ಅಕ್ಷರ ಬಲ್ಲವರೆಲ್ಲ ಜ್ಞಾನಿಗಳಲ್ಲ
ಡಾ. ಬಸವರಾಜ ಬಲ್ಲೂರ
ಮೊ: 9242428179 /9738418468
ಭಾರತೀಯ ಸಂದರ್ಭದಲ್ಲಿ ಶಿಕ್ಷಣಕ್ಕೆ ಚಾರಿತ್ರಿಕ ಮಹತ್ವದ ಸ್ಥಾನವಿದೆ. ಏಕೆಂದರೆ ಜೀವ ಜಗತ್ತಿನ ಅಭಿವೃದ್ಧಿಯ ಹಿಂದೆ ಶಿಕ್ಷಣ ಕಾರ್ಯನಿರ್ವಹಿಸಿದೆ. ಶಿಕ್ಷಣಕ್ಕೆ ವಿಶಾಲ ಅರ್ಥವಿದೆ. ಅರಿವು ಎಂಬ ಪರಿಕಲ್ಪನೆಯಲ್ಲಿ ಬಳಸಲಾಗುತ್ತದೆ. ಮನುಷ್ಯರ ಮೂಲಭೂತ ಅವಶ್ಯಕತೆಗಳಾದ ಅನ್ನ, ಅರಿವೆ, ಆಶ್ರಯ, ಔಷಧ (ಆರೋಗ್ಯ) ಹಾಗೂ ಅರಿವು (ಶಿಕ್ಷಣ) ಗಳೆಂಬ ಶಿವಪಂಚಾಯತಗಳಲ್ಲಿ ಶಿಕ್ಷಣವು ಒಂದು. ಹಾಗಾಗಿ ಶಿಕ್ಷಣ ಎಲ್ಲ ಸಮಸ್ಯೆ-ಸವಾಲುಗಳಿಗೆ ಪರಿಹಾರವಾಗಿ ನಿಲ್ಲುವ ಸಾಮಥ್ರ್ಯ ಪಡೆದಿದೆ. ಆದರೆ ದುರಂತದ ಸಂಗತಿಯೆಂದರೆ ಬಸವಣ್ಣನವರ ಕಾಲವನ್ನು ಬಿಟ್ಟರೆ ಐದು ಸಾವಿರ ವರ್ಷಗಳಿಂದ ಶಿಕ್ಷಣ ಉಳ್ಳವರ ಸ್ವತ್ತಾಗಿ ಬೆಳೆದು ಇಲ್ಲದವರಿಗೆ ಗಗನ ಕುಸುಮವಾಗಿ ಉಳಿದಿದೆ. ಇಂದು ಶಿಕ್ಷಣದ ಸಾರ್ವತ್ರಿಕರಣವೆಂಬ ಘೋಷಣೆ ಮಾತ್ರ ಖುಷಿ ತರುತ್ತಿದೆ ಆದರೆ ಆಧುನಿಕ ಭಾರತದ ಕೋಮುವಾದ ಭಯೋತ್ಪಾದನೆ ಭ್ರಷ್ಟಾಚಾರಗಳಂತೆ ಶಿಕ್ಷಣವೂ ಒಂದು ಸಮಸ್ಯೆಯಾಗಿ ರೂಪು ತಳೆದಿದೆ.
ಇಂದಿನ ಶಿಕ್ಷಣ ಪರಂಪರಾಗತವಾಗಿ ಬಂದ ಉತ್ಪಾದನಾ ವ್ಯವಸ್ಥೆ ಹಾಳು ಮಾಡಿದೆ, ಸು. 25 ಸಾವಿರ ಹಳ್ಳಿಗಳ 6 ಲಕ್ಷ ಜನರನ್ನು ನಿರುದ್ಯೋಗಿಗಳನ್ನಾಗಿ ಮಾಡಿದೆ. ಆಧುನಿಕ ಸಾಂಪ್ರದಾಯಿಕ ಶಿಕ್ಷಣ ಯುವ ಪೀಳಿಗೆಯಲ್ಲಿ ಭಯ ಮತ್ತು ಆತಂಕವನ್ನು ಮೂಡಿಸಿದೆ. ಶಿಕ್ಷಣದ ಮೂಲ ಆಶಯ ವ್ಯಕ್ತಿಯೊಳಗಿನ ಭಯ ಮತ್ತು ಕೀಳರಿಮೆ ನಿವಾರಿಸುವುದಾಗಬೇಕು. ಈ ಕೆಲಸವನ್ನು 12ನೆಯ ಶತಮಾನದಲ್ಲಿ ಬಸವಣ್ಣನವರು ಪೂರೈಸಿಕೊಟ್ಟಿದ್ದಾರೆ.
