ಮಕ್ಕಳ ಕಲಿಕೆ : ಪಾಲಕರ ಜವಾಬ್ದಾರಿ
-ಡಾ. ಬಸವರಾಜ ಬಲ್ಲೂರ
ಎಡದ ಕೈಯಲು ಹಾಲು ಬಟ್ಟಲು
ಬಲದ ಕೈಯಲು ಓಜುಗಟ್ಟಿಗೆ
ಆವಾಗ ಬಂದಾನೆಮ್ಮಯ್ಯ
ಬಡಿದು ಹಾಲು ಕುಡಿಸುವ ತಂದೆ...
ಎಂದುದಾಗಿ ಕೂಡಲ ಸಂಗಮ ದೇವಯ್ಯ ತಾನೆ
ಭಕ್ತಿಯ ಪಥವ ತೋರುವ ತಂದೆ
- ಬಸವಣ್ಣ (389)
ಬಸವಣ್ಣನವರ ಮಹತ್ವದ ವಚನವಿದು, ಪಾಲಕರೆಂದರೆ ಮಕ್ಕಳ ಬಗೆಗಿನ ಕೇವಲ ಕರ್ತವ್ಯ ನಿಭಾಯಿಸುವ, ಖಚರ್ು ಮಾಡುವ ಆಕೃತಿಯೇ ಅಲ್ಲ, ಬೇಕಾದುದನ್ನು ಕೊಡಿಸುವ ಕಾಮಧೇನುವೂ ಅಲ್ಲ. . ಬದಲಾಗಿ ಒಂದು ಕೈಯಲ್ಲಿ ಹಾಲು ಬಟ್ಟಲು ಇನ್ನೊಂದು ಕೈಯಲ್ಲಿ ಕೋಲು ಹಿಡಿವ ಪ್ರೀತಿಯ ಆಗರ ಮತ್ತು ಶಿಕ್ಷೆಯ ಮಾದರಿ ಎರಡೂ ಆಗಿರಬೆಕು. ಎಂಬುದು ಈ ವಚನದ ಆಶಯ. ಮನಷ್ಯರ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾದ ಶಿಕ್ಷಣ ಅದು ಏಕಮುಖ ಪ್ರಕ್ರಿಯ ಅಲ್ಲ. ಅಲ್ಲಿ ಶಿಕ್ಷಕ ವಿದ್ಯಾಥರ್ಿ ಹಾಗೂ ಪೋಷಕ ಸೇರಿ ಪರಿಪೂರ್ಣಗೊಳ್ಳುತ್ತದೆ. ದುರಂತದ ಸಂಗತಿಯೆಂದರೆ ಇಂದು ಪೋಷಕರು ತಮ್ಮ ಜವಾಬ್ದಾರಿಗಳನ್ನು ಸರಯಾಗಿ ನಿಭಾಯಿಸುವಲ್ಲಿ ಸೋಲುತ್ತಿದ್ದಾರೆ.
