ಲಲಿತ ಕಲೆಗಳ ಅಳಿವು-ಉಳಿವು
ಮನುಷ್ಯನನ್ನು ಮಾನವನ್ನಾಗಿಸುವ ಬಹುಮುಖ್ಯ ಪರಿಕರಗಳಲ್ಲಿ ಕಲೆಗಳ ಪಾತ್ರವೂ ಮಹತ್ವದ್ದಾಗಿದೆ. ಕಲೆಗಳು ಜೀವನಕ್ರಮವನ್ನು ಭವ್ಯತೆಗೊಯ್ಯುವ ಶಕ್ತಿ ಪಡೆದಿದ್ದು ಅವು ಮಾನವತಾವಾದದ ಅಭಿವ್ಯಕ್ತಿ ಎಂದರೂ ತಪ್ಪಿಲ್ಲ. ಅಂತೆಯೇ ಕಲೆಗಳು ವಿಶ್ವ ಮಾನವತೆಯ ಪ್ರತಿಬಿಂಬವೆನ್ನಬೇಕು. ಕಲೆಗಳು ವ್ಯಷ್ಠಿ-ಸಮಷ್ಠಿಯ ಬೆಳವಣಿಗೆಗೆ ಪರಿಣಾಮಕಾರಿ ಸಾಧನ. ಆದರೆ ದುರಂತದ ಸಂಗತಿ ಎಂದರೆ, ಯಾವುದೇ ಸಾಂಪ್ರದಾಯಿಕ ಕಲೆಗಳನ್ನು ನಾವು ಬದುಕಿನ ಭಾಗವಾಗಿ ಅಥವಾ ಕ್ಲೇಶನಿವಾರಣೆಗಾಗಿ ಇಂದು ಬಳಸಿಕೊಳ್ಳುತ್ತಿಲ್ಲ ಬದಲಾಗಿ ಸಮಕಾಲೀನತೆಯ ಬ್ಯಾನರಿನಡಿ ಹೊಸ ಪ್ರಯೋಗ ಪ್ರಚಾರ ತಂತ್ರಗಾರಿಕೆಗಳ ಮೂಲಕ ಕಲೆಗಳನ್ನು ಅನಾದರಕ್ಕೆ ತಳ್ಳುತ್ತಿದ್ದೇವೆ. ಕಲಾರಕ್ಷತೆ ರಕ್ಷಿತಾಃ ಎಂಬ ಸೂತ್ರ ಮರೆಯುತಿದ್ದೇವೆ. ಆರೋಗ್ಯವಂತ ತಾಯಿ, ಆರೋಗ್ಯವಂತ ಶಿಶುವಿಗೆ ಜನ್ಮ ನೀಡುತ್ತಾಳೆ ಹಾಗೇ ಸದೃಢವಾದ ಕಲೆಗಳು ಸದೃಢವಾದ ಸಮಾಜವನ್ನು ರಚಿಸುತ್ತವೆ ಎಂಬುದು ಸತ್ಯದ ಮಾತಾಗಿದೆ. ಏಕೆಂದರೆ ಶ್ರೇಷ್ಠ ಕಲೆಗಳು ವ್ಯಕ್ತಿ - ಸಮಾಜವನ್ನು ತಿದ್ದುವ ಕೆಲಸ ನಿರ್ವಹಿಸುತ್ತವೆ. ಇತಿಹಾಸ ಒಂದು ಜನಾಂಗದ ಜೀವನ ಚರಿತ್ರೆಯಾದರೆ, ಕಲೆಗಳು ಆ ದೇಶದ ಆತ್ಮ ಚರಿತ್ರೆಯಾಗಿರುತ್ತವೆ. ಎಂಬ ವಿದ್ವಾಂಸರ ಅಭಿಮತ ಪ್ರಸ್ತುತವಾಗಿದೆ. ಕಲೆ ಬೆಳೆದು ಜನಾಂಗ ಬೆಳೆದು ಆ ಮೂಲಕ ಸಾಂಸ್ಕೃತಿಕ ಪರಂಪರೆಯನ್ನು ಜೀವಂತ ಉಳಿಸಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಕಲೆಗಳ ಅಳಿವು-ಉಳಿವುಗಳ ಕುರಿತ ಚಚರ್ೆ ಅಗತ್ಯವಿದೆ.
ಕಲೆಯ ಅರ್ಥ ಃ
ಲಲಿತ ಕಲೆಗಳಿಂದ ಮಾನವ ಜೀವನ ಸುಂದರವಾಗುತ್ತದೆ. ಆದರೆ ಕಾಲ ಬದಲಾದಂತೆ ಮನುಷ್ಯರ ಆದ್ಯತೆ, ಅಗತ್ಯತೆಗಳು ಬದಲಾಗುತ್ತಿವೆ ಹಾಗಾಗಿ ಕಲೆಗಳು ನಿತ್ಯ ಪರಿವರ್ತನ ಶೀಲವಾದದ್ದು, ದಿನದಿಂದ ದಿನಕ್ಕೆ ಬೆಳೆಯುತ್ತವೆ. ಬದಲಾಗುತ್ತಿವೆ.
ಕಲೆ ಕುರಿತು ಅನೇಕ ವಿದ್ವಾಂಸರು ತಮ್ಮದೆ ಆದ ನಿಲುಗಳನ್ನು ವ್ಯಕ್ತಪಡಿಸಿದ್ದಾರೆ. ಕಲೆಯೂ ಜನತೆಯ ಗೆಳೆಯ ಮತ್ತು ಶಿಕ್ಷಕ ಎಂದು ಗಾಗಿನ್ ಹೇಳಿದರೆ ಚಿತ್ರಗಳು ಚರಿತ್ರ್ಯೆಯ ದೃಶ್ಯ ಗ್ರಂಥಗಳು ಎಂದು ಪ್ಲೇಟೋ ಅಭಿಪ್ರಾಯ ಪಟ್ಟಿದ್ದಾನೆ. ಬದುಕಿಗಿಂತ ಕಲೆ ದೊಡ್ಡದೆಂಬುವುದು ಂಡಿಣ ಐಠಟಿರ ಐಜಿಜ ಖಠಡಿಣ ಎಂಬ ರವಿನಂದ್ರನಾಥ ಟ್ಯಾಗೋರರ ಅಭಿಪ್ರಾಯ ಅರ್ಥಪೂರ್ಣವಾಗಿದೆ. ಕಾವ್ಯ ಮತ್ತು ಕಲೆ ಮಧ್ಯದ ಸಂಬಂಧ ಅನನ್ಯವಾಗಿದ್ದು, ಕಾವ್ಯವು ಶಬ್ಧರೂಪದ ಚಿತ್ರ, ಚಿತ್ರವು ರೇಖಾ ವರ್ಣಗಳಿಂದ ಕಾವ್ಯ ಎಂಬುವುದು ಶೇಕ್ಷಪಿಯರ್ ನಿಲುವಾಗಿದೆ. ಚಿತ್ರಕಲೆ ಒಂದು ಕಾಲಾತ್ಮಕವಾದ ಆಯ್ಕೆ ಮೈಕಲ್ ವಂಜಿಲೇ ಅವರು ಅಭಿಪ್ರಾಯಪಡುತ್ತಾರೆ. ಹೀಗೆ ಕಲೆ ಅಭಿವ್ಯಕ್ತಿಯ ಶಕ್ತಿಯಾಗಿದೆ. ಕಲಾವಿದ ಕುರಿತು ನೋವು ಮತ್ತು ನಲುವಿನ ಮಾತುಗಳು ಇವೆ. ಏಕೆಂದರೆ ಕಲಾವಿದ ಬದುಕಿದಾಗ ಮಾರಕವಾದರೆ ಸತ್ತ ನಂತರ ಸ್ಮಾರಕ ಎಂಬುದು ಹಿರಿಯರ ಮಾತಾಗಿದೆ (ವಿವರಕ್ಕಾಗಿ ನೋಡಿ : ಚಿತ್ರಕಲಾ ಶಿಕ್ಷಣ ತ್ರೈಮಾಸಿಕ ಯೋಜನೆ ಕೈಪಿಡಿ 5 ರಿಂದ 9ನೇ ತರಗತಿ, ಪಟ್ಯಪುಸ್ತಕ ನಿದರ್ೇಶನಾಲಯ, ಬೆಂಗಳೂರು) ಆದರೆ ಕಲೆ ಎಂಬುವುದು ಎಂಬುದು ಬದುಕಲ್ಲ, ಕಸುಬಲ್ಲ, ಕಲೆ ಎಂದರೆ ಒಳ್ಳೆಯದೆಂಬ ಭಾವವಿದೆ, ಕಲೆಯ ಬುದ್ಧಿ ಹಾಗೂ ನಿದರ್ೇಶಿತ ಚಟುವಟಿಕೆಯ ಇಡೀ ಪ್ರಕ್ರಿಯೆಗೆ ಅನ್ವಯವಾಗುವುದಾಗಿದೆ.
