ಕಿ ಮಠ ಮಾದರಿ ಹಾಗೂ ವಿರಕ್ತ ಮಠಗಳಿಗೆ ಇಳಕಲ್ ಮಠ ಮಾದರಿಎಂದಿರುವುದು ಅಕ್ಷರಶ: ಸತ್ಯವಾಗಿದೆ.
ಡಾ|| ಬಸವಲಿಂಗ ಪಟ್ಟದ್ದೇವರು:
ಕೇವಲ ಉತ್ತಮ ವಿದ್ಯಾಭ್ಯಾಸಕ್ಕೆಂದೇ ಭಾಲ್ಕಿಯ ಹಿರೇಮಠಕ್ಕೆ ಆಗಮಿಸಿ ಸಾತ್ವಿಕ ಸಜ್ಜನಿಕೆ, ಸರಳತೆ ಮೈಗೂಡಿಸಿಕೊಂಡ ಕಾರಣಕ್ಕೆ ಅದೇ ಮಠದ ಪೀಠಾದಿಪತಿಯಾದವರು ಪೂಜ್ಯ ಶ್ರೀ.ಡಾ.ಬಸವಲಿಂಗ ಪಟ್ಟದ್ದೇವರು ಮೂಲತ: ಮೃದು ಸ್ವಭಾವದ ಮಾತ್ರಹೃದಯದವರಾಗಿದ್ದಾರೆ. ಜನರು ಕಷ್ಟದಲ್ಲಿದ್ದಾಗ ಇವರ ಕಣ್ಣಲ್ಲಿ ನೀರು ಬರುತ್ತದೆ. ಮಠಾಧಿಪತಿಗಳಾದರೂ ಅಹಂ, ಸುಳಿಯದ ದಾಸೋಹ ಜೀವಿಗಳು. ಸ್ವಾಮಿಗಳಾದರೂ ಪೂಜೆಯನ್ನೆ ಹೇಳದೇ ಕಾಯಕ ತತ್ವವನ್ನು ಹೇಳುವರು. ಜನರೇ ಮಠಕ್ಕೆ ಬರಬೇಕೆಂದು ಆಪೇಕ್ಷ ಮಾಡದೇ ಜನತೆಯತ್ತ ಮಠ ಒಯ್ದವರು. ಹಿರೇಮಠ ಎಂದರೆ ಅದು ಜನಸತ್ತೆಯ ಭಕ್ತರ ಮಠ. ಹಾಗಾಗಿ ಶ್ರೀಗಳಿಗೆ ಧರ್ಮ ಸಮಾಜ ಎರಡು ಕಣ್ಣು ಒಂದೇ ದೃಷ್ಠಿ,
ಅನೇಕ ಮಠಾಧೀಶರಿಗೆ ಪೀಠದಿಂದ ಗೌರವ ಬರುತ್ತದೆ. ಆದರೆ ಪೂಜ್ಯ ಶ್ರೀ ಡಾ|| ಬಸವಲಿಂಗ ಪಟ್ಟದ್ದೇವರಿಂದ ಪೀಠಕ್ಕೆ ಗೌರವಸಂದಿದ್ದು ಅವರ ರಚನಾತ್ಮಕ ಕಾರ್ಯದಿಂದಲೇ. ಅವರು ಪೀಠಾಧಿಪತಿಗಳಾಗಿ 25 ವರ್ಷ ಸಂದಿವೆ. ಅದರ ಸವಿನೆನಪಿಗಾಗಿ ಭಕ್ತರು ಪಟ್ಟಾಧಿಕಾರದ ಬೆಳ್ಳಿ ಹಬ್ಬ(2010) ಆಚರಿಸಿದ್ದು ಔಚಿತ್ಯ ಪೂರ್ಣವಾಗಿದೆ.