ಒಂದು ಕಾಲವಿತ್ತು ಒಬ್ಬ ಅರಸನಿಗೆ ಅನೇಕ ಮಕ್ಕಳಿದ್ದಾಗ, ಹಿರಿಯ ಮಗನಿಗೆ ಪಟ್ಟಕಟ್ಟಿ, ಉಳಿದವರ ಕೈಯಲ್ಲಿ ಒಂದು ಕತ್ತಿ ಹಾಗೂ ಒಂದು ಕುದುರೆ ನೀಡಿ, ಇವೇ ನಿಮ್ಮ ಸಂಪತ್ತು. ನಿಮ್ಮ ತೋಳ್ಬಲ ಮತ್ತು ಜ್ಞಾನದ ಸಾಮಥ್ರ್ಯದಿಂದ ಸಂಪತ್ತು ಸಾಮ್ರಾಜ್ಯದ ಒಡೆಯರಾಗಿ ಎಂದು ಹರಸುತ್ತಿದ್ದರು. ಆದರೆ ಇಂದು ರಾಜ ಪ್ರಭುತ್ವವೂ ಇಲ್ಲ, ಕತ್ತಿ-ಕುದುರೆಗಳೂ ಇಲ್ಲ, ಆದಾಗ್ಯೂ ಮಕ್ಕಳಿಗಾಗಿ ಸಂಪತ್ತು ಬೇಕಲ್ಲ. ಮಕ್ಕಳಿಗೆ ಕೊಡಿಸುವ ಶಿಕ್ಷಣವೇ ಒಂದು ಸಂಪತ್ತು. ಇದು ಆಧುನಿಕ ಯುಗ, ಸ್ಪಧರ್ಾತ್ಮಕ ಯುಗ, ಮಾಹಿತಿ ತಂತ್ರಜ್ಞಾನದ ಯುಗ, ವಿಶೇಷವಾಗಿ ಕಲಿಕೆ ಮತ್ತು ಜ್ಞಾನದ ಹಸಿವಿನ ಯುಗ.ಆದ್ದರಿಂದ ಮಕ್ಕಳ ಕಲಿಕೆಯ ಪರಿಪೂರ್ಣತೆಯಲ್ಲಿ ಪಾಲಕರ ಜವಾಬ್ಬಾರಿ ಹೆಚ್ಚಾಗಿದೆ.
ಮನೆಯೇ ಮೊದಲು ಪಾಠ ಶಾಲೆ :
ತಾಯಿ ಮೊದಲ ಗುರು, ಮನೆಯೇ ಮೊದಲ ಪಾಠ ಶಾಲೆ ಎಂಬ ಮಾತಿದೆ. ಆದರೆ ಇಂದು ಮನೆ ಪರಿಕಲ್ಪನೆ ಬದಲಾಗಿದೆ. ಅವಿಭಕ್ತ ಕುಟುಂಬಗಳು ಇಲ್ಲವಾಗಿವೆ. ಗಂಡ ಹೆಂಡತಿ ಸಾಧ್ಯವಾದರೆ ಒಂದು ಮಗು ಇದು ಆಧುನಿಕ ಕುಟುಂಬಗಳ ಸ್ವರೂಪ ಇಂಥಲ್ಲಿ ಗಂಡ ಹೆಂಡತಿ ದುಡಿಯುವವರಿದ್ದರೆ. ಮಕ್ಕಳ ಸಂಬಂಧ ಅಷ್ಟೇ, ಎಷ್ಟೋ ತಂದೆಯವರು ರವಿವಾರದ ತಂದೆ(ಸಂಡೆ ಫಾದರ) ಆಗಿದ್ದಾರೆ.
ಕರ್ತವ್ಯ ಅಲ್ಲ ಧರ್ಮ ಃ
ಮಕ್ಕಳಿಗೆ ಪಾಲಕರು ಶಿಕ್ಷಣ ಕಲಿಸುವುದು ಒಂದು ಕರ್ತವ್ಯವಲ್ಲ, ಅದೊಂದು ಸಹಜ ಧರ್ಮ ಅದಕ್ಕೆಂದೆ ಸರ್ವಜ್ಞ ಕವಿ ಹೇಳುತ್ತಾನೆ, ವಿದ್ಯೆ ಕಲಿಸದ ತಂದೆ, ಬುದ್ಧಿ ಕೊಡದ ಗುರುವು, ಬಿದ್ದಿರಲು ಬಂದು ನೋಡದ ತಾಯಿ ಶುದ್ದ ವೈರಿಗಳು ಸರ್ವಜ್ಞ ಎನ್ನುತ್ತಾನೆ. ವಾಸ್ತವವಾಗಿ ಶಿಕ್ಷಕ ಮೂರನೆ ಪಾಲಕನಾಗಿರುತ್ತಾನೆ. ಎಷ್ಟೋ ಸಲ ಪಾಲಕರು ತಮ್ಮ ಒಂದೆರಡು ಮಕ್ಕಳ ಕಿರಿಕಿರಿಯನ್ನು ಸಹಿಸುವುದಿಲ್ಲ. ಆದರೆ ಒಬ್ಬ ಶಿಕ್ಷಕ ನೂರಾರು ವಿದ್ಯಾಥರ್ಿಗಳನ್ನು ಹೇಗೆ ಗಮನಿಸುತ್ತಾನೆ, ಸಹಿಸಿಕೊಳ್ಳುತ್ತಾನೆ ಅನ್ನುವ ಸತ್ಯ ನಮ್ಮ ಪಾಲಕರ ಅರಿವಿಗೆ ಇಲ್ಲ.