ಮಾನವ (ಮಾನವಿಯ) ಹಕ್ಕುಗಳ ಪ್ರತಿಪಾದನೆಗಾಗಿ ರಚನೆಯಾದ ಬಸವಣ್ಣನವರ ಸಮಾಜೋ ಸಾಂಸ್ಕೃತಿಕ ವೇದಿಕೆಯಾದ ಅನುಭವ ಮಂಟಪದಲ್ಲಿ ಮನುಷ್ಯ ಬದುಕಿನ ವಿವಿಧ ಆಯಾಮಗಳಾದ ಕೃಷಿ, ವ್ಯಾಪಾರ, ಉದ್ಯೋಗ, ವಿವಿಧ ಜ್ಞಾನ ಶಿಸ್ತುಗಳಾದ ಕಲೆ-ವಿಜ್ಞಾನ ಸಮಾಜ ವಿಜ್ಞಾನದ ಶಾಖೆಗಳು ಸಾಹಿತ್ಯ - ಸಾಂಸ್ಕೃತಿಕ ಚಟುವಟಿಕೆ ಹೀಗೆ ಅನೇಕ ವಿಷಯಗಳ ಬಗ್ಗೆ ನಡೆದ ಚಿಂತನೆಯೊಂದಿಗೆ ಶಿಕ್ಷಣದ ಚಿಂತನೆಯೂ ನಡೆದಿದೆ. ಬಹುಮುಖ್ಯವಾಗಿ ಶಿಕ್ಷಣದ ಸಾರ್ವತ್ರಿಕರಣ ನಡೆದದ್ದು ವಸಾಹತು ಶಾಹಿಗಳಿಂದ (ಬ್ರಿಟಿಷರಿಂದ) ಎಂಬಂತೆ ಬಿಂಬಿಸಲಾಗುತ್ತಿದೆ. ವಾಸ್ತವವಾಗಿ ಶಿಕ್ಷಣದ ಸಾರ್ವತ್ರಿಕರಣ ನಡೆದದ್ದು, ಬಸವಾದಿ ಶರಣರಲ್ಲಿ. ಆದರೆ ಈ ಸತ್ಯವನ್ನು ಯಾರೂ ಜನಪ್ರಿಯಗೊಳಿಸಲಿಲ್ಲ. ಭಾರತದಲ್ಲಿ ಕಾಳಿದಾಸ ತನ್ನ ಮೇರು ಕೃತಿಗಳನ್ನು ರಚಿಸುತ್ತಿದ್ದಾಗ ಬ್ರಿಟಿಷರು ಇನ್ನೂ ಅಲೆಮಾರಿಗಳಾಗಿದ್ದರು. ಕನ್ನಡದಲ್ಲಿ ಪಂಪ, ರನ್ನ, ಪೊನ್ನರಂತಹ ಕವಿಗಳು ತಮ್ಮ ಶ್ರೇಷ್ಠ ಕೃತಿಗಳನ್ನು ರಚಿಸುತ್ತಿದ್ದಾಗ ಬ್ರಿಟಿಷರು ತಮ್ಮತನಕ್ಕಾಗಿ ಹೋರಾಡುತ್ತಿದ್ದರು. ನಮ್ಮಲ್ಲಿ ಬಸವಣ್ಣ ವ್ಯಕ್ತಿಯ ಸ್ವಾತಂತ್ರ್ಯಕ್ಕಾಗಿ ಮನುಕುಲದ ಉದ್ಧಾರಕ್ಕಾಗಿ ಹೋರಾಟ ಮಾಡುತ್ತಿದ್ದಾಗ ಇದೇ ಯುರೋಪ ಕತ್ತಲಿನಲ್ಲಿ ಮುಳುಗಿತ್ತು. ಭಾರತೀಯರು ಬ್ರಿಟಿಷರಿಗಿಂತ ಮೊದಲೇ ನಾಗರೀಕತೆಯ ಉತ್ತುಂಗ ಶಿಖರ ತಲುಪಿದರು ಎನ್ನುವುದನ್ನು ಈ ಸಂಗತಿಗಳು ಸ್ಪಷ್ಟಪಡಿಸುತ್ತವೆ ಎಂಬ ಡೋಣೂರು ಬಸವರಾಜ ದಾಖಲಿಸಿದ್ದಾರೆ.
ಮಧ್ಯಕಾಲಕ್ಕಿಂತ ಮೊದಲು ಮತ್ತು ನಂತರ ಶಿಕ್ಷಣಕ್ಕೆ ಜಾತಿಯ ವೇಷವಿತ್ತು. ಇಂದು ವರ್ಗದ ವೇಷವಿದೆ. ಎಲ್ಲರಿಗೂ ಉಚಿತ ಶಿಕ್ಷಣವೆಂಬ ಕಲ್ಯಾಣ ರಾಜ್ಯದ ಘೋಷಣೆ ಜನತೆಯ ನಡುವೆ ಜಾರಿಯಾಗಬೇಕು. ಆದರೆ ಅದು ಸಾಧ್ಯವಾಗುತ್ತಿಲ್ಲ. ಕಲ್ಯಾಣ ರಾಜ್ಯವೆಂದರೆ ಜಾತಿ, ಮತ, ಪಂಥ, ಲಿಂಗ, ವರ್ಣ, ವರ್ಗ ಹೀಗೆ ಯಾವುದೇ ಭೇದವಿಲ್ಲದೆ ಎಲ್ಲರನ್ನು ಸಮಾನವಾಗಿ ಕಾಣುವುದು, ಗೌರವಿಸುವುದು. ಕಲ್ಯಾಣ ರಾಜ್ಯದ ಶಿಕ್ಷಣವೆಂದರೆ ಮೇಲಿನ ಯವುದೇ ಭೇದಭಾವನೆ ಮಾಡದೆ ಆಸಕ್ತಿ, ಕೌಶಲ್ಯ ಆಧಾರಿತವಾದ ಆಯ್ಕೆಯ ಉಚಿತ ಶಿಕ್ಷಣ ನೀಡುವುದು. ಇಂದು ಶಿಕ್ಷಣವು ಖಾಸಗೀಕರಣಗೊಳ್ಳುತ್ತಿದೆ. ಸುಮಾರು 250 ಡಿಮ್ಡ ವಿಶ್ವವಿದ್ಯಾಲಯಗಳು ವಿದೇಶಿ ರಾಷ್ಟ್ರಗಳಿಂದ ಆಗಮಿಸುತ್ತಿವೆ. ಬಿಹಾರ, ಓರಿಸ್ಸಾದಲ್ಲಿ ಈ ಪ್ರಕ್ರಿಯ ಆರಂಭವಾಗಿದೆ. ಇದಕ್ಕೆ ನಮ್ಮ ರಾಜಕಾರಣಿಗಳು ಮಣೆ ಹಾಕುತ್ತಿದ್ದಾರೆ. ಇದರಿಂದ ಉಳ್ಳವರಿಗೆ ಮಾತ್ರ ಶಿಕ್ಷಣ ದೊರೆಯುತ್ತದೆ. ಉತ್ತಮ ಹಾಗೂ ಉಚಿತ ಶಿಕ್ಷಣ ಸಿಗದಿದ್ದಾಗ ನಮ್ಮ ಯುವಕರು ಸಹಜವಾಗಿ ಬಡವರಾಗುತ್ತಾರೆ, ಭಯೋತ್ಪಾದಕರಾಗುತ್ತಾರೆ, ಭ್ರಷ್ಟಚಾರಿಗಳಾಗುತ್ತಾರೆ. ಇಂದಿನ ಶಿಕ್ಷಣದಲ್ಲಿ ಒಂದು ಸಾಂಪ್ರದಾಯಿಕ ಶಿಕ್ಷಣವಿದೆ. ಅದು ಬಹುಜನರಾದ ಎಲ್ಲ ಬಡವರಿಗೆ ದೊರಕುತ್ತದೆ. ಆದರೆ ಅದರಿಂದ ಯಾವುದೇ ಉಪಯೋಗವಿಲ್ಲ. ಎಂ.ಎ., ಪಿಎಚ್.