ಕಲೆಯನ್ನು ಕುರಿತು ಚಚರ್ಿಸುವಾಗ ಓ.ಎಲ್. ನಾಗಭೂಷಣರು ವಿಮಶರ್ೆಯ ಪರಿಭಾಷೆಯಲ್ಲಿ ವಿವರಿಸುತ್ತ ಪ್ರಕೃತಿಯೊಳಗೆ ಅಡಿಗಿರುವ ಸಾದ್ಯತೆಗಳನ್ನು ಸಾಕ್ಷತರಿಸಿಕೊಳ್ಳಲು ಮನುಷ್ಯ ನಡೆಸುವ ಉದ್ದೇಶ ಪೂರ್ವಕ ನಿಯಂತ್ರಿತವಾದವುಗಳೇ ಕಲೆಗಳು ಎಂಬ ಮಾತುಗಳು ಅರ್ಥಪೂರ್ಣವೆನಿಸುತ್ತವೆ.
ಕಲೆಯ ಉಗಮ - ವಿಕಾಸ ಃ
ಮನುಕುಲದ ಉಗಮ - ವಿಕಾಸದ ಜಿಜ್ಞಾಸೆಯಂತೆಯೇ ಕಲೆಯ ಉಗಮ - ವಿಕಾಸ - ಕುರಿತು ಜಿಜ್ಞಾಸೆಗಳು ನಡೆದಿವೆ. ಹಾಗೆ ನೋಡಿದರೆ ಭೂಮಿಯ ವಯಸ್ಸಿನ ಮುಂದೆ ಮನುಷ್ಯನ ವಯಸ್ಸು ಅತ್ಯಲ್ಪವೆಂದೇ ಹೇಳಬೇಕು. ವೈಜ್ಞಾನಿಕ ವಿಶ್ಲೇಷಣೆ ಗಮನಿಸಿದಾಗ, ಸೂರ್ಯನಿಂದ ಸಿಡಿದ ಭೂಮಿ, ತಣ್ಣಗಾಗಲು ಲಕ್ಷಾವಧಿ ವರ್ಷಗಳೇ ಬೇಕಾದವು. ನಂತರ ಜೀವರಾಶಿಗಳು ಮತ್ತು ಮನುಷ್ಯ ಅನುಕ್ರಮವಾಗಿ ಜೀವಪಡೆದವು. ಪ್ರಾಣಿಗಳಂತೆ ನಾಲ್ಕು ಕಾಲಿನಿಂದ ನಡೆಯುವ ಮನುಷ್ಯ ಕೈ ಬಳಕೆಯ ಅರಿವಿನಿಂದಾಗಿ ಕಾಲಮೇಲೆ ನಿಲ್ಲಲು ಕಲಿತದ್ದು, ಹಸಿ ಆಹಾರದ ಬದಲಾಗಿ ಬೆಂಕಿಯ ಉತ್ಪಾನೆ ಮೂಲಕ ಬಿಸಿ ಆಹಾರ ಸ್ವೀಕರಿಸಿದ್ದು, ಮರದ ಪೊಟರೆಯ ವಾಸದ ಬದಲಾಗಿ ಮನೆಯಲ್ಲಿ ವಾಸಿಸುತ್ತಿರುವುದು ಮನುಷ್ಯ ಬದುಕಿನ ಬಹುದೊಡ್ಡ ಸಾಧನೆ ಎನಿಸಿಕೊಳ್ಳುತ್ತದೆ. ಹಾಗೆಯೇ ಅಭಿವ್ಯಕ್ತಿಗಾಗಿ ಭಾಷೆ ಬಳಸಿ, ಸಂವಹನ ಪ್ರಕ್ರಿಯೆ ನೆರವೇರಿಸಿಕೊಂಡಿದ್ದಾನೆ ಅದರಿಂದ ಅವನು ಸಮಾಜದ ಜೀವಿಯಾಗಲು ಸಾಧ್ಯವಾಯಿತು. ಒಂದು ಕಾಲದಲ್ಲಿ ಹೆಣ್ಣು - ಗಂಡುಗಳ ಮಧ್ಯ ಅಭೇದ ಹೊಂದಿದ್ದ ಮನುಷ್ಯ ಬರುತ್ತ ಬುದ್ಧಿ ಬೆಳೆದು ಉತ್ಪಾದನಾ ಶಕ್ತಿ ಬೆಳೆಸಿಕೊಂಡಂತೆ, ಖಾಸಗಿ ಆಸ್ತಿಯ ಕಲ್ಪನೆ ಬೆಳೆದು ಗುಂಪುಗಳಾಗಿ ನಾಯಕತ್ವ ಹಾಗೂ ರಾಜತ್ವ ಪಡೆದ. ರಾಜಾಧಿಕಾರ ಪಡೆದ ಮನುಷ್ಯ ಮುಂದೆ ಭೂಮಿಗೆ ಒಡೆಯನಾಗುತ್ತಾನೆ.
ಈ ಸಮಗ್ರ ಬೆಳವಣಿಗೆ ಗಮನಿಸಿದಾಗ ಇನ್ನೊಂದು ವರ್ಗ ಬೌದ್ಧಿಕ ಕಸರತ್ತಿನ ಮೂಲಕ ಶ್ರಮವಿಲ್ಲದೆಯೇ ಪ್ರಭುತ್ವವನ್ನು ಒಲಿಸಿಕೊಳ್ಳಲು ಮನೋರಂಜನೆ ಕೊಡಲು ಮುಂದಾಗಿ ವಿವಿಧ ಕಲೆಗಳನ್ನು ಹುಟ್ಟು ಹಾಕಿದವು ಮುಂದೆ ಅವು ಸಾರ್ವತ್ರಿಕ ರೂಪ ಪಡೆದನು. ಸಾಂಸ್ಕೃತಿಕ ಬದುಕಿನ ಭಾಗಗಳಾಗಿ ಮಾರ್ಪಟ್ಟು ಕಲೆಗಳೆಂದು ಕರೆಸಿಕೊಂಡವು.
ಕಲೆಗಳ ಕುರಿತ ಪ್ರಸ್ತಾಪ ವೇದಗಳಲ್ಲಿ ಬರುತ್ತದೆ. ಅದರಲ್ಲಿ ಸಾಮವೇದ ಮುಖ್ಯವಾಗಿ ಕಲೆಗಳನ್ನು ಕುರಿತು ಅಧಿಕೃತ ಉಲ್ಲೇಖ ಹೊಂದಿದ್ದು, ಗಮನಾರ್ಹ ಮುಂದೆ ಅವು ನಿರಂತರ ಬೆಳೆದುಬಂದವು. ಕಲೆಗಳನ್ನು ಸ್ಥೂಲವಾಗಿ (1) ಕರಕುಶಲ ಕಲೆಗಳು ಮತ್ತು (2) ಲಲಿತ ಕಲೆಗಳೆಂದು ವಗರ್ಿಕರಿಸಲಾಗಿದ್ದು, ಎರಡನೆಯದು ಭಾವಪ್ರಧಾನವೆಂದು ಗುರುತಿಸಲಾಗಿದೆ. ವಸ್ತು ಪ್ರಧಾನ ಕಲೆಗಳಲ್ಲಿ ಪಾತ್ರೆ, ಮಡಕೆ, ಗೊಂಬೆ ಇನ್ನಿತರ ಕರಕುಶಲ ಕಲೆಗಳು ಬಂದರೆ, ಭಾವ ಪ್ರಧಾನ ಕಲೆಗಳಲ್ಲಿ ಪಂಚಕಲೆಗಳಾದ ಸಂಗೀತ, ನೃತ್ಯ, ಚಿತ್ರ ಶಿಲ್ಪ ಹಾಗೂ ಸಾಹಿತ್ಯ ಕಲೆಗಳು ಇದರಲ್ಲಿ ಸೇರುತ್ತವೆ.