ಮಾನವೀಯತೆಯ ಆಗರ:
ಪೂಜ್ಯ ಶ್ರೀ ಡಾ|| ಬಸವಲಿಂಗ ಪಟ್ಟದ್ದೇವರು ದೀನ ದಲಿತರ, ಬಡವರ ನಿರ್ಗತಿಕರ ಆಶಾಕಿರಣವಾಗಿದ್ದಾರೆ. ಹೆತ್ತವರಿಗೆ ಬೇಡವಾಗಿ ತಿಪ್ಪೆಪಾಲಾದ ಹತ್ತಾರು ಅನಾಥ ಮಕ್ಕಳನ್ನು ಸಾಕುತ್ತಿದ್ದಾರೆ. ಹಾನಗಲ್ ಕುಮಾರೇಶ್ವರ ಉಚಿತ ಪ್ರಸಾದ ನಿಲಯದಲ್ಲಿ ಯಾವುದೇ ಜಾತಿಭೇದ ಮಾಡದೇ ಸುಮಾರು 500 ಮಕ್ಕಳಿಗೆ ಅನ್ನ, ಅಕ್ಷರ ದಾಸೋಹ ನೀಡುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಪ್ರತಿಭಾವಂತ ಬಡ ಮಕ್ಕಳಿಗಾಗಿ ಬೀದರದಲ್ಲಿ ಡಾ|| ಚನ್ನಬಸವ ಪಟ್ಟದ್ದೇವರ ಪ್ರಸಾದನಿಲಯ ತೆರೆದಿದ್ದಾರೆ. ಅನೇಕ ವಿಕಲಚೇತನರಿಗೆ, ವಿಧೆಯರಿಗೆ ಆಶ್ರಯ ನೀಡಿದ್ದಾರೆ. ಜೊತೆಗೆ ಸಾಮಾಜಿಕ ಬದುಕಲ್ಲಿ ಮಂಗಳ ಕಾರ್ಯಗಳಿಂದ ವಂಚಿತರಾದ ವಿಧವಾ ಸ್ತ್ರೀಯರಿಗೆ ಉಡಿ ತುಂಬಿ ಗೌರವಿಸಿದ್ದಾರೆ. ಶ್ರೀಮಠದಲ್ಲಿ ದಲಿತರಿಗೆ ಪ್ರವೇಶ ನೀಡಿದ್ದಾರೆ. ಹೀಗಾಗಿ ಹಲವಾರು ಜೀವಕಾರುಣ್ಯದ ಕೆಲಸಗಳಿಂದ ಅವರು ಮಾನವೀಯತೆಯ ಆಗರವಾಗಿದ್ದಾರೆ.
ಶಿಕ್ಷಣ ತಜ್ಞರು:
ಶಿಕ್ಷಣವೇ ಶಕ್ತಿ ಎಂದು ತಿಳಿದು, ಶಿಕ್ಷಣ ಮನುಷ್ಯರ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂಬ ಆಶಯದಿಂದ ಪೂಜ್ಯ ಶ್ರೀ ಡಾ|| ಬಸವಲಿಂಗ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಪೀಠ (1992) ಆರಂಭಿಸಿ ಆಮೂಲಕ ಸುಮಾರು 35 ಅಂಗ ಸಂಸ್ಥೆಗಳಿಂದ ಗಡಿಭಾಗದಲ್ಲಿ ಕನ್ನಡ ಮಾಧ್ಯಮ ಶಾಲೆ ತೆರೆದು ಹಳ್ಳಿಯ ಜನತೆಗೆ ಗುಣಾತ್ಮಕ ಶಿಕ್ಷಣ ನೀಡುತ್ತಿದ್ದಾರೆ. ಇಂದು ಸುಮಾರು ಹತ್ತುಸಾವಿರ ವಿದ್ಯಾಥರ್ಿಗಳು ಓದುತ್ತಿದ್ದಾರೆ. ಒಂದು ಸಾವಿರ ಶಿಕ್ಷಕರು ಕಾರ್ಯನಿರತರಾಗಿದ್ದಾರೆ. ಸಂಸ್ಕಾರ ಸಹಿತ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು.