ಡಿ. ಓದಿಯೂ ರಸ್ತೆ ಕಾಮಗಾರಿಗೆ ಇಳಿದ ಉದಾಹರಣೆಗಳಿವೆ. (ಪ್ರಜಾವಾಣಿ 28-12-2006 : ಪಿಎಚ್.ಡಿ. ಪಡೆದು ರಸ್ತೆ ಕೆಲಸ) ಇದಕ್ಕೆ ಕಾರಣ ಬದುಕಿಗೂ ಶಿಕ್ಷಣಕ್ಕೂ ಸಂಬಂಧವಿಲ್ಲ. ಕೇವಲ ಬಿ.ಎ. ಓದಿದ ಕಾರಣಕ್ಕಾಗಿಯೇ ನಮ್ಮ ಯುವಕರು ನೇಗಿಲು ಹಿಡಿಯಲಾರರು. ಒಂದು ಹೊರೆ ಹುಲ್ಲನ್ನು ತರಲಾರರು.
ಇನ್ನೊಂದು ವೃತ್ತಿ ಶಿಕ್ಷಣ ಅದು ಅಲ್ಪಸಂಖ್ಯಾತರಾದ ಉಳ್ಳವರ ಶಿಕ್ಷಣ ಅದು ಶ್ರೀಮಂತರಿಗೆ, ರಾಜಕೀಯ ಲಾಭ ಪಡೆದವರಿಗೆ, ಉನ್ನತ ಹುದ್ದೆಯಲ್ಲಿರುವವರಿಗೆ, ಸುಲಿಗೆ ಮಾಡುವವರಿಗೆ ಮಾತ್ರ ದಕ್ಕುತ್ತದೆ.
ಈ ಎರಡು ಕಡೆಗಳಲ್ಲಿ ಪರಂಪರಾಗತ ಜ್ಞಾನಗಳಾದ ಕೃಷಿ, ಕುಶಲಕಲೆ, ನಾಟಿ ವೈದ್ಯ ಪದ್ಧತಿ, ಪಶು ವೈದ್ಯ, ಯೋಗ, ಆಯುವರ್ೇದ, ಮಾನವಿಕಗಳಾದ ಭಾಷೆ, ಸಾಹಿತ್ಯಗಳ, ಸರಳ ಜೀವನ ವಿಧಾನ ಮೊದಲಾದವುಗಳೆಲ್ಲ ಕಡೆಗಣಿಸಲ್ಪಟ್ಟಿವೆ. ಬಸವಣ್ಣನವರು ಸರ್ವರಿಗೂ ಶಿಕ್ಷಣ ನೀಡಿ, ಅದನ್ನು ಖಾಸಗೀಕರಣ ಮಾಡಿದರು. ಹಾಗೆ ನೋಡಿದರೆ ವಯಸ್ಕರ ಶಿಕ್ಷಣ, ಕಾಮರ್ಿಕ ಶಿಕ್ಷಣ ಮತ್ತು ಮಹಿಳಾ ಶಿಕ್ಷಣ ಆರಂಭಿಸಿದ್ದು ಬಸವಣ್ಣನವರೆ. ಅವರು ಎಂದೂ ಉಳ್ಳವರಿಗೆ ಶಿಕ್ಷಣ ನೀಡಲಿಲ್ಲ. ಆಸಕ್ತಿ ಇದ್ದವರಿಗೆ ಶಿಕ್ಷಣ ನೀಡಿದರು. ಇಂದು ಕಲಾ ವಿಭಾಗದ ಆಸಕ್ತಿಯವರಿಗೆ ಇಂಜಿನಿಯರಿಂಗ್ ಮಾಡಿಸುತ್ತೇವೆ. ಇಲ್ಲಿ ವಿದ್ಯಾಥರ್ಿಯ ಆಸಕ್ತಿಗಿಂತ ಪಾಲಕರ ಪ್ರತಿಷ್ಠೆ ದೊಡ್ಡದಾಗಿರುತ್ತದೆ.