ಈ ಎರಡು ಕಲೆಗಳನ್ನು ಪ್ರಯೋಜನ ಮೂಲ ಕಲೆಗಳು ಮತ್ತು ಆನಂದ ಮೂಲ ಕಲೆಗಳೆಂದೂ, ವಿಂಗಡಿಸಬಹುದಾಗಿದೆ. ಕರಕುಶಲ ಕಲೆಗಳು ಪ್ರಯೋಜನಮೂಲ ಕಲೆಯಾಗಿದ್ದು, ದುಡಿಮೆಗಾಗಿ ಈ ಕಲೆಗಳು ಬಳಕೆಯಾಗುತ್ತವೆ. ಇವು ಉಪಜೀವನಕ್ಕೆ ಆಧಾರ ಮೂಲವಾಗಿವೆ. ಆದರೆ, ಆನಂದ ಮೂಲ ಕಲೆಗಳು ದುಡಿಮೆಯ ನಂತರದಲ್ಲಿ ಹುಟ್ಟಿಕೊಳ್ಳುತ್ತವೆ. ಇವುಗಳ ಮೂಲ ಆಶಯ ಆನಂದವೇ ಆಗಿದೆ.
ಲಲಿತ ಕಲೆಗಳು ಃ
ಲಲಿತ ಕಲೆಗಳನ್ನು ಜನಪದ ಕಲೆಗಳು ಮತ್ತು ಶಿಷ್ಟ ಕಲೆಗಳೆಂದು ವಗರ್ಿಕರಿಸಬಹುದು. ಒಟ್ಟು ಲಲಿತ ಕಲೆಗಳನ್ನು ಪಂಚ ಕಲೆಗಳೆಂದು ಕರೆಯುತ್ತೇವೆ. ಅವೆಂದರೆ, ಸಂಗೀತ, ನೃತ್ಯ, ಶಿಲ್ಪ, ಚಿತ್ರ, ಸಾಹಿತ್ಯ ಕಲೆಗಳೆಂದು ಕರೆಯಲಾಗಿದೆ ಅನುಕ್ರಮವಾಗಿ ಸ್ವರ (ನಾದ), ಅಭಿನಯ, ಶಿಲೆ, ಬಣ್ಣ ಹಾಗೂ ಶಬ್ದ ಆಯಾ ಕಲೆಗಳ ಅಭಿವ್ಯಕ್ತಿ ಮಾಧ್ಯಮಗಳಾಗಿವೆ. ಈ ಕಲೆಗಳ ಆಕರ ಪರಿಕರಗಳೆಂದರೆ ಪ್ರತಿಭೆ ಸ್ವಯಂ ಕಲ್ಪನೆ, ಸತತ ಅಭ್ಯಾಸ ಇವುಗಳಿಂದಲೇ ಕಲೆ ಅರಳಲು ಸಾಧ್ಯವಾಗಿದೆ. ಇವೇ ಕಲೆಗಳು ಪರಂಪರೆಯಿಂದ ನಮ್ಮಲ್ಲಿ ಬೆರೆತು ಹೋಗಿದ್ದು, ಸಾಂಸ್ಕೃತಿಕ ಶ್ರೀಮಂತಿಕೆಗೆ ಕಾರಣವಾಗಿವೆ. ಮಾನಸಿಕ ಹಸಿವನ್ನು ಹಿಂಗಿಸಿವೆ. ಅಂದರೆ ಈ ಕಲೆಗಳು ಇಂದು ತೀರ ಅತಂತ್ರ ಸ್ಥಿತಿಯಲ್ಲಿರುವುದು, ಅವಸಾನದ ಅಂಚನ್ನು ತಲುಪಿರುವುದು ಸಾಂಸ್ಕೃತಿಕ ದುರಂತವಾಗಿದೆ.
ಕಲೆಗಳು ಮತ್ತು ಜಾಗತೀಕರಣ ಃ
ಪರಂಪರಾಗತವಾಗಿ ನಮ್ಮನ್ನು ತಣಿಸಿದ ಕಲೆಗಳು ಇಂದು ಜೀವಂತವಾಗಿ ಉಳಿಯುತ್ತಿವೆಯಾ? ಎಂದು ನಾವೇ ಕೇಳಿಕೊಳ್ಳಬೇಕಾದ ಅನಿವಾರ್ಯತೆಗಳು ಅನುಮಾನಗಳು ಬರುತ್ತಿವೆ. ಇದಕ್ಕೆ ಮುಖ್ಯವಾಗಿ ಎರಡು ಕಾರಣಗಳಿವೆ. ಒಂದು ಅವ್ಯಾಹತವಾಗಿ ಬೆಳೆಯುತ್ತಿರುವ ವೈಜ್ಞಾನಿಕತೆ ಮಾಹಿತಿ ಮತ್ತು ತಂತ್ರಜ್ಞಾನ ಅದರೊಂದಿಗೆ ತಳುಕು ಹಾಕಿಕೊಂಡು ಬೆಳೆಯುತ್ತಿರುವ ಆಧುನಿಕತೆ. ಇನ್ನೊಂದು ಎಲ್ಲೆಡೆ ತನ್ನ ಕಬಂಧ ಬಾಹುಗಳನ್ನು ಚಾಚಿಕೊಂಡಿರುವ ಜಾಗತಿಕರಣ ಇದರೊಂದಿಗೆ ಬೆಸೆದುಕೊಂಡಿರುವ ಖಾಸಗೀಕರಣ ಹಾಗೂ ಉದಾರೀಕರಣ ಇವೆಲ್ಲವುಗಳ ಮಧ್ಯ ಕಲೆಗಳು ಇಂದು ಮಾಯವಾಗುತ್ತಿರುವುದು ನಮ್ಮ ಸಾಂಸ್ಕೃತಿಕ ಅಳಿವಿನ ಸಂಕೇತವೇ ಆಗಿವೆ.
