Tuesday, March 12, 2013

ಕನ್ನಡ ಸಂರಕ್ಷಣೆ : ಭಾಲ್ಕಿ ಹಿರೇಮಠ

ಕನ್ನಡ ಸಂರಕ್ಷಣೆ : ಭಾಲ್ಕಿ ಹಿರೇಮಠ

ಡಾ. ಬಸವರಾಜ ಬಲ್ಲೂರ

ಮಠಗಳೆಂದರೆ ಮತ - ಧರ್ಮ ಸಂರಕ್ಷಣೆ ಎಂಬ ಸಿದ್ಧನಂಬಿಕೆಗಳನ್ನು ಮುರಿದು ನಾಡು ನುಡಿ ಸಂರಕ್ಷಣೆಗೆ ನಿಂತು. ಕನ್ನಡ ಉಳಿದರೆ ಮಾತ್ರ ಧರ್ಮ ಉಳಿಯುತ್ತದೆಂದು ಬಲವಾಗಿ ಪ್ರತಿಪಾದಿಸಿದ್ದೇ ಭಾಲ್ಕಿ ಹಿರೇಮಠ ಸಂಸ್ಥಾನ ಮತ್ತು ಅದರ ಪೀಠಾಧಿಪತಿಗಳಾಗಿದ್ದ ಡಾ. ಚೆನ್ನಬಸವ ಪಟ್ಟದೇವರು.
ಬಹು ಪ್ರಾಚೀನತೆ ಹೊಂದಿರುವ  ಭಾಲ್ಕಿ ಹಿರೇಮಠ ಸಂಸ್ಥಾನ ಮೂಲತಃ ಸಂಪ್ರದಾಯಶೀಲ ಮಠ. ಅದು ವೈಚಾರಿಕತೆಗೆ ತೆರೆದುಕೊಂಡಿದ್ದು, ಜನಪ್ರಿಯತೆಗೆ ಬಂದದ್ದು ಡಾ. ಚೆನ್ನಬಸವ ಪಟ್ಟದೇವರಿಂದ. ಈ ಜನಪ್ರಿಯತೆ ತಂದುಕೊಟ್ಟಿದ್ದೆ ಶ್ರೀಗಳ ಕನ್ನಡ ಪ್ರೀತಿಯಿಂದ.
ಡಾ. ಚೆನ್ನಬಸವ ಪಟ್ಟದೇವರಿಗೆ ಕನ್ನಡ ಕೇವಲ ಭಾಷೆಯಾಗಿ ಕಾಣಲಿಲ್ಲ ಬದಲಿಗೆ ಕನ್ನಡವೆಂದರೆ ಜನತೆ ಶತಮಾನಗಳಿಂದ ಆಚರಿಸಿಕೊಂಡು ಬಂದ ಸಂಪ್ರದಾಯ, ನಂಬಿಕೆ, ಸಂಸ್ಕೃತಿ,  ಒಟ್ಟು ಜೀವನ ವಿಧಾನ. ಆದ್ದರಿಂದ  ಕನ್ನಡವೆಂದರೆ ಜನತೆಯ ಬದುಕು ಎಂದು ಭಾವಿಸಿ ಕನ್ನಡದ ಉಳಿವೆಂದರೆ ಅದು ಕನ್ನಡಿಗರ ಉಳಿವೆಂದು ತಿಳಿದರು. ಆ ಕಾರಣಕ್ಕಾಗಿಯೇ ಹ್ಶೆದ್ರಾಬಾದ ಕನರ್ಾಟಕ ವಿಮೋಚನೆ, ಕನ್ನಡ ಏಕೀಕರಣ, ಕನರ್ಾಟಕದ ಪುನರ್ ನಾಮಕರಣಕ್ಕಾಗಿ ಹೋರಾಡಿದರು. ಈ ಹೋರಾಟಕ್ಕೆ ಕನ್ನಡ ಮಾಧ್ಯಮ  ಶಿಕ್ಷಣವನ್ನು ಅಸ್ತ್ರವಾಗಿ ಬಳಸಿದರು. ಅದಕ್ಕೆ ಕಾರಣವೂ ಇತ್ತು. ಡಾ. ಚೆನ್ನಬಸವ ಪಟ್ಟದೇವರು. ಹಾನಗಲ್ ಶಿವಯೋಗ ಮಂದಿರದಲ್ಲಿ ತರಬೇತಿಯನ್ನು ಪಡೆದ ಮೇಲೆ 1924ರಲ್ಲಿ ನಡೆದ ಭಾಲ್ಕಿ ಹಿರೇಮಠದ ಪೀಠಾರೋಹಣದಂದು. ಶಿವಯೋಗ ಮಂದಿರದಲ್ಲಿ ತರಬೇತಿ ನೀಡಿದ ಹಾನಗಲ್ ಕುಮಾರ ಸ್ವಾಮಿಯವರೆ ಬಂದು ತಮ್ಮ ಪ್ರೀತಿಯ ಶಿಷ್ಯನಿಗೆ ಪೀಠಾರೋಹಣ ಮಾಡಿಸಿದ್ದು, ಜೊತೆಗೆ ಮಠಕ್ಕಾಗಿ ನೀನಲ್ಲ, ನಿನಗಾಗಿ ಮಠವಿದೆ ಈ ಭಾಗದಲ್ಲಿ ಶಿಕ್ಷಣ, ಶರಣತತ್ವ, ದೀನ ದಲಿತರ ಸೇವೆಗೆ ಬದುಕು ಮೀಸಲಾಗಿರಲಿ ಎಂದು ಹೇಳಿ ಜವಾಬ್ದಾರಿಗಳನ್ನು ಹೋರಿದರು. ಆದರೆ ಮಠದ ವ್ಯವಸ್ಥೆ ಶಿಥಿಲವಾಗಿತ್ತು.  ಶಾಖಾ ಮಠಗಳು ಸ್ವತಂತ್ರವೆಂಬಂತೆ ಇದ್ದವು. ಇದೆಲ್ಲ ಒಂದು ವರ್ಷದಲ್ಲಿ ಸರಿಪಡಿಸಿ ಎಲ್ಲಾ ಶಾಖಾ ಮಠಗಳು ಭಾಲ್ಕಿ ಹಿರೇಮಠದ ಆಧೀನಕ್ಕೆ ತಂದರು, ಕಾರೆಮುಂಗಿ, ಮೋರಗಿಯಲ್ಲಿರುವ ಮಠದ ಹೊಲಗಳ ಉಳುಮೆಯನ್ನು ಸ್ವತಃ ತಾವೆ ಮಾಡಿದರು.


ಕನ್ನಡ ಮಾಧ್ಯಮ ಶಿಕ್ಷಣ
 ಮುನುಷ್ಯರ ಮೂಲಭೂತ ಅಗತ್ಯಗಳೆಂದರೆ ಅನ್ನ, ಅರಿವೆ, ಆಶ್ರಯ, ಅರಿವು ಮತ್ತು ಔಷಧ. ಇವನ್ನು ಲಿಂಗಾಯತ ಪರಿಭಾಷೆಯಲ್ಲಿ ಶಿವ ಪಂಚಾಯತಗಳೆಂದು ಕರೆವರು ಇವುಗಳಲ್ಲಿ ಅರಿವು ಅತ್ಯಂತ ಮುಖ್ಯವಾದದ್ದು. ಆಧುನಿಕ ಪರಿಭಾಷೆಯಲ್ಲಿ ಅರಿವು ಎಂದರೆ ಶಿಕ್ಷಣ ಎಂದರ್ಥ : ಶಿಕ್ಷಣವು ಮನುಷ್ಯರ ಮೌಢ್ಯತೆಗಳನ್ನು ಕಳೆಯುವುದರೊಂದಿಗೆ ಹಲವಾರು ಸಮಸ್ಯೆಗಳಿಗೆ ಪರಿಹಾರವಾಗಿಯೂ ನಿಲ್ಲಬಲ್ಲದು. ಶಿಕ್ಷಣದಿಂದ ಸಾಮಾಜಿಕ ಅರಿವು ತರಲು ಸಾಧ್ಯ ಎಂಬುದನ್ನು ಮನಗಂಡ ಪಟ್ಟದ್ದೇವರು ಶಿಕ್ಷಣ ಸಂಸ್ಥೆ ಸ್ಥಾಪಿಸಲು ಮುಂದಾದರು. ಈ ಉದ್ದೇಶದ ಹಿಂದೆ ಯಾವುದೆ ಲಾಭದ ಅಥವಾ ಹಣಗಳಿಸುವ ಉದ್ದೇಶವಿರಲಿಲ್ಲ. ಬದಲಾಗಿ ಶಿಕ್ಷಣ ಎಲ್ಲರ ಸ್ವತ್ತಾಗಬೇಕು ಮತ್ತು ಎಲ್ಲ ಸಮುದಾಯದವರಿಗೂ ದಕ್ಕಬೇಕು ಎಂಬ ನಿಲುವು ಅವರದಾಗಿತ್ತು.