ಬಸವಣ್ಣನವರು ಕೌಶಲ್ಯ ಆಧಾರಿತ ಶಿಕ್ಷಣ ನೀಡಿದರು. ಇದರರ್ಥ ಕುಂಬಾರನ ಮಗ ಕುಂಬಾರನೆ ಆಗಬೇಕೆಂದಲ್ಲ. ಹಾಗೆ ನಡೆದದ್ದು ಇಲ್ಲ. ಮೋಳಗೆ ಮಾರಯ್ಯ ಅಸರನಾಗಿದ್ದರೂ ಕಟ್ಟಿಗೆ ಕಾಯಕ ಮಾಡಿದ, ಮದ್ದಳೆ ಬಾರಿಸುವ ಅಲ್ಲಮ ಶೂನ್ಯ ಪೀಠ ವೇರಿದ, ಹೀಗಾಗಿ ಪ್ರಾವಿಣ್ಯ ಮತ್ತು ಪರಿಣತಿ ಆಧಾರದ ಶಿಕ್ಷಣ ನೀಡಿದರು.
ಇನ್ನೊಂದು ವಿಪಯರ್ಾಸದ ಸಂಗತಿ ಎಂದರೆ ಸೆಗಣಿಯನ್ನೇ ನೋಡಿರದವರು ಕೃಷಿಯಲ್ಲಿ ಎಮ್.ಎಸ್ಸಿ, ಡಾಕ್ಟರೇಟ್ ಪಡೆಯುತ್ತಿದ್ದಾರೆ. ಪತ್ರಿಕೆಯಲ್ಲೊಮ್ಮೆ ಚಚರ್ೆಗೆ ಬಂದ ವಿಷಯ ನೆನಪಾಗುತ್ತದೆ. ಶಾಲೆಯಲ್ಲಿ ಮಾಸ್ತರ ಕಾಮಧೇನು ಎಂದರೇನು ಎಂಬ ಪ್ರಶ್ನೆಗೆ ಮಗುವಿನ ಉತ್ತರ ಬೇಕಾದಾಗಲ್ಲೆಲ್ಲ ಹಾಲು, ಮೊಸರು, ಬೆಣ್ಣೆ, ಕೊಡುವ ನಮ್ಮ ಮನೆಯ ಫ್ರಿಜು ಎಂದು ಉತ್ತರಿಸಿದ್ದು, ಶಿವದೇವಾಲಯದ ಎದುರು ಇದ್ದ ನಂದಿ (ಎತ್ತು) ಕುರಿತು ಮಗು ವಾಟೀಜ್ ಧಿಸ್ (ಇದು ಏನು) ಎಂದು ತಾಯಿಗೆ ಕೇಳಿದಾಗ, ತಾಯಿ ಧಿಸ್ ಇಜ್ ಕೌ (ಇದು ಆಕಳು) ಎಂದು ಉತ್ತರಿಸಿದ್ದು, ಆಧುನಿಕ ಶಿಕ್ಷಣದ ಅಧೋಗತಿಗೆ ಹಿಡಿದ ಕನ್ನಡಿಯಾಗಿದೆ.