ಸಾಮಾಜಿಕ ಸಾಮರಸ್ಯದ ಹರಿಕಾರರು:
ಧಮರ್ಾಧಿಕಾರಿಗಳಾದರೂ ಜಾತ್ಯತೀತರು, ಶ್ರೀಮಠದಲ್ಲಿ ಎಲ್ಲ ಜನಾಂಗಕ್ಕೂ ಮುಕ್ತ ಅವಕಾಶ ನೀಡಿದ್ದಾರೆ. ಅಂತಜರ್ಾತಿ ಮದುವೆ ಮತ್ತು ಉಚಿತ ಸಾಮೂಹಿಕ ಕಲ್ಯಾಣ ಮಹೋತ್ಸವೇರ್ಪಡಿಸಿರುವರು. ಅಸ್ಪ್ರಶ್ಯ ಲಿಂಗಾಯತರೆಂದೇ ಕರೆಸಿಕೊಳ್ಳುವ ದಲಿತ ಮೂಲದ ಉರಿಲಿಂಗ ಪೆದ್ದಿ ಮಠಾಧೀಶರ ರಾಜ್ಯಮಟ್ಟದ ಸಮಾವೇಶ ಆಯೋಜಿಸಿದ ಕೀತರ್ಿ ಪೂಜ್ಯ ಶ್ರೀ ಡಾ|| ಬಸವಲಿಂಗಪಟ್ಟದ್ದೇವರಿಗೆ ಸಲ್ಲುತ್ತದೆ. ದೆಹಲಿಯಲ್ಲಿ ದಲಿತ ವರ್ಗದ ಜಾಟವಾ ಜನಾಂಗಕ್ಕೆ ಲಿಂಗದೀಕ್ಷೆ ನೀಡಿದ್ದಾರೆ. ಹೀಗೆ ಆರೋಗ್ಯವಂತ ಸಮಾಜ ಕಟ್ಟಲು ಧರ್ಮ ಸಹಿಷ್ಣುತೆಯ ಮೂಲಕ ಸಾಮಾಜಿಕ ಸಾಮರಸ್ಯ ಮೇರೆದವರು.
ಪರಿಸರ ಪ್ರೀತಿ:
ಪರಿಸರ ಸಂರಕ್ಷಣೆ ಎಂದರೆ ಜೀವಜಗತ್ತಿನ ಸಂರಕ್ಷಣೆ. ಮಾನವ ಜೀವನ ವಿಕಾಸದಲ್ಲಿ ಪರಿಸರದಲ್ಲಿ ಪರಿಸರವೇ ಮೇಲು. ಆದ್ದರಿಂದ ಕಲುಷಿತ ವಾತಾವರಣದಲ್ಲಿ ಪೂಜ್ಯ ಶ್ರೀ ಡಾ|
ಬಸವಲಿಂಗ ಪಟ್ಟದ್ದೇವರ ಸಸಿ ನೆಡುವ ಕಾರ್ಯಕ್ರಮ ಪ್ರತಿ ವರ್ಷ ಮಾಡುತ್ತ ಪರಿಸರ ಪ್ರೀತಿ ಮೆರೆಯುತ್ತಿದ್ದಾರೆ.
ಬಸವಲಿಂಗ ಪಟ್ಟದ್ದೇವರ ಸಸಿ ನೆಡುವ ಕಾರ್ಯಕ್ರಮ ಪ್ರತಿ ವರ್ಷ ಮಾಡುತ್ತ ಪರಿಸರ ಪ್ರೀತಿ ಮೆರೆಯುತ್ತಿದ್ದಾರೆ.
ರೈತ ಮಿತ್ರ:
ಕೋಟಿ ವಿದ್ಯಾಗಿಂತ ಮೇಟಿ ವಿದ್ಯೆಯೇ ಮೇಲು ಎಂಬುದನ್ನು ಪೂಜ್ಯ ಶ್ರೀ ಡಾ|| ಬಸವಲಿಂಗ ಪಟ್ಟದ್ದೇವರು ಅರಿತು ರೈತ ಮೇಳ, ಕೃಷಿ ಸಂಬಂಧಿ ವಿಚಾರ ಸಂಕಿರಣವೇರ್ಪಡಿಸಿ ಎಲ್ಲ ತತ್ವಗಳಿಗೂ ನೇಗಿಲ ತತ್ವವೇ ಮೂಲವೆಂದು ಹೇಳಿ ರೈತಮಿತ್ರರಾಗಿದ್ದಾರೆ.