1936ರಲ್ಲಿ ಇಂದಿನ ಆಂಧ್ರಪ್ರದೇಶ ನಾರಾಯಣಖೇಡ ತಾಲೂಕಿನ ಮೋಗರ್ಿ ಗ್ರಾಮದಲ್ಲಿ ಶಾಂತಿವರ್ಧಕ ಗುರುಕುಲಾಶ್ರಮ ಎಂಬ ಹೆಸರಿನಿಂದ ಕನ್ನಡ ಪ್ರಾಥಮಿಕ ಶಾಲೆಯನ್ನು ಸ್ಥಾಪಿಸಿದರು. ಭಾರತ ಹಳ್ಳಿಗಳ ರಾಷ್ಟ್ರ, ಹಳ್ಳಿಗಳ ಉದ್ಧಾರವೇ ದೇಶದ ಉದ್ಧಾರವೆಂಬ ಮಾತಿನಂತೆ ಒಂದು ಸಣ್ಣ ಗಡಿಭಾಗದ ಹಳ್ಳಿಯಿಂದ ಅರಿವಿನ (ಶಿಕ್ಷಣ) ಅಂದೋಲನ ಆರಂಭಿಸಿದರು. ಈ ಪ್ರಾಂತ ಅಂದು ನಿಜಾಮನ ಆಡಳಿತಕ್ಕೆ ಒಳಪಟ್ಟಿದ್ದರಿಂದ ಉದರ್ು ಆಡಳಿತ ಭಾಷೆಯಾಗಿತ್ತು. ಆದ್ದರಿಂದ ಹೊರಗೆ ಉದರ್ು ಫಲಕ ಉದರ್ು ಪಾಠಶಾಲೆ ಎಂದು ಬರೆಯಿಸಿ ಒಳಗೆ ಕನ್ನಡ ಕಲಿಸುತ್ತಿದ್ದರು. ಮೋಗರ್ಿ ಶಾಲೆಗೆ ಕೊಪ್ಪಳದ ಖಾನಾಪೂರ ಶಾಸ್ತ್ರಿಗಳು ಮುಖ್ಯ ಗುರುಗಳಾಗಿದ್ದರು. ನಾರಾಯಣಖೇಡದ ನಾಗಶೆಟ್ಟೆಪ್ಪ ಶೆಟಕಾರ ಅಧ್ಯಕ್ಷರಾಗಿದ್ದರು. ಅಲ್ಲಿ ನೂರಾರು ವಿದ್ಯಾಥರ್ಿಗಳು ಕಲಿಯುತ್ತಿದ್ದರು. ಅಲ್ಲಿ ಕಲಿತವರು ಉನ್ನತ ಹುದ್ದೆಗೆ ಏರಿದರು. ಆದರೆ ಈ ಕನ್ನಡ ಶಾಲೆ ಜನರ ತೀವ್ರ ವಿರೋಧಕ್ಕೂ ಒಳಗಾಯಿತು. ವ್ಯವಹಾರ ಭಾಷೆ ಉದರ್ುವಾದ್ದರಿಂದ ಜನ ಸಹಜವಾಗಿ ಉದರ್ು ಕಲಿಸಲು ದುಂಬಾಲು ಬಿದ್ದರು. ಜೊತೆಗೆ ಕನ್ನಡ ಅಂದು ಜಂಗಮರ ಭಾಷೆಯಾದ್ದರಿಂದ ತಮ್ಮ ಮಕ್ಕಳು ಕನ್ನಡ ಕಲಿತು ಜಂಗಮರಾಗಿ ಪಂಚಾಂಗ (ಜೋತಿಷ್ಯ) ಹೇಳಬೇಕೆ? ಎಂದು ಪ್ರಶ್ನಿಸುತ್ತಿದ್ದರು. ಆಗ ಜನರಿಗೆ ಕನ್ನಡದೊಂದಿಗೆ ಉದರ್ು ಮರಾಠಿ ಸಹ ಕಲಿಸುತ್ತೇವೆಂದು ಪಟ್ಟದ್ದೇವರು ತಿಳಿ ಹೇಳುತ್ತಿದ್ದರು. ಇದರಿಂದ ನಿಜಾಮ ಸಕರ್ಾರದ ಪೊಲೀಸರು ಬಂದು ಶಾಲೆ ತಪಾಸಣೆ ಮಾಡಿದಾಗ ಶಾಲೆಯಲ್ಲಿದ್ದ ಮಹಾತ್ಮಗಾಂಧಿ, ನೆಹರು ವಿವೇಕಾನಂದ, ಬಸವಣ್ಣ ಮೊದಲದವರ ಭಾವಚಿತ್ರಗಳನ್ನು ಕಿತ್ತೆಸೆದು ತಕರಾರು ಮಾಡಿದರು. ನೀವು ಸರಕಾರಕ್ಕೆ ದ್ರೋಹ ಮಾಡುತ್ತಿರುವಿರಿ ಎಂದು ಬೆದರಿಸಿದಾಗ ಬಡ ಜನತೆಗೆ ಶಿಕ್ಷಣ ನೀಡಿ ಸರಕಾರವನ್ನು ಬಲಪಡಿಸುತ್ತೇವೆಂದು ಹೇಳಿ ಪೊಲೀಸರ ಮನವೊಲಿಸಿದರು. ಇದರ ಮುಂದುವರಿಕೆಯಾಗಿ ಕಮಲನಗರ, ಭಾಲ್ಕಿ ಹೊಳಸಮುದ್ರ, ಬಳತ್ ಮೊದಲಾದೆಡೆ ಕನ್ನಡ ಶಾಲೆಗಳು ಆರಂಭವಾದವು. ಪಟ್ಟದ್ದೇವರು ಹೀಗೆ ಅರಿವಿನ ಆಗರ ತೆರೆದರು. ಕಾಯಕ ನಿಷ್ಠೆ - ದಾಸೋಹ ಭಾವ ಹೊಂದಿದ್ದ ಶ್ರೀಗಳು ಜ್ಞಾನ ದಾಸೋಹದೊಂದಿಗೆ ಅನ್ನ ದಾಸೋಹವನ್ನೂ ಆರಂಭಿಸಿದರು. ಆಥರ್ಿಕವಾಗಿ ಮಠ ದುರ್ಬಲವಾದ್ದರಿಂದ ಮಕ್ಕಳ ಪ್ರಸಾದ, ಶಿಕ್ಷಕರ ವೇತನ ಏಕಕಾಲಕ್ಕೆ ಭರಿಸುವ ಶಕ್ತಿ ಇರಲಿಲ್ಲ. ಅದ್ದರಿಂದ ಮುಷ್ಟಿಫಂಡ್ ಆರಂಭಿಸಿದರು. ಪ್ರತಿಯೊಬ್ಬರು ಬೀಸುವಾಗ ಒಂದು ಮುಷ್ಠಿ ಕಾಳು ತೆಗೆದಿರಿಸುವಂತೆ ಕೋರಿ ಪ್ರಸಾದ ದಾಸೋಹ ನೆರವೇರಿಸಿದರು. ಅನೇಕ ಸಂದರ್ಭಗಳಲ್ಲಿ  ಪೂಜ್ಯರೇ ಸ್ವತಃ ಗ್ರಾಮ ಗ್ರಾಮ ಅಲೆದಾಡಿ ಮುಷ್ಠಿಫಂಡ್ ತಂದ ಉದಾಹರಣಿಗಳಿವೆ. ಹೀಗೆ ಪ್ರತಿ ಕಾರ್ಯದಲ್ಲಿಯೂ ತಮ್ಮನ್ನು ಮನಸಾ ತೊಡಗಿಸಿಕೊಳ್ಳುತ್ತಿದ್ದರು.
1943ರಲ್ಲಿ ಮೋರಗಿ ನೀರಿನ ಅಭಾವಕ್ಕೆ ಒಳಗಾಗಿ ಅಲ್ಲಿನ ಶಾಲೆಯನ್ನು ಔರಾದ ತಾಲೂಕಿನ ಖೇಡ ಸಂಗಮದ (ದೇವಣಿ ಮಾಂಜ್ರಾ ನದಿಗಳ ಸಂಗಮ) ದಡಕ್ಕೆ ಸ್ಥಳಾಂತರಿಸಿದರು. ವಿಶಾಲವಾದ ದಿಣ್ಣಿಯ ಮೇಲೆ ಶಾಲೆ ಕಟ್ಟಡ ಆರಂಭವಾದಾಗ ಸ್ವತಃ ಪಟ್ಟದೇವರೇ ಕಲ್ಲು - ಮಣ್ಣು ಹೊತ್ತು ಶಾಲಾ ನಿಮರ್ಾಣ ಪೂರ್ಣಗೊಳಿಸಿದರು. ಮುಂದೆ ರಜಾಕಾರ ಹಾವಳಿ ಎದುರಾದಾಗ ಹೆದರದೇ ವಿದ್ಯಾಥರ್ಿಗಳನ್ನು ಸೊಲ್ಲಾಪೂರಕ್ಕೆ ಕರೆದೊಯ್ದರು. ಅಲ್ಲಿ ವಾರದ ಬಾಬಾ ಸಾಹೇಬ, ಡಾ|| ಜಯದೇವಿ ತಾಯಿ ಲಿಗಾಡೆ ಮತ್ತು ಕುಂಟೋಜಿ ಮಠದ ಆಶ್ರಯ ಪಡೆದರು. ರಜಾಕಾರ ಹಾವಳಿ ನಿಂತ ಮೇಲೆ ಪುನಃ ಸಂಗಮಕ್ಕೆ ವಿದ್ಯಾಥರ್ಿಗಳನ್ನು ಕರೆ ತಂದರು. ಸಂಗಮದಲ್ಲಿ ಮಹಾಪೂರ ಬಂದರಿಂದ ಆ ಶಾಲೆಯ ಮಕ್ಕಳನ್ನು ಕಮಲನಗರಕ್ಕೆ ಸ್ಥಳಾಂತರಿಸಲಾಯಿತು. ಕಮಲನಗರ ಶಾಲೆಯನ್ನು ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರಿಂದ ಅಡಿಗಲ್ಲು ಹಾಕಿಸಿ ಪುನಃ ಕಷ್ಟಪಟ್ಟು ಶಾಲೆ ಕಟ್ಟಡ ಮುಗಿಸಿದರು.