ಆಧುನಿಕ ಶಿಕ್ಷಣದ ಇನ್ನೂ ಎರಡು ಅಪಾಯಗಳೆಂದರೆ, ಹೆಚ್ಚು ಓದಿ ಕಡಿಮೆ ದುಡಿಯುವುದು ಮತ್ತು ಬೇರೊಬ್ಬರನ್ನು ಮೋಸ ಮಾಡುವುದು. ಇದರಿಂದ ಮನುಷ್ಯ ಮನುಷ್ಯರ ಮಧ್ಯ ಕಂದರವುಂಟಾಗುತ್ತಿದೆ. ಅದಕ್ಕೆ ಬಸವಣ್ಣವರು
ಅಕ್ಷರ, ಗಣಿತ, ಗಾಂಧರ್ವ ಜ್ಯೋತಿಷ್ಯ
ತರ್ಕ, ವ್ಯಾಕರಣ, ನಿಘಂಟು, ಸಾಲಿಹೋತೃ, ಛಂದಸ್ಸು
ಗ್ರಹವಾದ .............................
ಇವೆಲ್ಲವಂ ಕಲಿತಡೇನು ?
ಚೌಷಷ್ಟಿವಿದ್ಯ ಕಲಾ ಪ್ರವೀಣನೆನಿಸಿ ಕೊಂಬನಲ್ಲದೆ
ಲಿಂಗಭಕ್ತನೆನಿಸಿಕೊಂಬುವುದಿಲ್ಲ.
ಲಿಂಗವುಳ್ಳ ನಿಜ ಶರಣಗೆ ಇವರೆಲ್ಲರೂ (ಸರಿಬಾರರು)
ಸಹಜ ಸದ್ಭಕ್ತಿಯಿಲ್ಲದವನೊಲ್ಲ.
ನಮ್ಮ ಕೂಡಲ ಸಂಗಮ ದೇವರು ಎಂದಿದ್ದಾರೆ.
ಹೀಗೆ ಅಕ್ಷರ ಬಲ್ಲವರೆಲ್ಲ ಜ್ಞಾನಿಗಳಾಗಿರುವುದಿಲ್ಲ. ಅಂತೆಯೇ ರೂಸೋ ಹೇಳುತ್ತಾನೆ. ತನ್ನ ಶಿಷ್ಯರು ಅನಕ್ಷರಸ್ಥರಿರಬಹುದು. ಆದರೆ ಆಜ್ಞಾನಿಗಳಾಗಿರುವುದಿಲ್ಲವೆಂದು. ತನ್ನತಾ ತಿಳಿಯುವ ಜ್ಞಾನ ನಿಜವಾದ ಶಿಕ್ಷಣ. ವೇದಶಾಸ್ತ್ರ ಓದಿದ ಮಾತ್ರಕ್ಕೆ ಜ್ಞಾನಿಗಳಲ್ಲ. ಕವಿ ಗಮಕಿಯಾದಿ ವಾಗ್ಮಿಗಳು ಹಿರಿಯರಲ್ಲವೆಂದು ಹೇಳುವ ಬಸವಣ್ಣನವರು ನಟನಿ ಬಾಣ ವಿಲಾಸಿ ಸುವಿದ್ಯವ ಕಲಿತ ದೊಂಬನೇನು ಕಿರಿಯೆನೆ ? ಎಂದು ಪ್ರಶ್ನಿಸುವ ಮೂಲಕ ಜ್ಞಾನವೆಂದರೆ ಗುಣವೆಂದೂ ಸಾರುತ್ತಾರೆ. ಹೀಗೆ ಚಾರಿತ್ರಿಕ, ಮೌಲ್ಯ ಆಧಾರಿತವಾದ ಶಿಕ್ಷಣ ನೀಡಿದ ಶರಣರ ಪಾರಂಪರಿಕ ಜ್ಞಾನದ ಶಿಕ್ಷಣ ಇಂದು ನಮಗೆ ಬೇಕು. ಏಕೆಂದರೆ ಓದು (ಶಿಕ್ಷಣ) ನಮ್ಮೊಳಗೆ ಉಪಯೋಗವಾಗಬೇಕು. ಇಂದು ಹಳ್ಳಿಯಲ್ಲಿ ಓದಿದವನು ಪಟ್ಟಣಕ್ಕೆ ಮುಖ ಮಾಡಿದರೆ, ಪಟ್ಟಣದಲ್ಲಿ ಓದಿದವನು ಅಮೇರಿಕಾಕ್ಕೆ ಮುಖ ಮಾಡುತ್ತಾನೆ. ಅಂಥವರಿಂದ ತಮ್ಮನ್ನು ರೂಪಿಸಿದ ಪರಿಸರಕ್ಕೆ ಏನನ್ನು ನಿರೀಕ್ಷಿಸಲು ಸಾಧ್ಯವಿದೆ.