ಮಕ್ಕಳ ಕಡೆ ಒಂದು ಗಮನ ಃ
ಮಕ್ಕಳು ಏನು ಮಾಡುತ್ತಿದ್ದಾರೆ. ಯಾರೊಂದಿಗೆ ಇದ್ದಾರೆ. ಏನು ಓದುತ್ತಿದ್ದಾರೆ ಎಂಬುವುದರ ಬಗ್ಗೆ ಪಾಲಕರು ಒಂದು ಗಮನವಿಡಬೇಕು. ಅದರರ್ಥ ಪತ್ತೆದಾರಿಕೆ ಅಲ್ಲ. ಅವರ ಎಲ್ಲಾ ವಿಷಯಗಳನ್ನು ಆಪ್ತವಾಗಿ ಗಮನಿಸಬೇಕು. ಪಾಲಕರು ಎದುರಾದಾಗ ಪುಸ್ತಕ ಮುಚ್ಚಿಟ್ಟರೆ ಬೇರೆ ಏನನ್ನೋ ಓದುತ್ತಿದ್ದಾರೆ ಎಂದರ್ಥ ಅಥವಾ ಎಷ್ಟೋ ಸಲ ಪುಸ್ತಕ ತೆರೆದೆ ಇರುತ್ತದೆ. ಆದರೆ ಪುಟಗಳು ತಿರುವಿ ಹಾಕುವುದಿಲ್ಲ. ಒಂದೇ ಪುಟದಲ್ಲಿ ಅನೇಕ ತಾಸು ಇರಬಹುದು. ಇದಕ್ಕೆ ಮಾನಸಿಕ ಖಿನ್ನತೆ ಅಥವಾ ಇನ್ನಾವೋದು ಕಾರಣಕ್ಕೆ ಹಾಗಾಗಬಹುದು. ಮನೆಯಲ್ಲಿ ಪಾಲಕರು ನಡೆಸುವ ಅನುಪಯುಕ್ತ, ವಿವಾದಿತ ಸಂಭಾಷಣೆ ಅಥವಾ ಅಸಂಬದ್ಧ ವರ್ತನೆಗಳ ಕಡೆಗೆ ಗಮನ ಇರಬಹುದು. ಆದರೆ ಪಾಲಕರು ಇದಾವುದನ್ನು ಪರಿಗಣಿಸುವುದಿಲ್ಲ.