ಜಾಗತೀಕರಣವೆಂದರೆ ಇಲ್ಲಿ ಜಗತ್ತೇ ಒಂದು ಹಳ್ಳಿ, ಇಡೀ ಜಗತ್ತಿಗೆ ಒಂದೇ ಭಾಷೆ. ಒಂದೇ ಸಂಸ್ಕೃತಿ ಎಂಬಂತೆ ಬಿಂಬಿತವಾಗುತ್ತಿರುವ ಈ ಸಂದರ್ಭದಲ್ಲಿ ಭಾರತೀಯ ಕಲೆಗಳೇನಾಗಬೇಕು. ವಾಸ್ತವಿಕವಾಗಿ ಭಾರತವೆಂದರೆ, ಬಹು ಸಂಸ್ಕೃತಿಯ ಬಹುಭಾಷೆಯ ನೆಲೆಯಾಗಿದೆ. ಇಲ್ಲಿನ ಕಲೆಗಳ ಮುಖ್ಯ ಲಕ್ಷಣವೇ ವೈವಿಧ್ಯತೆ. ಜಾಗತೀಕರಣವೆಂದರೆ, ಅದೊಂದು ಶುದ್ಧ ವ್ಯವಹಾರಿಕ ಮನಸ್ಸಿನ ಅಚ್ಚಾಗಿದೆ. ಅಲ್ಲಿರುವುದು ಒಂದೇ ಸಂಸ್ಕೃತಿ, ಅದೇ ಕೊಳ್ಳುಬಾಕ ಸಂಸ್ಕೃತಿ. ಇಂದು ಇಡೀ ದೇಶದ ಹಳ್ಳಿ-ಹಳ್ಳಿಗಳಲ್ಲಿ ಹಾಲು-ಸಿಗಲಾರದು ಆದರೆ ಕೋಕಾಕೋಲಾ ದೊರೆಯುತ್ತದೆ. ಹಾಲಿನ ಎರಡು ಪಟ್ಟು ಹಣಕೊಟ್ಟು ತಿಂಗಳ ನೀರು ಖರಿದಿಸುತ್ತೇವೆ. ಕೆಬಲ್ ಮೂಲಕ ಪಾಪ್ ಸಂಗೀತ ಮನೆ-ಮನೆಯಲ್ಲಿ ರಿಂಗಣಿಸುತ್ತಿರುವಾಗ, ದೇಶಿ ವಸ್ತುಗಳಾಗಲಿ ಕಲೆಗಳಾಗಲಿ, ಮೂಲೆ ಗುಂಪಾಗಿರುವುದು ಜಾಗತೀಕರಣದ ಪ್ರಭಾವವನ್ನು ಸೂಚಿಸುತ್ತದೆ. ಇಂದಿನ ಸಂದರ್ಭದಲ್ಲಿ ಕ್ರಿಕೇಟ್ ಇಡೀ ಜಗತ್ತನ್ನು ಆಳುತ್ತಿದೆ. ಮಾರುಕಟ್ಟೆಯನ್ನುವುದು ಇಂದು ಪ್ರಭುವಿನ ರೂಪದಲ್ಲಿ ಕೆಲಸಕ್ಕಿಳಿದಿದೆ. ಹಿಂದೆ ಕಲೆಗಳು ಪ್ರಭುವಿನ ಸೊತ್ತಾಗಿರುತ್ತಿದ್ದವು. ಇಂದು ಮಾರುಕಟ್ಟೆಯ ಸ್ವತ್ತಾಗಿವೆ. ಇಲ್ಲಿ ಬೇಕಾದವು ಮಾತ್ರ ಪ್ರಚಾರವಾಗುತ್ತವೆ. ಹೀಗೆ ಜಾಗತಿಕ ಕಲೆ ಸಂಸ್ಕೃತಿ ರೂಪುಗೊಳ್ಳುತ್ತಿರುವ ಸಂದರ್ಭದಲ್ಲಿ ಭಾರತೀಯ ಕಲೆ ಸಂಸ್ಕೃತಿ ಹಿಮದಂತೆ ಕರಗಿ ಮೃತ್ತಿಕೆ ಮುಟ್ಟುತ್ತಿದೆ. ಇಡೀ ಜಗತ್ತಿಗೆ ಒಂದೇ ರೀತಿಯ ಕಲೆಗಳು, ಜೀವನ ವಿಧಾನ ರೂಪುಗೊಳ್ಳುತ್ತಲೆ ನೆಲಮೂಲ ಸಂಸ್ಕೃತಿಯ ವಿಧಾನ ಮತ್ತು ಅದರೊಂದಿಗೆ ಹಾಸುಹೊಕ್ಕಾಗಿದ್ದ ಕಲೆಗಳು ಇಲ್ಲವಾಗುತ್ತಿವೆ.
ವಾಸ್ತವವಾಗಿ ಮಾಹಿತಿ ತಂತ್ರಜ್ಞಾನ ಬೆಳೆದಿದೆ. ಆದರೆ ಈ ಬೆಳವಣಿಗೆ ಕಲೆಗಳಿಗೆ ಮಾರಕವೂ ಹೌದು. ವೈಜ್ಞಾನಿಕ ಬೆಳವಣಿಗೆಯಿಂದ ಎಲ್ಲವನ್ನು ಭರಿಸಿಕೊಳ್ಳುತ್ತೇವೆಂಬ ಅಹಂ ಭೌತಿಕವಾಗಿ ನಮ್ಮ ಏಳಿಗೆಯನ್ನು ಸೂಚಿಸುತ್ತದೆ ನಿಜ. ಆದರೂ ಆನೆ ನಡಿಗೆಯಲ್ಲಿ ಇರುವೆ ಸಹ ಸಾಯಬಾರದು ಏಕೆಂದರೆ ಇರುವೆಗೂ ಬದುಕುವ ಹಕ್ಕಿದೆ. ಅದೂ ನಮ್ಮ ಬದುಕಿನ ಭಾಗವೇ ಆಗಿದೆ. ಸಾಂಘಿಕ ಜೀವನಕ್ಕೆ ಶ್ರಮಜೀವನಕ್ಕೆ ಮಾದರಿಯೂ ಹೌದು.
ಕಂಪ್ಯೂಟರ್ ಡಿಜಿಟಲ್ ಮೂಲಕ ಸುಂದರ ಹೂವನ್ನು ಹೆಣ್ಣನ್ನು, ಸೃಷ್ಟಿಯ ಚಿತ್ರವನ್ನು ರೂಪಿಸಬಹುದು. ಅದರ ಕಂಪನ್ನಾಗಲಿ, ಪ್ರೀತಿಯನ್ನಾಗಲಿ, ಚಲನೆಯನ್ನಾಗಲಿ, ಸೃಷ್ಠಿಸಲಾಗದು, ಕಂಪ್ಯೂಟರನಲ್ಲಿ ಕುವೆಂಪು ಅವರ ಕಾವ್ಯವನ್ನು ಸೆರೆ ಹಿಡಿಯಬಹುದೇ ವಿನಃ ರಾಮಾಯಣಂ ದರ್ಶನಂತಹ ಕಾವ್ಯ ಮಹಾ ಕಾದಂಬರಿಗಳನ್ನು ಸೃಷ್ಟಿಸಲು ಸಾಧ್ಯವಿಲ್ಲ, ಕಂಪ್ಯೂಟರನಲ್ಲಿ ಶಹನಾಯಿಯನಾದ ಶೇಖರಿಸಿ ನುಡಿಸಬಹುದೇ ಹೊರತಾಗಿ ಬಿಸಮಿಲ್ಲಾಖಾನನನ್ನು ಸೃಷ್ಟಿಸಲು ಸಾಧ್ಯವಿಲ್ಲ. ಅದಕ್ಕಾಗಿ ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನವೇ ನಮ್ಮ ಎಲ್ಲ ಆಶೆಗಳನ್ನು, ಕೊರತೆಗಳನ್ನು ಪೂರೈಸುತ್ತದೆನ್ನಲಾಗದು. ಲಲಿತ ಕಲೆಗಳು ಮಾತ್ರ ನಮ್ಮ ಬಹುತೇಕ ಆಶಾವಾದ ಪೂರೈಕೆಯ ಸಾಧನವೆಂಬುದನ್ನು ಎಲ್ಲರೂ ಮನವರಿಕೆ ಮಾಡಿಕೊಳ್ಳಬೇಕಾಗಿದೆ.