ಸಂಸ್ಕೃತಿ ಚಿಂತಕರು:
ಧರ್ಮಬೀರುವಾದ ಪೂಜ್ಯ ಶ್ರೀ ಡಾ|| ಬಸವಲಿಂಗಪಟ್ಟದ್ದೇವರು ಕಲಾರಾಧಕರೂ ಹೌದು. ಶ್ರೀಮಠದ ಮೂಲಕ ನಾಟಕೋತ್ಸವ, ನಗೆ ಹಬ್ಬ, ವಚನ ಕಂಠಸ್ಪಧರ್ೆ ನಡೆಸುವರು. ಸಂಗೀತ ಶಾಲೆ ಆರಂಭಿಸಿದ್ದಾರೆ. ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ವ್ಯಕ್ತಿತ್ವ ವಿಕಾಸಕ್ಕೆ ದುಡಿಯುತ್ತಿದ್ದಾರೆ. ಪ್ರತಿವರ್ಷ ಉತ್ತಮ ಕಲಾವಿದರಿಗೆ, ಓದುಗರಿಗೆ, ಬರಹಗಾರರಿಗೆ, ಉತ್ತೇಜನ ಪೂರಕವಾಗಿ ಡಾ|| ಚನ್ನಬಸವ ಪಟ್ಟದ್ದೇವರ ಪ್ರಶಸ್ತಿ ಪುರಸ್ಕಾರ ನೀಡುವರು. ಹೀಗೆ ವಿಭಿನ್ನ ಆಯಾಮದ ಮೂಲಕ ಶ್ರೀಗಳು ಸಂಸ್ಕೃತಿ ಚಿಂತಕರಾಗಿದ್ದಾರೆ.
ಕನ್ನಡ ಜಂಗಮ:
ಬಹುದಿನದಿಂದಲೂ ಭಾಲ್ಕಿಮಠವನ್ನು ಕನ್ನಡ ಮಠವೆಂದೇ ಕರೆಯುವರು. ಹಾಗೇ ಪೂಜ್ಯ ಶ್ರೀ ಡಾ|| ಬಸವಲಿಂಗ ಪಟ್ಟದ್ದೇವರು ಮಾತೃ ಭಾಷೆಯಿಂದ ಮಾತ್ರ ಉತ್ತಮ ಗ್ರಹಿಕೆ ಸಾಧ್ಯವೆಂದು ಪ್ರತಿಪಾದಿಸುತ್ತಲೇ ಇಂಗ್ಲೀಷ ಮಾಧ್ಯಮ ಶಿಕ್ಷಣದ ವ್ಯಾಪಾರೀಕರಣದ ಮಧ್ಯೆ ಕನ್ನಡ ಮಾಧ್ಯಮ ಶಿಕ್ಷಣ ನೀಡಿ ಅದನ್ನು ಮಾನವೀಕರಣಗೊಳಿಸಿ ಕನ್ನಡ ಜಂಗಮರಾಗಿದ್ದಾರೆ.
ಬಸವತತ್ವ ಪ್ರಸಾರಕರು:
ಆಧುನಿಕ ಜಗತ್ತಿಗೆ ಬಸವತತ್ವ ಅವಶ್ಯಕವಾದಂತೆ ಅದು ವಿಶ್ವಮಾನ್ಯವೂ ಆಗಿದೆ. ಅದು ಎಲ್ಲ ಕಡೆ ಪಸರಿಸಬೇಕು ಎಂಬ ಆಶಯದಿಂದ ಬಸವತತ್ವ ಪ್ರಸಾರಕ್ಕಾಗಿ ಆಂಧ್ರ ಮತ್ತು ಮಹಾರಾಷ್ಟ್ರಗಳಲ್ಲಿ ಬಸವತತ್ವ ಸಮಾವೇಶ, ಸಮ್ಮೇಳನ ಆಯೋಜಿಸಿದ್ದಾರೆ. ತೆಲುಗು ಮರಾಠಿಯಲ್ಲಿ ಬಸವತತ್ವ ಕುರಿತು ಹಲವಾರು ಕೃತಿಗಳನ್ನು ಶ್ರೀಮಠದಿಂದ ಪ್ರಕಟಿಸಿದ್ದಾರೆ.
ವ್ಯಕ್ತಿತ್ವ ವಿಕಾಸ:
ಆಧುನಿಕತೆ ಹೆಚ್ಚಾದಂತೆ ಮನುಷ್ಯರು ಯಾಂತ್ರಿಕವಾಗುತ್ತಿರುವುದರಿಂದ ವ್ಯಕ್ತಿಯ ಒಳಹೊರಗಿನ ಶುದ್ಧಿಕರಿಸಿಕೊಳ್ಳಬೇಕೆಂಬುದು ಪೂಜ್ಯ ಶ್ರೀ ಡಾ|| ಬಸವಲಿಂಗ ಪಟ್ಟದ್ದೇವರ ಆಶಯ. ಅದಕ್ಕಾಗಿ ಮಕ್ಕಳಿಗಾಗಿ ಬೇಸಿಗೆ ರಜಾ ದಿನಗಳಲ್ಲಿ ಮತ್ತು ಪ್ರಜ್ಞಾವಂತ ನಾಗರಿಕರಿಗಾಗಿ ಶ್ರಾವಣ ವಚನ-ಪ್ರವಚನ, ವಿಶೇಷ ಉಪನ್ಯಾಸ ಶರಣ ಸಂಗಮ ಮೊದಲ್ಗೊಂಡು ಬಸವ ಧರ್ಮ ಪ್ರಸಾರ ಶಿಬಿರಗಳ ಮೂಲಕ ವ್ಯಕ್ತಿತ್ವ ವಿಕಾಸಕ್ಕೆ ನಾಂದಿ ಹಾಡಿರುವರು.
ಪುಸ್ತಕ ಸಂಸ್ಕೃತಿ:
ಮಾಹಿತಿ ತಂತ್ರಜ್ಞಾನದಿಂದಾಗಿ ಪುಸ್ತಕ ಜಗತ್ತು ಹಳೆದಾಗಿ ಹಾಳಾಗುತ್ತಿದೆ. ಆದ್ದರಿಂದ ಬಸವಧರ್ಮ ಪ್ರಸಾರ ಸಂಸ್ಥೆ ಎಂಬ ಪ್ರಕಾಶನದ ಮೂಲಕ ಪೂಜ್ಯ ಶ್ರೀ ಡಾ|| ಬಸವಲಿಂಗ ಪಟ್ಟದ್ದೇವರು ನಾಡಿನ ವಿದ್ವಾಂಸರಿಂದ ಮೌಲಿಕ ಕೃತಿಗಳನ್ನು ಬರೆಸಿ ಪ್ರಕಟಿಸುವ ಮೂಲಕ ಪುಸ್ತಕ ಸಂಸ್ಕೃತಿ ಬೆಳೆಸುತ್ತಿದ್ದಾರೆ.
ಸೃಜನಶೀಲ ಸಾಹಿತಿ:
ಮಾನವತಾವಾದವನ್ನು, ವಿಚಾರವಾದವನ್ನು ಬಿತ್ತುವ ಬಹುಮುಖ್ಯ ಮಾಧ್ಯಮವೆಂದರೆ ಸಾಹಿತ್ಯ. ಹಾಗಾಗಿ ಪೂಜ್ಯ ಶ್ರೀ ಡಾ|| ಬಸವಲಿಂಗ ಪಟ್ಟದ್ದೇವರ ಹಲವಾರು ವೈಜ್ಞಾನಿಕ ಮನೋಭಾವದ, ವೈಚಾರಿಕ ನೆಲೆಗಟ್ಟಿನ ಹಲವಾರು ಸೃಜನಶೀಲ ಲೇಖನಗಳ ಪುಸ್ತಕ ಬರೆದಿರುವರು. ಆ ಪುಸ್ತಕಗಳ ಜನಪ್ರೀಯತೆ ಎಷ್ಟೆಂದರೆ, ಹಿಂದಿ, ಮರಾಠಿ, ತೆಲುಗು ಭಾಷೆಗಳಿಗೂ ಅನುವಾದವಾಗಿ ದ್ವಿತೀಯ, ತೃತೀಯ ಮುದ್ರಣಗಳನ್ನು ಕಂಡಿವೆ.
ವಚನ ವಿಶ್ವವಿದ್ಯಾಲಯ:
ಬಸವ ತತ್ವ ಕೇವಲ ಬೋಧನೆ ತತ್ವವಲ್ಲ. ಅದು ಬದುಕಿನ ತತ್ವ ಬಸವಧರ್ಮ ಆಚರಣೆಯ ಧರ್ಮ. ಅದರ ಅಂತಃಶಕ್ತಿಯಾದ ವಚನ ಸಾಹಿತ್ಯ ಜೀವ ಕಾರುಣ್ಯದಿಂದ ಕೂಡಿದೆ. ಅದರ ವ್ಯಾಪಕ ಅಧ್ಯಯನವಾಗಬೇಕು. ಬಹುಮುಖಿ ಅಂತರಶಿಸ್ತಿಯ ಸಂಶೋಧನಾ ಅಧ್ಯಯನವಾಗಬೇಕು. ಈ ದಿಸೆಯಲ್ಲಿ ಪೂಜ್ಯ ಶ್ರಿ ಡಾ|| ಬಸವಲಿಂಗ ಪಟ್ಟದ್ದೇವರು ವಚನ ವಿಶ್ವವಿದ್ಯಾಲಯವೊಂದು ಆರಂಭಿಸಲು ತೀಮರ್ಾನಿಸಿದ್ದಾರೆ. ಬಸವಾದಿ ಶರಣರ ಕಾಯಕ ನೆಲವಾದ, ಬಸವಕಲ್ಯಾಣದಲ್ಲಿ ತಮ್ಮ ಪಟ್ಟಾಧಿಕಾರದ ಬೆಳ್ಳಿ ಹಬ್ಬಕ್ಕೆ ಬಂದ ರೂಪಾಯಿ 25ಲಕ್ಷ ಹಮ್ಮಿಣಿ ಹಣದಿಂದ ಅದಕ್ಕೆ ಬೇಕಾಗುವ ಸೂಕ್ತ ಭೂಮಿ ಖರಿದಿಸಿದ್ದಾರೆ.