ಕಷ್ಟಪಟ್ಟು ಓದಬಾರದು ಃ
ಮಕ್ಕಳಿಗೆ ಪೋಷಕರು ಯಾವುದೇ ಭಾರ ಹಾಕಬಾರದು ಯಾವಾಗಲು ವಿದ್ಯಾಥರ್ಿಗಳು ಕಷ್ಟಪಟ್ಟು ಓದಬಾರದು, ಇಷ್ಟ ಪಟ್ಟು ಓದಬೇಕು. ಮಕ್ಕಳ ಇಷ್ಟಗಳನ್ನು ಅನೇಕ ಸಲ ಪಾಲಕರು ಕಡೆಗಣಿಸಿ ತಮಗೆ ಇಷ್ಟವಾದ ಕೋಸರ್ುಗಳಿಗೆ ಸೇರಿಸುವುದರಿಂದ ವಿದ್ಯಾಥರ್ಿಗಳು ಕಷ್ಟಪಟ್ಟು ಓದುವಂತಾಗುತ್ತದೆ. ತಮ್ಮ ಮಕ್ಕಳ ಅರ್ಹತೆ ಅವರ ಶಕ್ತಿ ಸಾಮಥ್ರ್ಯ ತಿಳಿದುಕೊಳ್ಳುವ ವ್ಯವಧಾನ ಇಂದಿನ ಪಾಲಕರಿಗಿಲ್ಲ. ಬಹುತೇಕ ಸಂದರ್ಭಗಳಲ್ಲಿ ಪಾಲಕರಿಗೆ ಸ್ವ-ಪ್ರತಿಷ್ಠೆ ಹೆಚ್ಚಾಗಿರುತ್ತದೆ. ಹಾಗಾಗಿ ಮಕ್ಕಳ ಭವಿಷ್ಯ ಹಾಳುಮಾಡುತ್ತಾರೆ. ಸ್ನೇಹಿತರ ಮಕ್ಕಳು ಹೋಗುವ ಶಾಲೆಗೆ ತಮ್ಮ ಮಕ್ಕಳು ಹೋಗಬೇಕು. ನೆರೆ ಮನೆಯವರ ಮಕ್ಕಳು ಓದುವ ಕೋಸರ್ುಗಳನ್ನು ತಮ್ಮ ಮಕ್ಕಳೂ ಓದಬೇಕೆಂಬ ಹಠದಿಂದ ವಿದ್ಯಾಥರ್ಿಗಳ ಭವಿಷ್ಯ ಬಲಿತೆಗೆದುಕೊಂಡ ಉದಾಹರಣೆಗಳು ಹಲವಾರು. ಪ್ರತಿಯೊಬ್ಬರು ತಮ್ಮ ಮಕ್ಕಳು ಇಂಜಿನಿಯರು ಅಥವಾ ವೈದ್ಯರಾಗಬೇಕೆಂದು ಅಪೇಕ್ಷ ಪಡುತ್ತಾರೆ. ಆದರೆ ತಮ್ಮ ಮಕ್ಕಳು 'ಉತ್ತಮ ಮನುಷ್ಯ'ರಾಗಬೇಕು ಎಂಬ ಆಲೋಚನೆ ಮಾಡುತ್ತಿಲ್ಲ. ಮನುಷ್ಯರ ಜೀವ ಧಾತು ಆಹಾರ. ಅದನ್ನು ಬೆಳೆಯುವ ಉತ್ತಮ ಕೃಷಿಕನಾಗಬೇಕು ಎಂದು ಯಾರು ಇಷ್ಟಪಡುವುದಿಲ್ಲ.
ತಮ್ಮ ಮಕ್ಕಳು ಹೆಚ್ಚು ಅಂಕ ಗಳಿಸಬೇಕು ಎಂಬ ಆಲೋಚನೆಗಿಂತ ನೆರೆಮನೆಯವರ ಮಕ್ಕಳಿಗಿಂತ ಹೆಚ್ಚು ಅಂಕ ಪಡೆಯಬೇಕು ಎಂಬ ದುರಾಲೋಚನೆಗಳೇ ಹೆಚ್ಚು. ಪಾಲಕರು ಯಾವತ್ತು ಅಭಿಪ್ರಾಯ ಹೇರುವ ಸರಕಾಗಬಾರದು. ಬದಲಿಗೆ ವಿದ್ಯಾಥರ್ಿಗಳ ಮನಸ್ಥಿತಿಯನ್ನು ಗ್ರಹಿಸುವ ಸಾಧನವಾಗಬೇಕು. ಯಾವತ್ತು ಮಕ್ಕಳೊಂದಿಗೆ ಬೆರೆತು ಆಟ ಆಡುವ, ಪಾಠ ಮಾಡುವ ಗೋಜಿಗೆ ಹೋಗದೆ ಕೇವಲ ಶಿಕ್ಷಕರನ್ನು ಮಾತ್ರ ಗುರಿಮಾಡಿ. ಮಕ್ಕಳ ವೈಫಲ್ಯತೆಗಳನ್ನು ಎತ್ತಿತೋರಿಸುತ್ತಾರೆ. ಪಾಲಕರು ನೀನು ಏನು, ಹೇಗೆ ಕಲಿತೆಯೆಂದು ಕೇಳದೆ ಯಾರು ಕಲಿಸಿದ್ದಾರೆ ಎಂದು ಕೇಳುವ ಪರಿಪಾಠ ಬೆಳೆದಿದೆ.