ಲಲಿತ ಕಲೆಗಳು ಬೇಕು ಃ
ಈ ನೆಲದ ಸಾಂಸ್ಕೃತಿಕ ಸತ್ವ ಉಳಿಯಬೇಕಾದರೆ, ಆಥರ್ಾತ್ ದೇಶೀಯತೆಯನ್ನು ಉಳಿಸಿ ಬೆಳೆಸಬೇಕಾದರೆ ನಮ್ಮ ಜೀವನ ವಿಧಾನ ಉದಾತ್ತೀಕರಿಸಿಕೊಳ್ಳಬೇಕಾದರೆ, ಲಲಿತ ಕಲೆಗಳು ಬೇಕು. ಏಕೆಂದರೆ ಅವು ಅಮೂರ್ತ ಆನಂದ ನೀಡುವ ಪರಿಕರಗಳಾಗಿವೆ. ಕಾವ್ಯ ಮೀಮಾಂಸೆಯಲ್ಲಿ ಕಾವ್ಯ ಪ್ರಯೋಜನಗಳಿದ್ದಂತೆ ಲಲಿತ ಕಲೆಯ ಪ್ರಯೋಜನಗಳೂ ಇವೆ. ಸಂಗೀತಕ್ಕೆ ಸಸಿಗಳೂ ತಲೆಬಾಗುತ್ತವೆ. ಪರ್ವತಗಳೂ ಕರಗುತ್ತವೆ. ಹೂವು ಅರಳುತ್ತವೆ ಮೊದಲಾದವು ತುಂಬಾ ಪ್ರಸಿದ್ದವಾದ ಉಕ್ತಿಯಾಗಿವೆ. ಹಾಗೆಯೇ ದೀಪರಾಗದಿಂದ ಕ್ಯಾಲ್ಸಿಯಂ (ಅಚಿಟಛಿಣಟ) ದೊರೆಯುತ್ತದೆ. ಆನಂದ ಬೈರವಿಯಿಂದ ನಿದ್ರೆ, ಛನ್ನಯಿಂದ ಜಾಗೃತತೆ, ತಾಳದಿಂದ ಹೃದಯ ಅರಳುವುದು. ಮೇಘರಾಗದಿಂದ ಮಳೆ ಮೊದಲಾದ ಉಪಯುಕ್ತತೆಗಳು ಸಂಗೀತದಿಂದ ಉಂಟಾಗುತ್ತವೆ. ಇದನ್ನು ರತ್ನಾಕರ ವಣರ್ಿಯ ಮಾತುಗಳಲ್ಲಿ ಗ್ರಹಿಸುವುದಾದರೆ
ಹಸುಳೆ ಕಲ್ಮರ ಪಾಪು ಪಶು ಮೃಗಗಳುಗಾನ
ರಸಕೆ ಸೋಲುವವೆಂದರಿನ್ನೂ
ರಸಿಕರು ಸೋಲರೆ ಸಭೆಯಲ್ಲ ಕೇಳ್ದು ಮೈ
ಮಸದ ವಿದರ್ುದು ಬೆರಗಾಗಿ
ಕೊಳಲಿಗೆ ಪಶು, ಮಿಗ ಘಂಟೆಗೆ, ಹಸುಳೆ ಜೋ
ಗುಳಿಗೆ ಸರ್ವಸುನಾಗ ಸರಕ್ಕೆ
ಎಳೆವೆಣ್ಣ ದನಿಗೊಂದು ವೃಕ್ಷ ಗೂಡಾಕ್ಷಿಗೆ
ಶಿಲೆ ಪೊಸರುವುದು ಘನವೇ
- (ಭರತೇಶ ವೈಭವ 1/87/88)
ಹೀಗೆ ಸಂಗೀತದಿಂದ ಚರಾಚರಾ ವಸ್ತುಗಳಲ್ಲಿ ಚಯತನ್ಯ ಪಡೆಯುವುದಾದರೆ, ಮನುಷ್ಯನ ಮನಸ್ಸು ಹೇಗಾಗಬಹುದು ? ಯಾಂತ್ರಿಕ ಜೀವನ ನಡೆಸುತ್ತಿರುವ ಇಂದಿನ ಸಂದರ್ಭದಲ್ಲಿ ಕಲೆಗಳು ಹೆಚ್ಚು ಉಪಯುಕ್ತವಾಗಿವೆ. ಮನಸ್ಸನ್ನು ಆದ್ರ್ರಗೊಳಿಸುವ ಶಕ್ತಿ ಕಲೆಗಳಲ್ಲಿದೆ. ಕೆಲ ಕಲೆಗಳನ್ನು ನೋಡಿ ಮೂಗು ಮುರಿಯುವವರು ಇದ್ದಾರೆ. ಅದಕ್ಕೆ ಅಶ್ಲೀಲತೆಯ ಪಟ್ಟಕಟ್ಟುವವರೂ ಇದ್ದಾರೆ. ಆದರೆ ಅಂಥವರು ಎಂದೂ ಕಲೆಗಳನ್ನು ತೆರೆದ ಕಣ್ಣಿನಿಂದ ನೋಡಿಲ್ಲವೆಂದೇ ಹೇಳಬೇಕು.
ಒಂದೊಂದು ಕಲಾ ಕೃತಿಗಳು ಮಹೊನ್ನತಿ ತತ್ವಕ್ಕೆ ವ್ಯಾಖ್ಯಾನ ಬರೆದಂತಿವೆ. ಅಂಥ ಭವ್ಯ ಕಲಾ ಕೃತಿಗಳೆಂದರೆ, ಚಾವುಂಡರಾಯನು ನಿಮರ್ಿಸಿದ ಗೊಮ್ಮಟೇಶ್ವರನ ವಿಗ್ರಹ, ಹೊಯ್ಸಳರ ಶಿಲಾ ಬಾಲಿಕೆ, ಖುಜುರಾಹೊ ನಗ್ನ ಶಿಲ್ಪಗಳು ಇವೆಲ್ಲ ಕಂಡಾಂಗ ಕಾಮ ಭಾವ ಬರದು, ಬದಲಿಗೆ ನಾವು ಹೊಂದಬೇಕಾದ ಸಮರ್ಪಣಾಭಾವವನ್ನು ಬಿತರಿಸುತ್ತವೆ. ಅಲ್ಲೆಲ್ಲ ಸೌಂದರ್ಯ ಪ್ರಜ್ಞೆ ಎದ್ದುಕಾಣುತ್ತದೆ. ಮುಚ್ಚು ಮರೆಯಿಲ್ಲದ ತೆರೆದ ಮನ, ಅದರ ಪ್ರತೀಕವಾಗಿ ನಗ್ನ ವಿಗ್ರಹಗಳಿರುತ್ತವೆ. ಹೊರತು ವಿಷಯ ಲೋಲುಪತೆಗಲ್ಲ ಏಕೆಂದರೆ ವ್ಯಕ್ತಿ ಹಾಗೂ ಸಾಮಾಜಿಕ ಸಂಬಂಧದಲ್ಲಿ ಕಲೆಗಳು ವಹಿಸುವ ಪಾತ್ರ ಅಪಾರವಾದದ್ದು, ಕಲೆಗಳು ಯುಗಮನಸ್ಸಿನ ಪ್ರತಿನಿಧಿಗಳಾಗಿರುತ್ತವೆ. ಸಮಕಾಲಿನತೆಯ ಕನ್ನಡಿಯಾಗಿರುತ್ತವೆ. ವ್ಯಕ್ತಿ ಸಮೂಹದ ಪ್ರತಿಬಿಂಬಗಳಾಗಿರುತ್ತವೆ. ಯಾವತ್ತೂ ಕಲಾ ಪ್ರೇಮಿಯಾದವನು ಕ್ರೂರಿಯಾಗಿರಲಾರ ವ್ಯಕ್ತಿ ಮತ್ತು ಕಲೆಯ ಸಂಬಂಧವೆಂದರೆ ತಾಯಿ ಮಗುವಿನ ಸಂಬಂಧದಂತೆ, ಬೀಜ ವೃಕ್ಷದ ಸಂಬಂಧದಂತೆ. ಉತ್ತಮ ಕಲಾ ಪ್ರಪಂಚದಲ್ಲಿ ಉತ್ತಮ ಸಮಾಜ ಅರಳಲು ಸಾಧ್ಯ. ವಿಜಯನಗರ ಸಾಮ್ರಜ್ಯದ ಆಳ್ವಿಕೆಯ ಕಾಲದಲ್ಲಿ ಮನೆಗಳಿಗೆ ಬಾಗಿಲಿರುತ್ತಿರಲಿಲ್ಲ ಎಂಬುದು ಇತಿಹಾಸದ ಮಾತಾಗಿದೆ. ಕಾರಣವಿಷ್ಠೆ ಕಲೆ ಸಂಸ್ಕೃತಿ ಆ ಕಾಲಕ್ಕೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಕೊಲೆ, ಹಿಂಸೆ, ಕಳ್ಳತನದಂತಹ ವಿಚಾರಗಳು ಆ ಸಂದರ್ಭದ ಜನಮಾನಸದಲ್ಲಿಯೂ ಸುಳಿಯುತ್ತಿರಲಿಲ್ಲ. ಆದರೆ ಇಂದು ಕಲೆಗಳಿಲ್ಲ ಬದಲಾಗಿ ಭಯೋತ್ಪಾದನೆಯಿದೆ. ರಾಷ್ಟ್ರಕೂಟರ ದೊರೆ ನೃಪತುಂಗ ಸಾಮ್ರಾಜ್ಯದ ಒಳಿತಿಗಾಗಿ ಆತ್ಮಾರ್ಪಣಕ್ಕೆ ಸಿದ್ಧನಾಗಿದ್ದ, ಇಂದು ರಾಷ್ಟ್ರವನ್ನೇ ನುಂಗಲು ಹವಣಿಸುತ್ತಿದ್ದೇವೆ. ಅಂತೆಯೇ ಮೇವು ಹಗರಣ, ಗೊಬ್ಬರ ಹಗರಣಗಳು ನಿರಂತರವಾಗಿವೆ. ಓಸಾಮಬಿನ್ ಲಾಡೆನ್ ನಂತವರು ಬಲಿಷ್ಠರಾಗಿದ್ದಾರೆ. ಇಂದು ಸಹ ನಾವು ಪ್ರೀತಿ, ಶಾಂತಿ ನೆಮ್ಮದಿಯನ್ನು ಅಪೇಕ್ಷಿಸುವುದಾದರೆ ಲಲಿತ ಕಲೆಗಳನ್ನು ಅಪೇಕ್ಷಿಸಿದರೆ ಸಾಕು.
ಲಲಿತ ಕಲೆಗಳ ಉಳಿವು ಸಾಧ್ಯ ಃ
ಮಾಹಿತಿ ತಂತ್ರಜ್ಞಾನ ಬೆಳೆದಂತೆ ನಾವು ಆಧುನಿಕರಣ ಗೊಂಡಿದ್ದೇವೆ. ನಿಜ ಆದರೆ ನಮ್ಮೊಂದಿಗೆ ಕಲೆಗಳನ್ನು ಆಧುನಿಕರಣಗೊಳಿಸಿದರೆ, ಕಲೆ ಉಳಿಯಬಹುದಾಗಿದೆ. ಆದರೆ ಕಲೆಗಳ ಮೂಲ ಆಶಯಕ್ಕೆ ಧಕ್ಕೆ ಬರದಂತೆ ಜಾಗೃತಿ ವಹಿಸಿಬೇಕು. ಹಿಂದೆ ಕರಕುಶಲ ಕಲೆಗಳು ಮಡಕೆಯ ಮೇಲೆ ಚಿತ್ರ ತೆಗೆದು ಇಡುತ್ತಿದ್ದರು. ಇಂದು ಸಹ ಅದೇ ಮಾದರಿಯಲ್ಲಿ ಬಳಕೆಯಾಗುತ್ತಲೇ ಅದೇ ಮಡಿಕೆಗಳು ಹೂಗುಚ್ಛಕ್ಕಾಗಿ (ಈಟಠತಿಜಡಿ ಕಠಣ) ಬಳಕೆಯಾಗುತ್ತಿವೆ. ಹಿಂದೆ ಯಕ್ಷಗಾನ ಬಯಲಾಟ, ಕೋಲಾಟಗಳಂತೆ ಒಂದು ಜನಪದ ಕಲೆಯಾಗಿತ್ತು. ಆದರೆ ಕಾರಂತರ ಸ್ಪರ್ಶದಿಂದ ಆಧುನಿಕತೆಯ ಅಂಗಿತೊಟ್ಟು ಇಡೀ ಜಗತ್ತಿಗೆ ಪರಿಚಿತವಾಗಿದೆ. ಯಕ್ಷಗಾನ ಅಕಾಡೆಮಿಯೊಂದನ್ನು ಸ್ಥಾಪಿಸಲಾಗಿದೆ. ಸಕರ್ಾರವು ಅದಕ್ಕೆ ಉತ್ತೇಜನ, ಪ್ರೋತ್ಸಾಹಕೊಡಬೇಕು. ದುರಂತವೆಂದರೆ, ಇಂದು ಹಲವಾರು ಅಕಾಡೆಮಿಗಳಿವೆ ಆದರೂ ಅಲ್ಲಿದ್ದವರಿಗೆ ಸಂಬಳವಿಲ್ಲ. ಅದಕ್ಕಾಗಿ ಲಲಿತ ಕಲೆಗಳ ಕುರಿತು ಗಂಭೀರ ಆಲೋಚನೆ ಜನಜಾಗೃತಿ ಉಂಟಾಗಬೇಕು. ಆ ನಿಟ್ಟಿನಲ್ಲಿ ಪ್ರಯತ್ನ ಸಾಮೂಹಿಕವಾಗಿ ನಡೆದರೆ ಕಲೆಗಳು ಉಳಿಯಬಹುದಾಗಿದೆ. ಎಷ್ಟೋ ಜನ ಕಲಾವಿದರು ತನ್ನ ಸುತ್ತಮುತ್ತಲಿನ ಪರಿಸರಕ್ಕೆ ಪರಿಚಯವಾಗದೆ ಮರೆಯಾಗಿ ಹೋಗಿದ್ದಾರೆ. ಸಕರ್ಾರ ಹಾಗೂ ಜನಸಹಕಾರ ಕೂಡ ಮಹತ್ವದ ಪಾತ್ರ ವಹಿಸಬೇಕು. ಪ್ರಾಮಾಣಿಕ ಸಹೃದಯತೆ, ವಸ್ತುನಿಷ್ಠ ವಿಮಶರ್ೆ, ತೆರೆದ ಕಣ್ಣಿನಿಂದ ನೋಡುವ ಸಮೂಹ ಮಾಧ್ಯಮಗಳು, ಕಲೆ, ಕಲಾವಿದ ಕಲಾ ಮೌಲ್ಯಗಳತ್ತ ಗಮನ ನೀಡುವುದು ತುತರ್ು ಅವಶ್ಯಕವಾಗಿದೆ. ಹಾಗೇ ಕಲೆ-ಕಲಾವಿದರ ಮೇಲೆಯೂ ಕೆಲ ಜವಾಬ್ದಾರಿಗಳಿವೆ. ವಿವಿಧ ಮಾಧ್ಯಮಗಳ ಮೂಲಕ ಬಿತ್ತರವಾಗುವ ಕಲಾಕೃತಿಗಳು ಮಾನವೀಯ ಮೌಲ್ಯಗಳ ಅಭಿವ್ಯಕ್ತಿಯಾಗಿವೆಯಾ ? ಎನ್ನುವುದು ಮುಖ್ಯ.