ಡಾ. ಚೆನ್ನಬಸವ ಪಟ್ಟದೇವರು ನಡೆಸುತ್ತಿದ್ದ ಶಾಂತಿ ವರ್ಧಕ ಶಿಕ್ಷಣ ಸಂಸ್ಥೆಯ ಶಾಲೆಗಳಿಗೆ ಸಕರ್ಾರದ ಮನ್ನಣಿ ದೊರೆಯಲಿಲ್ಲ. ಪ್ರಾಥಮಿಕ ಮಾಧ್ಯಮಿಕ ತರಗತಿಗಳಲ್ಲಿ ವಿದ್ಯಾಥರ್ಿಗಳ ಭವಿಷ್ಯ ಅತಂತ್ರವಾಗಬಾರದೆಂದು ತಕ್ಷಣವೇ ಲಾತೂರಿನಲ್ಲಿ ರಾಜಸ್ಥಾನದ ಮಾರವಾಡಿ ಶಾಲೆಗೆ ವಿದ್ಯಾಥರ್ಿಗಳನ್ನು ದಾಖಲಿಸಿದರು. ಅಲ್ಲಿ ಒಂದರಿಂದ ಹತ್ತನೆ ತರಗತಿಯವರೆಗೆ ಬೋಧಿಸಲಾಗುತ್ತಿತ್ತು. ಈ ಸಂಗಮ ಶಾಲೆಗೆ ಬಂದು ಲಾತೂರ ಶಾಲೆಗೆ ಸೇರಿ ಓದಿದವರಲ್ಲಿ ಈ ಭಾಗದ ಖ್ಯಾತ ಸಾಹಿತಿ ಡಾ. ಶಾಂತರಸ ಹೆಂಬೇರಾಳು ಒಬ್ಬರು. ಅವರು ಬೀದರನಲ್ಲಿ ಜರುಗಿದ ಅಖಿಲ ಭಾರತ 72ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. ಲಾತೂರಿನಲ್ಲಿ ಓದುವಾಗ ನಗರದ ಪೂರ್ವ ದಿಕ್ಕಿನ ಸುಡುಗಾಡು ಮಠದಲ್ಲಿನ ಅವರ ವಾಸದ ಭಯಾನಕ ವಿವರವನ್ನು ಶಾಂತರಸರು ಕಾಯಕ ಪರಿಣಾಮಿ (ಶ್ರೀ ಚನ್ನಬಸವ ಪಟ್ಟದೇವರು ಭಾಲ್ಕಿ ಗೌರವ ಗ್ರಂಥ ಬಚ್ಚಬರಿಯ ಚೆನ್ನ ಬಸವ ಪು. 263-271) ಯಲ್ಲಿ ದಾಖಲಿಸಿದ್ದಾರೆ.
ಈ ಭಾಗದ ಜನತೆಗೆ ಕಾಲೇಜು ಮಟ್ಟದ ಉನ್ನತ ಶಿಕ್ಷಣವು ದೊರಯಲೆಂಬ ಉದ್ದೇಶದಿಂದ ಭಾಲ್ಕಿಯಲ್ಲಿ ಕಾಲೇಜು ಆರಂಭಿಸಬೇಕೆಂದಾಗ ಇದಕ್ಕೆ ಹಣದ ಕೊರತೆಯುಂಟಾಯಿತು. ಆಗ ಮಠದ ಆಸ್ತಿ ಸಂಸ್ಥೆಯ ಹೆಸರಿಗೆ ವಗರ್ಾಯಿಸಿ, ಭಾಲ್ಕಿಯಲ್ಲಿ ಚೆನ್ನಬಸವ ಕಾಲೇಜು ಆರಂಭಿಸಿದರು.