ಉತ್ತಮ ಪಾಲಕ :
ಒಬ್ಬ ಉತ್ತಮ ಪಾಲಕ ಹೇಗಿರಬೇಕೆಂಬುವುದನ್ನು ಅಮೇರಿಕ ಅಧ್ಯಕ್ಷ ಅಬ್ರಾಹಂ ಲಿಂಕನ ತನ್ನ ಮಗನ ಶಿಕ್ಷಕನಿಗೆ ಬರೆದ ಪತ್ರದ ಸಾಲುಗಳು ಹೀಗಿವೆ.
ಪ್ರಿಯ ಬಂಧು,
ನಾ ಬಲ್ಲೆ ಎಲ್ಲರೂ ನ್ಯಾಯಪರರಲ್ಲ, ಎಲ್ಲರೂ ಸತ್ಯವಂತರಲ್ಲ ಎಂಬುದನು, ಆದರೆ ಪ್ರತಿಯೊಬ್ಬ ಮೋಸಗಾರನಿಗೆ ಪ್ರತಿಯಾಗಿ ಒಬ್ಬ ಧೀರೋದಾತ್ತ ; ಪ್ರತಿಯೊಬ್ಬ ಸ್ವಾಥರ್ಿ ರಾಜಕಾರಣಿಗೆ ಬದಲು ಒಬ್ಬ ನಿಷ್ಠಾವಂತ ನಾಯಕ ; ಪ್ರತಿಯೊಬ್ಬ ಶತ್ರುವಿಗೆ ಬದಲು ಒಬ್ಬ ಸನ್ಮಿತ್ರನಿರುವನೆಂಬುದನು ಕಲಿಸು. ಇದಕ್ಕೆ ಸಾಕಷ್ಟು ಸಮಯ ಬೇಕೆಂಬುದು ನನಗೆ ಗೊತ್ತಿದೆ.
ಗಳಿಸಿದ ಒಂದು ಡಾಲರು ಸಿಕ್ಕ ನೂರು ಡಾಲರ್ಗಿಂತ ಹೆಚ್ಚು ಬೆಲೆಯುಳ್ಳದೆಂಬುದನ್ನು ಕಲಿಸು.
ಅಸೂಯೆಯಿಂದ ದೂರವಿರುವುದನ್ನು ಕಲಿಸು. ಸೋಲನ್ನು ಸ್ವೀಕರಿಸುವುದನ್ನು ಮತ್ತು ಗೆಲುವಿನಲ್ಲಿ ಹಷರ್ಿಸುವುದನ್ನು ಕಲಿಸು.
ಪುಸ್ತಕಗಳ ಅದ್ಭುತಗಳನ್ನು ಅವನಿಗೆ ಕಲಿಸು, ಜೊತೆಗೆ ಆಕಾಶದ ಹಕ್ಕಿಗಳನ್ನು, ಹಾರಾಡುವ ದುಂಬಿಗಳನ್ನು, ಮತ್ತು ಹಸಿರು ಮಲೆಯ ಹೂವುಗಳನ್ನು ಕುರಿತು ಧ್ಯಾನಿಸಲು ಅನುವು ಮಾಡಿಕೊಡು.