ಕೀತರ್ಿ ಕಳಸ:
ಬಸವತತ್ವ ಪ್ರಸಾರ ಸಮಾಜ ಸೇವೆ, ಶೈಕ್ಷಣಿಕ ಅಭಿವೃದ್ಧಿ, ಕನ್ನಡತ್ವದ ವಿಕಾಸ, ಹೀಗೆ ಹಲವಾರು ವಿಧಾಯಕ ಕಾರ್ಯಗಳ ಮೂಲಕ ಗಂಧದ ಕೊರಳಂತೆ ತಮ್ಮನ್ನು ಸವೇಸಿಕೊಂಡಿರುವ ಪೂಜ್ಯ ಶ್ರೀ ಡಾ|| ಬಸವಲಿಂಗ ಪಟ್ಟದ್ದೇವರು ಪ್ರಚಾರ ಪ್ರೀಯತೆಯಿಂದ ದೂರ ನಿಂತು, ಮೌನ ಸಾಧನೆಯಲ್ಲಿದ್ದಾರೆ. ಅದಾಗಿಯೂ ಇವರ ಸದ್ದಿಲ್ಲದ ಸತ್ಕ್ರಿಯೆಗಳಿಗೆ ಅರಸಿ ಬಂದ ಪ್ರಶಸ್ತಿ ಗೌರವಗಳು ನೂರಾರು. ಅದರಲ್ಲಿ ಮುಖ್ಯವಾಗಿ ಗುಲಬಗರ್ಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ ಪದವಿ, ಸುವರ್ಣ ಕನರ್ಾಟಕ ಏಕೀಕರಣ ಪುರಸ್ಕಾರ, ರಮಣ ಶ್ರೀ ಪ್ರಶಸ್ತಿ, ಕಲ್ಯಾಣ ಬಸವಶ್ರೀ ಪ್ರಶಸ್ತಿ, ಅಲ್ಲಮ ಪ್ರಭು ಸಿದ್ಧ ಸಂಸ್ಥಾನ ಮಠದಿಂದ ಕನರ್ಾಟಕ ರಾಜ್ಯೋತ್ಸವ ಪ್ರಶಸ್ತಿ, ಸುವರ್ಣ ಕನರ್ಾಟಕ ರತ್ನ ಪ್ರಶಸ್ತಿ, ಸುರಭಿ ಪ್ರಶಸ್ತಿ ಹೀಗೆ ಹಲವಾರು ಗೌರವ ಪುರಸ್ಕಾರಗಳು ಬಂದಾಗ ಬಯಸಿ ಬಂದದ್ದು ಅಂಗಭೋಗ, ಬಯಸದೇ ಬಂದದ್ದು ಲಿಂಗಭೋಗ ಎಂಬಂತೆ ನಿಲರ್ಿಪ್ತ ಭಾವದಿಂದ ಸ್ವೀಕರಿಸಿ ಜನತೆಗೆ ಆದರ್ಶ ಪ್ರಾಯರಾಗಿ ನಾಡಿಗೆ ಕಳಸ ಪ್ರಾಯವಾಗಿದ್ದಾರೆ.
- ಡಾ. ಬಸವರಾಜ ಬಲ್ಲೂರ ಬೀದರ
9738418468/9242440379
- ಡಾ. ಬಸವರಾಜ ಬಲ್ಲೂರ ಬೀದರ
9738418468/9242440379
No comments:
Post a Comment