ಸಮೂಹ ಮಾಧ್ಯಮಗಳಾದ ಪತ್ರಿಕೆ, ಬಾನುಲಿ, ದೂರದರ್ಶನ, ಇಂಟರನೇಟ್ ಮೊದಲಾದವುಗಳಲ್ಲಿ ಪ್ರಕಟವಾಗುತ್ತಿರುವ ಜಾಹಿರಾತುಗಳು, ಕಲಾಮೌಲ್ಯಗಳನ್ನು ಬಿತ್ತರಿಸುವಲ್ಲಿ ವಿಫಲವಾಗಿವೆ. ಶ್ರೇಷ್ಠ ಕಲಾವಿದರು. ಬಹುರಾಷ್ಟ್ರಿಯ ಕಂಪನಿಗಳ ದಾಸರಾಗಿ ದೇಶದ ಆಥರ್ಿಕ ದಿವಾಳಿತನಕ್ಕೆ ಪರೋಕ್ಷ ಸಹಾಯ ಮಾಡುತ್ತಿದ್ದಾರೆ. ಅಂಥವರ ಕಲೆಗಳನ್ನು ಪೋಷಿಸಬೇಕೆಂಬುದನ್ನು ವಿಚಾರ ಮಾಡಬೇಕಾಗಿದೆ. ಅಷ್ಟೇ ಅಲ್ಲ ಭಾರತದ ಮೇಲೆ ನೆರವಾಗಿ ದಾಳಿ ಮಾಡಲು ಅಸಾಧ್ಯವೆನಿಸಿದ ಹಿನ್ನಲೆಯಲ್ಲಿ ಚಾನಲಗಳ ಮೂಲಕ ಬಹುರಾಷ್ಟ್ರೀಯ ಕಂಪನಿಗಳು ಸಾಂಸ್ಕೃತಿ ದಾಳಿ ಮಾಡುತ್ತಿವೆ. ಇಂದು ನೂರಾರು ಚಾನಲ್ಗಳಿವೆ. ಇವೆಲ್ಲ ನಮ್ಮ ಲಲಿತ ಕಲೆಗಳ ಮೇಲೆ ಗಾಢವಾದ ಪರಿಣಾಮ ಬೀರುತ್ತಿವೆ. ಈ ಚಾನಲ್ಗಳ ನಿರಾಕರಣೆ ಸಹ ಕಲೆಗಳ ಉಳಿವಿಗೆ ದಾರಿ ಮಾಡಿ ಕೊಡಬಹುದಾಗಿದೆ. ಹಾಗೇ ಕಲಾವಿದರು, ಕಲೆಗಳನ್ನು ಉಪೇಕ್ಷಸಬಾರದು. ಮತ್ತು ಕಲೆಗಳನ್ನು ವಿಕೃತವಾಗದಂತೆಯೂ ನೋಡಿಕೊಳ್ಳಬೇಕು. ಏಕೆಂದರೆ ಆಧುನಿಕರಣದ ಹೆಸರಲ್ಲಿ ರಾಷ್ಟ್ರ ಗೀತೆಯನ್ನು ಪಾಪ್ ಸಂಗೀತದೊಂದಿಗೆ ಬೆರೆಸುವ ಕಾಲ ದೂರವಿಲ್ಲ. ಸಾಮಾನ್ಯವಾಗಿ ಇಂದು ಬಹುತೇಕ ಕಲೆಗಳು ಆಧುನಿಕತೆಯ ಬೆನ್ನು ಹತ್ತಿರುವುದು ಒಂದು ಅಪಾಯವೇ ಆಗಿದೆ. ಆಧುನಿಕ ಕಲಾ ಮಾಧ್ಯಮಗಳು ಮೃಗೀಯತೆಯ ಹಿಂಸಾ ಪ್ರವೃತ್ತಿಯನ್ನು ಅನುಸರಿಸುತ್ತಿವೆ. ಅದಕ್ಕೆ ಅಬ್ಬರದ ಪ್ರಚಾರವನ್ನು ನೀಡಲಾಗುತ್ತಿದೆ. ಮನಸ್ಸನ್ನು ಕೆರಳಿಸುವ ಪ್ರಚೋದನಕಾರಿ ವಸ್ತುಗಳು ಉಲ್ಬಣವಾಗುತ್ತಿವೆ. ನಡೆ-ನುಡಿಗಳು ವಿಕೃತವಾಗುತ್ತಿವೆ. ವಿರಸ-ಮನಸ್ಸುಗಳು, ಬಡಿದಾಟದ ಹಿಂಸೆ ಇಂದಿನ ಕಲೆಗಳ ವಸ್ತುವಾಗುತ್ತಿವೆ. ಇವೆಲ್ಲ ತಪ್ಪಿಸಲು ಸಾಧ್ಯವಿಲ್ಲವೇನೋ ಎಂಬಂತೆ ವೈಭವಿಕರಿಸಲಾಗುತ್ತಿದೆ. ಅದಕ್ಕೆ ತಕ್ಕಂತೆ ನಮ್ಮ ಮನೆ ಮನಸ್ಸುಗಳನ್ನು ಹೊಂದಿಸಿಕೊಳ್ಳುತ್ತಿದ್ದೇವೆ. ನಾವು ಜಾತ್ರೆಗೊ, ಮಾರುಕಟ್ಟೆಗೋ ಹೋದಾಗ ನಮ್ಮ ಎಳೆ ಮಕ್ಕಳು ಆಟದ ಸಾಮಾನು ಕೇಳಿದರೆ, ಮಾದರಿಯ ಎ.ಕೆ. 47 ಕೊಡಿಸುತ್ತೇವೆ. ಪಿಸ್ತೋಲ್ ಮಾದರಿಗಳು ನಮ್ಮ ಪುಟ್ಟ ಕೈಗಳ ಆಟಿಕೆಗಳಾಗಿವೆ. ಆದರೆ ಎಷ್ಟು ಜನ ಕೊಳಲು ಕೊಡಿಸಲು ಯತ್ನಿಸಿದ್ದೇವೆ. ಮನೆಯನ್ನು ಅಲಂಕಾರಗೋಲಿಸಲು ಸಾವಿರಾರು ರೂಪಾಯಿಗಳನ್ನು ವೆಚ್ಚಮಾಡಿ, ವಿಶ್ವ ಸುಂದರಿಯ ಭಾವಚಿತ್ರ ಇಡುತ್ತೇವೆ. ಆದರೆ ತಾಜಮಹಲ್, ಬೇಲೂರು ಶಿಲಾಬಾಲಿಕೆ, ಅಹಿಂಸೆಯ ಅಹಂ ನಿರಸನದ ಬಾಹುಬಲಿ ಚಿತ್ರ ಇಟ್ಟಿರಲಾರೆವು. ವಿದೇಶಿ ಆಟಗಳಾದ ಕ್ರಿಕೇಟಿನ ಚರಿತ್ರೆ - ಆಟಗಾರರ ಎಳೆಎಳೆ ಮಕ್ಕಳು ನೆನಪಿಟ್ಟು ಹೇಳುವುದು ಅವರನ್ನು ಅನುಸರಿಸಿದರೆ ಒಳಗೆ ತುಂಬಾ ಖುಷಿಪಡುತ್ತೇವೆ. ಆದರೆ ಕವಿವರ್ಮನ, ಬಿಸಮಿಲ್ಲಾ ಖಾನನ ಚರಿತ್ರೆ ಹೇಳುವುದೇ ಮರೆತಿದ್ದೇವೆ. ಇಂಥ ತಪ್ಪಿನ ಅಳುಕು ಸಹ ನಮಗಿಲ್ಲ. ಈ ಎಲ್ಲವುಗಳಿಂದ ನಾವು ಎಚ್ಚರಗೊಳ್ಳಬೇಕಾಗಿದೆ. ಅಂದಾಗ ಕಲೆ ಉಳಿಯಲು ಸಾಧ್ಯ.
ಕಲೆ ಉಳಿವಿಗಾಗಿ ಕೆಲ ಮಾರ್ಗ ಸೂಚಿಗಳು ಃ
ಲಲಿತ ಕಲೆಗಳು ನಮ್ಮ ಜೀವ ಸೆಲೆಯಾಗಿದ್ದು, ಅವುಗಳು ಆಧುನಿಕ ಸಂದರ್ಭದಲ್ಲಿ ಉಳಿಸಿಕೊಳ್ಳಲೇ ಬೇಕಾದ ಅನಿವಾರ್ಯತೆಗಳಿವೆ. ಅದಕ್ಕಾಗಿ ಕಲೆಗಳನ್ನು ಬದಲಾಯಿಸದೇ ಅವು ಇದ್ದರೂಪದಲ್ಲೆ ಇಡಲು ಬಿಟ್ಟು ಕೆಲ ಮಾಪರ್ಾಡಿನೊಂದಿಗೆ ನಾವು ಇಡೀ ವ್ಯವಸ್ಥೆಯನ್ನು ಬದಲಾಯಿಸಿಕೊಳ್ಳಬೇಕು. ನಾವು ಬದಲಾದರೆ ಕಲೆಗಳು ಉಳಿಯುತ್ತವೆ. ನಾವೂ ಪ್ರೀತಿ ನೆಮ್ಮದಿಯಿಂದ ಇರಲು ಸಾಧ್ಯ.