ಶಿಕ್ಷಣ ಸಮಷ್ಟಿ ಪ್ರಜ್ಞೆ ಹೊಂದಿರಬೇಕೆಂಬುದು ಬಸವಣ್ಣನವರ ಆಶಯವಾಗಿತ್ತು. ಪ್ರಾಥಮಿಕ ಶಿಕ್ಷಣದಲ್ಲಿಯೇ ಅರಣ್ಯ, ಕೃಷಿ, ಕುಶಲಕಲೆ ಗುಡಿ ಕೈಗಾರಿಕೆ, ವಿಷಯಾಧಾರಿತ ಶಿಕ್ಷಣವಿರಬೇಕು. ಅದು ಸ್ವಾವಲಂನೆಯ ಬದುಕಿನ ಪ್ರಜ್ಞೆಯನ್ನು ಮೂಡಿಸುವಂತಾಗಬೇಕು. ಬದುಕುವುದೆಂದರೆ ಬರೀ ಉಸಿರಾಡುವುದಲ್ಲ. ಕ್ರಿಯಾಪೂರ್ಣವಾಗಿರುವುದು ನಮ್ಮ ಅಂಗಾಂಗಳನ್ನು, ಇಂದ್ರಿಯಗಳನ್ನು ನಮ್ಮ ಇರುವಿಕೆಗೆ ನೆರವಾಗುವ ಎಲ್ಲ ಶಕ್ತಿಗಳನ್ನು ಪೂರ್ಣವಾಗಿ ಬಳಸಿ ಕೊಳ್ಳುವುದು ಎಂಬ ರೂಸೋನ ಅಭಿಪ್ರಾಯವು ಸ್ವಾವಲಂಬಿತ ಶಿಕ್ಷಣ ಪ್ರಜ್ಞೆಗಾಗಿ ಹೇಳಿದಂತಿದೆ. ಹಾಗೆಯೇ ಬಸವಣ್ಣನವರು ಕಾಯಕದಿಂದ ಅರ್ಥ ಮತ್ತು ಪಾರಮಾರ್ಥ ಪಡೆದ ಶಿಕ್ಷಣ ಬೋಧಿಸಿದರು. ಚಾರಿತ್ರ್ಯ ನೈತಿಕತೆಯ ಆಧಾರಿತ ಶಿಕ್ಷಣದಿಂದ ಉತ್ತಮ ಮನುಷ್ಯರ ಉತ್ತಮ ಸಮಾಜಕಟ್ಟಲು ಸಾಧ್ಯವಿದೆ ಎಂಬುವುದನ್ನು ಹೇಳಿಕೊಟ್ಟರು. ನಮಗಿಂದು ಅಂಥ ಶಿಕ್ಷಣದ ಅವಶ್ಯಕವಿದೆ. ಹೀಗೆ ಬಸವಣ್ಣನವರ ಶೈಕ್ಷಣಿಕ ಆಲೋಚನೆಗಳು ಜೀವಪರ ಜನಪರವಾಗಿದ್ದು, ಅವುಗಳನ್ನು ಅಳವಡಿಸಿಕೊಂಡರೆ, ಶಾಂತಿ ಪ್ರೀತಿಯ ಅಭಿವೃದ್ಧಿಶೀಲ, ಕಲ್ಯಾಣ ರಾಷ್ಟ್ರ ಕಟ್ಟಬಹುದು ಮತ್ತು ಇಂದಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.

No comments:
Post a Comment