ಕನ್ನಡ ಉತ್ಸವ
ಕನ್ನಡ' ಎಂಬ ಪದವೇ ಅಪ್ಯಾಯಮಾನವಾದದ್ದು, ನಾಡು, ನುಡಿ, ಜಲ, ಜನ, ಜನಾಂಗ, ಧರ್ಮ-ಸಂಸ್ಕೃತಿಯನ್ನು ಪ್ರತಿನಿಧಿಸುವ 'ಕನ್ನಡ' ಕನ್ನಡಿಗರ ಬದುಕು ಹೌದು. ಆದ್ದರಿಂದ ಇದು ಕನ್ನಡಿಗರ ಉತ್ಸವ ಕನ್ನಡಿಗರ ಸಂಭ್ರಮದ ದಿನಗಳವು. ವರ್ಷದ ಆರಂಭದ ದಿನದಿಂದ ಹಿಡಿದು ಈವರೆಗೆ ಉತ್ಸಾಹವೇ ಉತ್ಸಾಹ. ಕನ್ನಡಿಗರ ಸ್ವಾಭಿಮಾನ ನೆಲ 'ಬೆಳಗಾವಿ'ಯಲ್ಲಿ ಜರುಗಿದ ವಿಶ್ವಕನ್ನಡ ಸಮ್ಮೇಳನ. ಕನ್ನಡಕ್ಕೆ ಎಂಟನೆಯ ಜ್ಞಾನಪೀಠ ಪ್ರಶಸ್ತಿ ಪುರಸ್ಕಾರ, ಕಲ್ಯಾಣ ಕನರ್ಾಟಕದವರಿಗೆ ಶ್ರೀ ವಿಜಯ ಪುರಸ್ಕಾರ ಸೇರಿದಂತೆ ಹಲವಾರು ಸಾರಹಗಳು ಕನ್ನಡಿಗರನ್ನು ಪುಳಕಗೊಳಿಸಿವೆ. ಕ್ನನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಘೋಷಣೆಯಾಗಿ ವರುಷಗಳು ಕಳೆದಿದ್ದರೂ ಈ ಸಂಬಂಧದ ಚಿಂತನೆಗಳು ಹರಳಾಗುತ್ತಿಲ್ಲ. ಜೊತೆಗೆ ಕನ್ನಡಿಗರ ಬದುಕಿನ ಚಿಂತನೆಕೂಡ ಈ ಸಂದರ್ಭದ ಜರೂರಿಗಳಲ್ಲಿ ಒಂದಾಗಿದೆ.
ಕನ್ನಡಿಗರ ಅಭಿವೃದ್ಧಿಯಾಗದೇ ಕನ್ನಡದ ಅಭಿವೃದ್ಧಿ ಅಸಾಧ್ಯವೆಂಬುದು ಮತ್ತೆಮತ್ತೆ ಮನವರಿಕೆ ಮಾಡಿಕೊಳ್ಳಬೇಕಾಗಿದೆ. ಕ್ನನಡ ಭಾಷೆ-ಸಾಹಿತ್ಯ್ಕಕೂ ಕನ್ನಡಿಗರ ಬದುಕಿಗೂ ಅನನ್ಯ ಸಂಬಂಧವಿದೆ. ಈ ಬೆಸುಗೆಯ ಕೆಲಸವನ್ನು ಬಸವಾದಿ ಶರಣರು ಮಾಡಿದರು. ಆದ್ದರಿಂದ ಕ್ನನಡದ ಆದ್ಯರೆಂದರೆ ವಚನಕಾರರೇ. ಅವರು ಕ್ನನಡಕ್ಕೆ ದೇಶಿಯ ದೀಕ್ಷೆ ನೀಡಿದರು. ಹಿಂದೆ ಮಾರ್ಗದೇಶಿ ಸಮನ್ವಯದ, ಪಂಡಿತ ಸಮ್ಮುಖ-ಜನಸಮ್ಮೂಖ ದೃಷ್ಟಿಯ ನಿಲುವಿನಿಂದಾಗಿ ಕನ್ನಡಕ್ಕೆ ಸಿಗಬೇಕಾಗಿದ್ದು ಗೌರವ ಸಿಗಲಿಲ್ಲ. ಅದಕ್ಕೆ ಇನ್ನೊಂದು ಕಾರಣವೆಂದರೆ ಅಂದು ದೇವರ, ಧರ್ಮದ ಭಾಷೆ, ವ್ಯವಹಾರದ ಭಾಷೆ, ಪುಸ್ತಕದ ಭಾಷೆ, ಪಾಂಡಿತ್ಯದ ಭಾಷೆ, ಬದುಕಿನ ಭಾಷೆ-ಹೀಗೆ ಎಲ್ಲವೂ ಬೇರೆ ಬೇರೆಯಾಗಿದ್ದವೂ ಆದರೆ ವಚನಕಾರರಿಗೆ ಎಲ್ಲದಕ್ಕೂ ಕನ್ನಡ ಒಂದೇ ಭಾಷೆ, ಹಿಂದೆ ಕಾವ್ಯದ ವಸ್ತುಕೂಡ ಪರಕೀಯ ಸಿದ್ದ ಮಾದರಿಯಾಗಿತ್ತು. ವಚನಕಾರರಿಗೆ ಬದುಕೆ ಕಾವ್ಯ (ವಚನ)ದ ಕನ್ನಡ ವಸ್ತುವಾಗಿತ್ತು.
ದೇವ ಭಾಷೆಯೆಂದೇ ಬಿಂಬಿತವಾಗಿದ್ದ, ಸಂಸ್ಕೃತಕ್ಕೆ ಪಯರ್ಾಯವಾಗಿ ಶರಣರು ಕನ್ನಡವನ್ನು ಕಟ್ಟಿದರು. ಆ ಮೂಲಕ ಕನ್ನಡಿಗರ ಬದುಕನ್ನು ಕಟ್ಟಿದರು. ಕಾಯಕಕ್ಕೆ ಗೌರವ ತಂದುಕೊಟ್ಟು ಪೂಜೆ ಕಾಯಕವಲ್ಲ, ಕಾಯಕವೇ ಪೂಜೆ ಎಂದು ಸಾರುವ ಮೂಲಕ ಸಾಹಿತ್ಯ ರಚನೆಗೆ ತಮ್ಮ ತಮ್ಮ ವೃತ್ತಿಯ ಪರಿಕರಗಳನ್ನು ಆಧ್ಯಾತ್ಮಿಕ ಚಿಂತನೆಗೆ ಪರಿಭಾಷೆಯಾಗಿ, ಪ್ರತಿಮೆ, ರೂಪಕ, ಸಂಕೇತಗಳು ಬಳಕೆ ಬಳಸಿ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದರು. ನಮ್ಮ ಹಾಗೆ ಅವರು ನವೆಂಬರ್ ತಿಂಗಳು ಕನ್ನಡಿಗರಾಗಿರದೇ ಯುಗದ ಕ್ನನಡಿರಾಗಿ, ಉತ್ಸಾಹಿ ಕನ್ನಡಿರಾಗಿದ್ದರು. ಪ್ರತಿಯೊಬ್ಬರ ಕೈಗೆ ಕಾಯಕ(ಕೆಲಸ). ಕಾಯಕದ ಅನುಭವವೇ ಸಾಹಿತ್ಯದ ಹೀಗಾಗಿ ಅಂದು ಕನ್ನಡ ಅನ್ನದ ಭಾಷೆಯಾಗಿ ಹಾಗೂ ಭಾಷೆ ಬದುಕು ಸಮೃದ್ಧವಾಗಿದ್ದವು, ಆ ಸಮೃದ್ಧಿತನ ತುಂಬಲು ನಮಗೆ ಇವತ್ತಿಗೂ ಆಗುತ್ತಿಲ್ಲ.