ಶ್ರೀ ಚೆನ್ನಬಸವ ಪಟ್ಟದ್ದೇವರು ಬಸವಾದಿ ಶರಣರ ತತ್ವಗಳನ್ನು ಅಕ್ಷರಶಃ ಪಾಲಿಸುವ ನಿಟ್ಟಿನಲಿದ್ದುದರಿಂದ ವಚನಕಾರರು 12ನೇಯ ಶತಮಾನ ಮಹಿಳಾ ಶಿಕ್ಷಣ ನೀಡಿದರೆ ಪಟ್ಟದೇವರು ಸಾಂಪ್ರದಾಯಿಕ ಮಡಿವಂತಿಕೆಗಳನ್ನು ಮುರಿದು ಬೀದರನಲ್ಲಿ ಮೊದಲ ಮಹಿಳಾ ಕಾಲೇಜು ಆರಂಭಿಸಿದರು. ಹೀಗೆ 1936 ರಿಂದ 1975ರ ವರೆಗೆ ಚನ್ನಬಸವ ಪಟ್ಟದ್ದೇವರು ಈ ಭಾಗದ ಜನತೆಗೆ ಅರಿವು (ಶಿಕ್ಷಣ) ನೀಡಲು ಏಕಾಂಗ ವೀರರಾಗಿ ಅವಿರತ ಶ್ರಮ ವಹಿಸಿದ್ದಾರೆ. ಮೋಗರ್ಿಯಲ್ಲಿ ಬಿತ್ತಿದ ಸಣ್ಣ ಅರಿವಿನ ಬೀಜ ಬೆಳೆದು ಹೆಮ್ಮರವಾಗಿ ವೃತ್ತಿಪರ ಐ.ಟಿ.ಐ. ಇಂಜಿನಿಯರಿಂಗ್ ಮೊದಲಾದ ಹತ್ತಾರು ಶಾಲಾ ಕಾಲೇಜುಗಳು ತಲೆ ಎತ್ತಿನಿಂತಿವೆ. ಅವರ ಅರಿವಿನಾಗರದ ಉತ್ಕಟನೆ ದೂರದೃಷ್ಟ ಅವಿಸ್ಮರಣೀಯ.
ಕನ್ನಡದ ಶರಣ :
ತಾಯಿ, ತಾಯ್ನೆಲ ಸ್ವರ್ಗಕ್ಕೆ ಸಮಾನವೆಂಬ ಮಾತಿದೆ. ಹಾಗಾಗಿ ಶ್ರೀ ಚೆನ್ನಬಸವ ಪಟ್ಟದೇವರಿಗೆ ಕನ್ನಡ ಭಾಷೆ-ಸಾಹಿತ್ಯ ಬಸವಾದಿ ಶರಣರ ತತ್ವಗಳು ಉಭಯ ದೃಷ್ಟಿ ಏಕವಾಗಿ ಕಾಂಬಂತೆ ವಚನ ಸಾಹಿತ್ಯವನ್ನು ಜನಮನಕ್ಕೆ ತಲುಪಿಸಬೇಕಾದರೆ ಅವರು ಮೊದಲು ಕನ್ನಡ ಕಲಿಯಲೇಬೇಕೆಂಬ ಮೂಲ ಆಶಯದಿಂದ ಕನ್ನಡ ಭಾಷೆ - ಸಾಹಿತ್ಯವನ್ನು ಆದರದಿಂದ ಗೌರವಿಸಿದರು. ಎಂಥ ಸಂದರ್ಭದಲ್ಲಿಯೂ ನಾಡು ನುಡಿ - ಸಂಸ್ಕೃತಿಯ ವಿಷಯದಲ್ಲಿ ಯಾವುದೇ ರಾಜಿಗೆ ಒಪ್ಪಲಿಲ್ಲ. ಉದರ್ು ಫಲಕ ಹಾಕಿ ಕನ್ನಡ ಕಲಿಸಿದ್ದೆ ಜ್ವಲಂತ ನಿದರ್ಶನ. ಸ್ವಾತಂತ್ರ್ಯ ಚಳವಳಿಗೆ ತೊಡಗಿಸಿಕೊಂಡ ಶ್ರೀಗಳು ಹೈದ್ರಾಬಾದ ಕನರ್ಾಟಕ ವಿಮೋಚನೆಗಾಗಿಯೂ ಹೋರಾಡಿದರು. ಮುಂದೆ ಕನರ್ಾಟಕ ಏಕೀಕರಣಕ್ಕೆ ಪಣತೊಟ್ಟುನಿಂತರು. ಇದಕ್ಕಾಗಿ 1955ರಲ್ಲಿ ಅವರು ಕಮಲನಗರದಲ್ಲಿ ತಮ್ಮ ಶಾಲೆಯ ವಿದ್ಯಾಥರ್ಿ ಹಾಗೂ ಶಿಕ್ಷಕರು ಸೇರಿ ಭಕ್ತರೊಂದಿಗೆ ರೈಲು ಹಳಿಯ ಮೇಲೆ ಕುಳಿತು ರೈಲು ರೋಕೋ ಆಂದೋಲನ ಮಾಡಿದರು. ಸೊಲ್ಲಾಪೂರವು ಕನರ್ಾಟಕದಲ್ಲಿಯೇ ಉಳಿಯಬೇಕೆಂಬ ಉತ್ಕಟ ಬಯಕೆ ಡಾ|| ಜಯದೇವಿ ತಾಯಿ ಲಿಗಾಡೆಯವರದಾಗಿತ್ತು. ಆಗ ಮರಾಠಿಗರು ಸಹಜವಾಗಿ ಕಮಲನಗರದಲ್ಲಿ ದಾಂಧಲೆ ಮಾಡಿದರು. ಹೀಗೆ ಕನರ್ಾಟಕ ಏಕೀಕರಣ, ಕನ್ನಡ ಅಧ್ಯಯನಕ್ಕೆ ಪುಷ್ಟಿ ನೀಡಿದ್ದರಿಂದ ಕಿಡಿಗೇಡಿಗಳಿಂದ ನಿಜಾಮ ಸರಕಾರದಲ್ಲಿ ಮೊಕದ್ದಮೆ ಎದುರಿಸಿದ್ದನ್ನು ಡಾ.ಜಿ.ಬಿ. ವಿಸಾಜಿಯವರು (ಕಾಯಕ ಪರಿಣಾಮಿಯಲ್ಲಿ) ವಿವರವಾಗಿ ದಾಖಲಿಸಿದ್ದಾರೆ.