ಶಾಲೆಯಲ್ಲಿ ಮೋಸದಿಂದ ಉತ್ತೀರ್ಣನಾಗುವುದಕ್ಕಿಂತಲೂ ಫೇಲಾಗುವುದು ಹೆಚ್ಚು ಗೌರವವೆಂಬುದನ್ನು ಕಲಿಸು.
ಎಲ್ಲರೂ ತಪ್ಪೆಂದಾಗಲೂ ತಾನು ನಂಬಿದ ವಿಚಾರಗಳಲ್ಲಿ ನಂಬಿಕೆ ಉಳಿಸಿಕೊಳ್ಳಲು ಕಲಿಸು.
ವಿನಯವಂತರಲ್ಲಿ ವಿನಯದಿಂದ ಮತ್ತು ಒರಟು ಜನರಲ್ಲಿ ಒರಟುತನದಿ ನಡೆಯುವುದನ್ನು ಕಲಿಸು. ಗೇಲಿ ಮಾಡುವವರನ್ನು ದೂರವಿಡುವುದನ್ನು ಕಲಿಸು, ಅತಿಯಾಗಿ ಸಿಹಿಯಾಗಿ ಮಾತನಾಡುವವರೊಡನೆ ಎಚ್ಚರಿಕೆಯಿಂದಿರುವುದನ್ನು ಕಲಿಸು.
ಜನರೆಲ್ಲ ಒಂದೇ ಕಡೆ ಹೋಗುತ್ತಿದ್ದಾರೆಂಬ ಕಾರಣಕ್ಕಾಗಿ ಆ ಗುಂಪನ್ನು ಅನುಸರಿಸದಿರುವ ಮನಸ್ಥೈರ್ಯವನ್ನು ತುಂಬು.
ಎಲ್ಲವನ್ನೂ ಕೇಳಿಸಿಕೊಳ್ಳುವುದನ್ನು ಕಲಿಸು. ಆದರೆ ತಾನು ಕೇಳಿಸಿಕೊಂಡಿದ್ದನ್ನೆಲ್ಲ ಒಪ್ಪದೆ, ಪ್ರಮಾಣೀಕರಿಸಿ ಒಳ್ಳೆಯದನ್ನು ಮಾತ್ರ ತೆಗೆದುಕೊಳ್ಳಬೇಕೆಂಬುದನ್ನು ಕಲಿಸು.
ತನ್ನ ಬುದ್ಧಿ ಹಾಗೂ ಶಕ್ತಿಯನ್ನು ಅತಿ ಹೆಚ್ಚು ಬೆಲೆ ತೆರುವವನಿಗೆ ಬಳಸುವುವನ್ನು ಕಲಿಸು. ಆದರೆ ತನ್ನ ಹೃದಯ ಮತ್ತು ಆತ್ಮಕ್ಕೆ ಎಂದಿಗೂ ಬೆಲೆಯ ಚೀಟಿಯನ್ನು ಅಂಟಿಸದಿರುವುದನ್ನು ಕಲಿಸು.
ಕಿರುಚಿತ್ತಿರುವ ಗುಂಪೇ ಎದುರಾದರೂ ಅದಕ್ಕೆ ಕಿವಿಗೊಡದೆ ಯಾವುದು ತನಗೆ ಸರಿಯೆಂದು ಕಂಡುಬರುತ್ತದೆಯೋ ಅದಕ್ಕಾಗಿ ನಿಂತು ಹೋರಾಡುವುದನ್ನು ಕಲಿಸು.
ಮೃದುವಾಗಿ ನಡೆಸಿಕೋ, ಆದರೆ ಅತಿಯಾಗಿ ಮುದ್ದಿಸಬೇಡ. ಏಕೆಂದರೆ ಕಬ್ಬಿಣ ಉಕ್ಕಾಗಬೇಕಾದರೆ ಬೆಂಕಿಯಿಂದ ಕಾಯಿಸಲೇಬೇಕು.