ನಮ್ಮ ಜನರ ನಿರಾಸಕ್ತಿಯೋ ಅಥವಾ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯೊ ನಾಡು-ನುಡಿ, ನೆಲ, ಜಲ, ಹೀಗೆ, ಕನ್ನಡಿಗರ ಬದುಕಿನ ಪ್ರಶ್ನೆ ಒಂದಾಗಲಿಲ್ಲ. ನಿರವತೆಯ ಮೌನ ಹುಟ್ಟಿಕೊಳ್ಳುತ್ತದೆ. ಜನಪ್ರತಿಗಳು ನುಡಿಯ ಬಗ್ಗೆ ಸೊಲ್ಣೆತ್ತಿದರೆ ಪರ ಭಾಷೆಯ ಮತ ಕಳೆದುಕೊಳ್ಳಬಹುದೆಂಬ ಒಳ ಆತಂಕ ಹೊಂದಿದ್ದಾರೆ. ಒಬ್ಬ ಪರಭಾಷೆಯ ಐ.ಎ.ಎಸ್, ಅಧಿಕಾರಿ ಕನರ್ಾಟಕಕ್ಕೆ ವರ್ಗವಾಗಿ ಬಂದರೆ 2-3 ತಿಂಗಳಲ್ಲಿ ಕನ್ನಡ ಕಲಿತು ವ್ಯವಹರಿಸುತ್ತಾನೆ. ಜನರ ಭಾವನೆಗೆ ಸ್ಪಂದಿಸುತ್ತಾನೆ. ಆದರೆ ನಮ್ಮ ಜನಪ್ರತಿನಿಧಿಗಳು, ನಾಯಕರು ಕನ್ನಡ ನೆಲದವರಾದಗೂ ಕನ್ನಡ ಬಾರದವರಾಗಿದ್ದಾರೆ. ಕನ್ನಡ ಕಲಿಕೆ ಅವರಿಗೆ ಸಣ್ಣತನವಾಗಿ ಕಾಣಿಸುತ್ತದೆ. ಆದಾಗ್ಯೂ ಜನ ಸಹಿಸಿಕೊಂಡು ಓಲೈಸುತ್ತಾರೆ. ಗಡಿ ಸಮಸ್ಯೆ ನಿರಂತರವಾಗಿದೆ. ಮಹಾರಾಷ್ಟ್ರವಲಯದ ಅನೇಕ ಸ್ನೇಹಿತರನ್ನು-ಕೇಳಿದರೆ ನಮಗೆ ಬೀದರ, ಬೆಳಗಾವಿ ಬೇಕಾಗಿಲ್ಲ ಎಂದೇ ಹೇಳುತ್ತಾರೆ. ಮಹಾರಾಷ್ಟ್ರದ ಉದ್ಗೀರ, ಅಕ್ಕಲಕೋಟ, ಜತ್ತ್, ಸೋಲಾಪುರ, ಮೊದಲಾದಕಡೆ ಕನ್ನಡ ಬಹುಭಾಷಿಕರು ಇದ್ದಾರೆ. ಯಾವತ್ತೂ ಗಡಿ ಕುರಿತು ಚಚರ್ಿಸಿಲ್ಲ. ಇದನ್ನು ಎಲ್ಲರೂ ಅರ್ಥಮಾಡಿಕೊಂಡು ಸೌಹಾರ್ದತೆಯಿಂದ ಬದುಕಬೇಕು. ಮಹಾರಾಷ್ಟ್ರ ಮೂಲದ ಡಾ.ಜಯದೇವಿತಾಯಿ ಲಿಗಾಡೆ ಅವರಿಗೆ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ, ಬೆಳಗಾವಿ(ಕನರ್ಾಟಕ) ಮೂಲದ ಉತ್ತಮ ಕಾಂಬಳೆ ಅವರಿಗೆ ಅಖಿಲ ಭಾರತ ಮರಾಠಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ನೀಡಿದ್ದು ಚಾರಿತ್ರಿಕವಾಗಿ, ಸಾಂಸ್ಕೃತಿಕವಾಗಿ ಮಹತ್ವದ ಸಂಗತಿ. ಹೀಗೆ ಭಾಷಿಕ ಸಮನ್ವಯತೆ ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗುತ್ತವೆಂಬುದನ್ನು ಮನಗಾಣಬೇಕಾಗಿದೆ.
ಡಾ. ಬಸವರಾಜ ಬಲ್ಲೂರ
9242440379, 9738418468.
No comments:
Post a Comment