ಕನ್ನಡತನ ಕನ್ನಡವನ್ನು ಕಲಿಸುತ್ತಲೇ ವಚನ ಸಾಹಿತ್ಯವನ್ನು ಜನಮನಕ್ಕೆ ತಲುಪಿಸಿದರು. ವಚನ ಪಠಣ ಮಾಡಿಸುತ್ತಿದ್ದರು. ವಚನಗಳ ಸರಳೀಕರಿಸಿ ಹೇಳುತ್ತಿದ್ದರು. ಜೊತೆಗೆ ಶರಣ ಸಂಸ್ಕೃತಿ - ಶರಣತತ್ವದ ಪ್ರಸ್ತುತತೆ, ವೈಚಾರಿಕ ಪ್ರಖರತೆ ಕುರಿತು ಜನರಿಗೆ ಮನದಟ್ಟು ಮಾಡಿಕೊಡುತ್ತಿದ್ದರು. ಹೀಗೆ ಕನ್ನಡ ಮತ್ತು ಶರಣತತ್ವ ಅವರ ಬದುಕಿನ ಉಸಿರಾಗಿದ್ದವು, ಜೀವನಾದರ್ಶವಾಗಿದ್ದವು. ಅವರ ಸಮಗ್ರ ಸೇವೆಗಾಗಿ ರಾಜ್ಯೋತ್ಸವ ಪುರಸ್ಕಾರ, ಗುಲಬಗರ್ಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಮೊದಲಾದ ಪುರಸ್ಕಾರಗಳು ಸಂದಿದ್ದು ಅವರ ಜನಪ್ರಿಯತೆಗೆ ಸಾಕ್ಷಿ.
ಹೀಗೆ ಕನ್ನಡ ನಾಡು ನುಡಿ ಜನತೆಯ ಅಭಿವೃದ್ದಿಗಾಗಿ ದುಡಿದ ಭಾಲ್ಕಿ ಹಿರೇಮಠವನ್ನು ಈ ಭಾಗದ ಜನ ಕನ್ನಡ ಮಠವೆಂದು, ಡಾ. ಚೆನ್ನಬಸವ ಪಟ್ಟದೇವರನ್ನು ಕನ್ನಡ ಪಟ್ಟದ್ದೇವರೆಂದೆ ಕರೆವರು. 
ಭಾಲ್ಕಿ ಹಿರೇಮಠದ ವಿಶೇಷವೆಂದರೆ ಡಾ. ಚೆನ್ನಬಸವ ಪಟ್ಟದೇವರ ಕನ್ನಡ ಪ್ರೀತಿ, ಕನ್ನಡ ಮಾತೃಭಾಷೆ ಶಿಕ್ಷಣ  ಕಾಳಜಿ ಈಗಿರುವ  ಡಾ. ಬಸವಲಿಂಗ ಪಟ್ಟದ್ದೇವರು ಅನುಚಾನವಾಗಿ ಮುಂದುವರೆಸಿಕೊಂಡು ಬರುತಿದ್ದಾರೆ. ಇಂಗ್ಲೀಷು ವ್ಯಾಮೋಹದ ಮಧ್ಯದಲ್ಲಿ ಶಿಕ್ಷಣ ವ್ಯಾಪಾರದ ಸರಕಾಗಿದೆ. ಹಣ ಗಳಿಕೆಯ ಸಾಧನವಾಗಿದೆ. ಆದರೆ ಇವರು ಶೈಕ್ಷಣಿಕ ಕ್ರಾಂತಿಯನ್ನೆ ಮಾಡುತ್ತಿದ್ದಾರೆ. ಶಿಕ್ಷಣದ ವ್ಯಾಪಾರೀಕರಣದ ಮಧ್ಯ ಅದನ್ನು ಮಾನವೀಕರಣಗೊಳಿಸುತ್ತಲೇ ಗಡಿಭಾಗದಲ್ಲಿ ಸು.31 ಅಂಗ ಸಂಸ್ಥೆಗಳ ಮೂಲಕ ಕನ್ನಡ ಶಾಲೆಗಳನ್ನು ಆರಂಭಿಸಿ ಗುಣಾತ್ಮಕ ಶಿಕ್ಷಣದ ಮೂಲಕ ಕನ್ನಡ ಕಟ್ಟುತ್ತಿರುವುದು ಶ್ಲಾಘನೀಯ.