ಅವನಲ್ಲಿ ಕಾತುರತೆಯಿಂದಿರುವ ದೈರ್ಯ ತುಂಬಿಸು, ಎಂದಿಗೂ ಎದೆಗುಂದದೆ ಇರುವಂತಹ ತಾಳ್ಮೆಯನ್ನು ಕಲಿಸು.
ಅವನಲ್ಲಿ ಆಳವಾದ ಆತ್ಮವಿಶ್ವಾಸವನ್ನು ಮೂಡಿಸು, ಏಕೆಂದರೆ ಅವನಿಗೆ ಇದರಿಂದ ಮನುಜಕುಲದಲ್ಲಿ ಆಳವಾದ ವಿಶ್ವಾಸ ಮೂಡಲು ಸಾಧ್ಯ.
ಕಣ್ಣೀರಿನಲ್ಲಿ ಅವಮಾನವಿಲ್ಲವೆಂಬುದನ್ನು ಕಲಿಸು.
ಇದು ಒಂದು ದೊಡ್ಡ ಜವಾಬ್ದಾರಿ........ ಅದು ಮುಗ್ಧಮಗು, ಆದರೆ ನೀನು ಯೋಚಿಸು, ಇದು ನಿನ್ನಿಂದ ಸಾಧ್ಯವೆ
ಹೀಗೆ ಹೇಳುವ ಧೈರ್ಯ, ಈ ಮಾದರಿಯ ಗುಣಗಳು ನಮ್ಮಲ್ಲಿ ಎಷ್ಟು ಪಾಲಕರಿಗೆ ಇವೆ ಎಂಬುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಮರ್ಥ ಪಾಲಕರು ಸಮರ್ಥ ನಾಯಕರನ್ನು ನೀಡಿದ್ದಾರೆ. ಜೀಜಾಮಾತೆ ಶಿವಾಜಿಯನ್ನು ಬೆಳೆಸಿದ್ದು, ಐನ್ಸ್ಟಿನ್, ಅಬ್ದುಲ್ ಕಲಾಂ ಅವರಿಗೆ ಅವರ ಪಾಲಕರು ನೀಡಿದ ಪ್ರೇರಣೆಗಳಿಂದ ಅವರು ನಾಯಕತ್ವದ ವ್ಯಕ್ತಿತ್ವವನ್ನು ರೂಪಿಸಿಕೊಂಡಿರುವ ಹಲವಾರು ಉದಾಹರಣೆಯ ಮಾದರಿಗಳು ನಮ್ಮಲ್ಲಿವೆ. ಉತ್ತಮ ಪಾಲಕರಾಗಲು ತತ್ವಶಾಸ್ತ್ರ ಓದಬೇಕಿಲ್ಲ, ಸಂಪತ್ತಿನ ವಿನಿಯೋಗ ಮಾಡಬೇಕಿಲ್ಲ. ಮಕ್ಕಳಿಗೆ ಬಾಲ್ಯದಲ್ಲಿ ಮಾರ್ಗದರ್ಶಕರಾಗಿ, ಯವ್ವನದಲ್ಲಿ ಆಪ್ತ ಸ್ನೇಹಿತರಾಗಿ, ಶಿಸ್ತು ಮಮತೆ, ಹಾಗೂ ಬದ್ಧತೆಗಳ ಸಂಬಂಧದಿಂದ ಬೆಸೆದಿರಬೇಕು. ಮಕ್ಕಳ ಪ್ರತಿಯೊಂದು ಸಾಧನೆ ಎತ್ತಿತೋರಿಸಬೇಕು, ಸಂಬಂಧಿಕರ ಮುಂದೆ ಅವುಗಳ ಕುರಿತು ಅಭಿಮಾನದಿಂದ ಹೇಳಬೇಕು. ಅದು ಶಾಲೆಯಲ್ಲಿ ಗಳಿಸಿದ ಅಂಕ ಇರಬಹುದು. ಅಥವಾ ಅಡಿಗೆ ಮನೆಯಲ್ಲಿ ತಾಯಿಗೆ ಸಹಾಯ ಮಾಡಿದ್ದಿರಬಹುದು. ಮಕ್ಕಳ ಮೇಲೆ ಪರಿಣಾಮ ಬೀರುವ ಕೆಟ್ಟ ಚಟ, ಅಮಾನವೀಯ ವರ್ತನೆ ಇರಬಾರದು ಏಕೆಂದರೆ ಮಕ್ಕಳು ತಮಗರಿವಿಲ್ಲದೆ ಪಾಲಕರನ್ನು ಅನುಕರಿಸುತ್ತಾರೆ. ಅಂಚೆ ಕಚೇರಿಯಿಂದ ಹಿಡಿದು ಬ್ಯಾಂಕ ಕೆಲಸಗಳ ವರೆಗೆ ಮಕ್ಕಳನ್ನು ವ್ಯವಹಾರಿಕವಾಗಿ ತೊಡಗಿಸಬೇಕು. ಹೊಸ ಮನೆ, ಹೊಲ ಏನೆ ಖರಿದಿಗಳು ಇರುವಾಗ ಮಕ್ಕಳ ಅಭಿಪ್ರಾಯ ಕೇಳಬೇಕು. ಮಕ್ಕಳು ಹತಾಶರಾದಾಗ ಕಾರಣ ಕೇಳಿ ಪಾಲಕರು ಸಹಾಯ ಮಾಡಬೇಕು. ಓದುವ ಬರೆಯುವ ಹವ್ಯಾಸ ಬೆಳೆಸಬೇಕು. ಅದು ಎನೇ ಇರಲಿ, ನಾನು ಶಾಲೆಗೆ ಹೋಗಲ್ಲ ಎಂದಾದರೂ ಸರಿ. ಬಹು ಮುಖ್ಯವಾಗಿ ಪ್ರತಿ ದಿನ ಸಂಜೆ ಎಲ್ಲರು ಸೇರಿ ಊಟ ಮಾಡುವಾಗ ಇಂದು ನಿವೇನು ಹೊಸತನ್ನು ಕಲಿತಿರುವಿರಿ ಎಂದು ಕೇಳಿ ಹೊಸ ಸಂಗತಿಗಳು ಕಲಿಯದಿದ್ದರೆ ಆ ದಿನ ಊಟ ಇಲ್ಲವೆಂದು ಹೇಳಿ. ಇಂತಹ ಪಾಲಕರು ಮಾತ್ರ ಜಗತ್ತಿನ ಮಾನವ ಕುಲದ ಅಭಿವೃದ್ದಿಯ ಭವಿಷ್ಯಕ್ಕಾಗಿ ಉತ್ತಮ ವ್ಯಕ್ತಿಗಳನ್ನು ರೂಪಿಸುತ್ತಾರೆ ಎಂದರ್ಥ ಆದರೆ ಮಕ್ಕಳೊಂದಿಗೆ ಊಟ ಮಾಡಲು ಪಾಲಕರು ಮನೆಗೆ ಬೇಗ ಹೋಗಬೇಕು.
------------------------------------------------------------
ವಿಳಾಸ :ಕನ್ನಡ ಉಪನ್ಯಾಸಕ ಕನರ್ಾಟಕ ಕಾಲೇಜು ಕನ್ನಡ ಪಿ.ಜಿ.ಅಧ್ಯಯನ ಕೇಂದ್ರ ಬೀದರ 9242440379/9738418468 ಇ_ವಿಳಾಸ# ಛಚಿಚಿತಚಿಛಚಿಟಟಣಡಿ@ರಟಚಿಟ.ಛಿಠಟ

No comments:
Post a Comment