ಡಾ. ಬಸವಲಿಂಗ ಪಟ್ಟದ್ದೇವರು ಸಹ ನಾಡಿನ  ಸರ್ವತೋಮುಖ ಅಭಿವೃದ್ದಿಗಾಗಿ ಕಲೆ,ಸಾಹಿತ್ಯ, ಶಿಕ್ಷಣ, ಸಮಾಜಸೇವೆ ಮೊದಲಾದ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ನಾಡಿನ ಗಮನ ಸೆಳೆದವರು. ರಾಷ್ಟ್ರ, ರಾಜ್ಯ ಮಟ್ಟದ ಸಮ್ಮೇಳನ, ಸಮಾವೇಶ ಆಯೋಜಿಸುವುದರೊಂದಿಗೆ ವಿಚಾರ ಜ್ಯೋತಿ ಹೊತ್ತಿಸಿದ ಇವರು ಅನಾಥಾಶ್ರಮ, ಅಬಲಾಶ್ರಮ, ಕಾಮರ್ಿಕ ಶಾಲೆ, ಕಾಮರ್ಿಕ ಶಾಲೆ, ವಿಕಲ ಚೇತನ, ಸಂಗೀತ,ಗೋ ಶಾಲೆಗಳನ್ನು ತೆರೆದು ಜೀವಪರ ಕಾಳಜಿ ಮೆರೆದವರು. ಸಾಮೂಹಿಕ, ಅಂತರ್ಜಾತಿ ವಿವಾಹಗಳನ್ನು ಆಯೋಜಿಸಿ ಮತೀಯ ಸಾಮರಸ್ಯ, ಧರ್ಮ ಸಹೀಷ್ಣುತೆಗೆ ಹೆಸರಾದವರು. ಹತ್ತಾರು ಪುಸ್ತಕ ಬರೆದು ನೂರಾರು ವಿದ್ವಾಂಸರ ಕೃತಿಗಳನ್ನು ಪ್ರಕಟಿಸಿ ಅಕ್ಷರ ಸಂಸ್ಕೃತಿಯನ್ನು ಬೆಳೆಸುತ್ತಿರುವರು. ನಾಡಿನಲ್ಲಲ್ಲದೇ ನೆರೆಯ ಮಹಾರಾಷ್ಟ್ರ, ಆಂಧ್ರ ಪ್ರದೇಶ ಹಾಗೂ ದೆಹಲಿ ಸೇರಿದಂತೆ ರಾಷ್ಟ್ರದ ಅನೇಕಜ ರಾಜ್ಯಗಳಲ್ಲಿ ಬಸವ ತತ್ವ ಪ್ರಸಾರದೊಂದಿಗೆ ಕನ್ನಡ ನಾಡು-ನುಡಿ, ಆಚಾರ, ವಿಚಾರ, ಸಾಹಿತ್ಯ, ಸಂಸ್ಕೃತಿಯನ್ನು ಬೆಳೆಸುತ್ತಿರುವ  ಸಾಂಸ್ಕೃತಿಕ ರಾಯಭಾರಿಗಳು. ಪ್ರಚಾರಪ್ರಿಯತೆ ಯುಗದ ಮಧ್ಯದಲ್ಲಿ ಸದ್ದು ಗದ್ದಲವಿಲ್ಲದೆ ದುಡಿಯುತ್ತಿದ್ದಾರೆ. ಹೀಗೆ ಡಾ.ಬಸವಲಿಂಗ ಪಟ್ಟದ್ದೇವರ ಮೌನ ಸೇವೆ, ಸಾಧನೆಗಳಿಗಾಗಿ ಪ್ರತಿಷ್ಟಿತ ರಮಣಶ್ರೀ ಪ್ರಶಸ್ತಿ, ಗುಲ್ಬಗರ್ಾ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ಸೇರಿದಂತೆ ಹತ್ತಾರು ಗೌರವ ಪ್ರಶಸ್ತಿ, ಪುರಸ್ಕಾರಗಳು ಸಂದಿವೆ. ಹೀಗೆ ಇಡೀ ಮಠ ಮತ್ತು ಮಠಾಧೀಶರು ದುಡಿಯುತ್ತಿರುವುದು ಈ ನಾಡಿನ ಸೌಭಾಗ್ಯವೇ ಸರಿ. ಆದ್ದರಿಂದ ಭಾಲ್ಕಿ ಹಿರೇಮಠವೆಂದರೆ ಅದು ಕನ್ನಡ ಸಂರಕ್ಷಣೆಯ ಮಠವೆಂದೆ ಅರ್ಥ.
 

No comments:

Post a Comment