* ಬಹು ಮುಖ್ಯವಾಗಿ ಕಲಾ ಕ್ಷೇತ್ರಗಳು ವಿಕೃತವಾಗದಂತೆ ಎಚ್ಚರವಹಿಸಬೇಕು. ಕನರ್ಾಟಕ ಸಂಗೀತ - ಹಿಂದೂಸ್ಥಾನಿ ಸಂಗೀತಗಳಿಗೆ, ವಚನ, ಕೀರ್ತನೆಗಳನ್ನು ಹಾಗೂ ಹೊಸಗನ್ನಡ ಕವಿತೆಗಳನ್ನು ಅಳವಡಿಸುವ ಯತ್ನ ಮಾಡಬೇಕು.
* ನಮ್ಮ ಶಿಲ್ಪಗಳ ಮಾದರಿಗಳನ್ನು ಆಧುನಿಕ ವಾಸ್ತು ಶಿಲ್ಪಕ್ಕೆ ಅಳವಡಿಸಿಕೊಳ್ಳಬೇಕು. ಭಾರತೀಯ ಚಿತ್ರಶೈಲಿ, ಬಣ್ಣಗಾರಿಕೆ ಮೂಲಕ ಚಿತ್ರ, ಸಾಹಿತ್ಯ ಮೀಮಾಂಸೆ, ಉದಾತ್ತವಾಗಿ ಬೆಳೆಸಬೇಕು.
* ಪುರಾತನ ಸ್ಮಾರಕಗಳ ಚಿತ್ರಗಳನ್ನು ಶಿಲ್ಪ ಮಾದರಿಗಳನ್ನು ದಿನದಶರ್ಿಕೆ (ಅಚಿಟಚಿಟಿಜಜಡಿ) ಮೇಲೆ ಮುದ್ರಿಸಿ ಪ್ರಸಾರ ಪ್ರಚಾರ ಮಾಡಬೇಕು.
* ಸೃಜನಶೀಲ ಪುಸ್ತಕ, ಆಮಂತ್ರಣ ಪತ್ರಿಕೆ, ಪಠ್ಯ ಪುಸ್ತಕಗಳ ಮುಖ ಪುಟಗಳು ಕಲೆ ಚಿತ್ರಗಳಿಂದ ತುಂಬಿರಬೇಕು.
* ಸಂವಹನ ಮಾಧ್ಯಮಗಳಾದ ದೂರದರ್ಶನ, ಆಕಾಶವಾಣಿ, ಚಲನಚಿತ್ರ ಕಂಪ್ಯೂಟರ್, ಇಂಟರನೇಟ್, ಮೊಬೈಲ್ ಮೊದಲಾದವುಗಳಲ್ಲಿ ಲಲಿತ ಕಲೆಗಳ ಪ್ರಸಾರಕ್ಕೆ ಹೆಚ್ಚಿನ ಒತ್ತು ನೀಡಬೇಕು.
* ಕಲೆಗಳನ್ನು ಕಲಾವಿದರನ್ನು ಗೌರವಿಸಿ, ಶ್ರೇಷ್ಠತೆಯ ಸ್ಥಾನ ನೀಡಬೇಕು. ಸಂಸ್ಕೃತಿ ಅರಳುವಂತಹ ಕಲೋಪಾಸನೆ ಬೆಳೆಯುವಂತಹ ಸಾಧ್ಯತೆಗಳ ಕುರಿತು ವಿಚಾರ ಮಂಥನ ನಡೆಯಬೇಕು.
ಆಡಳಿತವರ್ಗ, ಸಕರ್ಾರ, ಅರೆಸಕರ್ಾರಿ ಸಂಸ್ಥೆಗಳು ಕಲಾ ಪ್ರೋತ್ಸಾಹ ನೀಡಿ ಕಲಾವಿದರ ಜೀವನ ಉದಾತ್ತಗೊಳ್ಳುವಂತೆ ಎಚ್ಚರವಹಿಸಬೇಕು.
ಕೊನೆಯ ಮಾತು ಃ
ಲಲಿತಕಲೆಗಳ ಅಳಿವು-ಉಳಿವು ಕುರಿತ ಏನೇ ಚಟುವಟಿಕೆಯಾದರೂ ಮೂಲಭೂತ ಅವಶ್ಯಕತೆಗಳು ಇದ್ದಾಗಲೇ ಚಿಂತನೆ ಸಫಲವೆನ್ನಬಹುದಾಗಿವೆ. ಕಲೆಗಳನ್ನು ಮನೋರಂಜನೆ ಮೂಲ, ಜೀವನಮೂಲವೆಂದು ವಿಭಜಿಸಿದ ಹಿನ್ನೆಲೆಯಲ್ಲಿ ಲಲಿತ ಕಲೆಗಳು ಮನೋರಂಜನ ಮೂಲದಲ್ಲಿ ಸೇರುತ್ತವೆ. ಹೊಟ್ಟೆಗೆ ಹಸಿವಾದಾಗ ಮನೋರಂಜನಾ ಮೂಲದ ಕಲೆಗಳು ಮನುಷ್ಯನಿಗೆ ಸೋಗಿನಂತೆ ಕಾಣುತ್ತವೆ. ಮನಸ್ಸು ಅರಳಿಸುವ ಬದಲಾಗಿ ಕೆರಳಿಸುತ್ತವೆ. ಅದಕ್ಕಾಗಿ ಎಲ್ಲಕ್ಕೂ ದೊಡ್ಡ ದೇವರಾದ ಅನ್ನ ಮೊದಲು. ಸರ್ವಜ್ಞ ಹೇಳುವಂತೆ ಅನ್ನದೇವರ ಮುಂದೆ ಇನ್ನು ದೇವರಿಲ್ಲ ಆದರೆ ಜಾಗತೀಕರಣ, ಖಾಸಗೀಕರಣ ಹಾಗೂ ಉದಾರಿಕರಣಗಳ ಪ್ರವಾಹದಲ್ಲಿ ಉದ್ಯೋಗ ಭರವಸೆ ಮರಿಚಿಕೆಯಾಗಿದೆ. ಸ್ವಾತಂತ್ರ್ಯ ಸುವರ್ಣ ಮಹೋತ್ಸವದ ನಂತರವೂ ನಾವು ಎಲ್ಲರಿಗೂ ಅನ್ನ, ಅರಿವೆ, ಆಶ್ರಯ, ಅರಿವು, ಔಷಧ ಕೊಡಲು ವಿಫಲವಾಗಿರುವ ಸಂದರ್ಭದಲ್ಲಿ ಇಡೀ ವ್ಯವಸ್ಥೆಯ ರೂಪುರೇಷ ಕುರಿತು ಮರು ಆಲೋಚನೆ ಮಾಡಬೇಕು. ಬೃಹತ್ ಔದ್ಯೋಗಿಕರಣವನ್ನು ಗಾಂಧಿ ಸಾರಾಸಗಟಾಗಿ ವಿರೋಧಿಸಿದ್ದು, ಮರೆತಿದ್ದೇವೆ. ಹೀಗಾಗಿ ಇಂದು ಬಹು ಸಂಖ್ಯಾತರು ಉದ್ಯೋಗದಿಂದ ವಂಚಿತರಾಗಿದ್ದೇವೆ. ಇದೆಲ್ಲಕ್ಕೂ ಸ್ವಯಂ ಪ್ರಜ್ಞೆ ಯೊಂದೆ ಸಿದ್ಧೌಷಧ. ನಾವು ಪ್ರಬಲರಾದಂತೆ ಕಲೆಗಳೂ ಪ್ರಬಲವಾಗುತ್ತವೆ. ಅದರಿಂದ ಕಲೆ-ಕಲಾವಿದ-ವ್ಯಕ್ತಿ-ಸಮೂಹ ಜೀವನೋತ್ಸಾಹ ಪಡೆಯಲು ಸಾಧ್ಯ. ಅಂದಾಗ ಮಾತ್ರ ಕಲೆಗಳು ಉಳಿಯುತ್ತವೆ ಬೆಳೆಯುತ್ತವೆ.
- ಡಾ. ಬಸವರಾಜ ಬಲ್ಲೂರ
ಕನರ್ಾಟಕ ಕಾಲೇಜು ಕನ್ನಡ ಪಿ.ಜಿ. ಅಧ್ಯಯನ ಕೇಂದ್ರ, ಬೀದರ.
ಮೋ: 9242440379 / 9738418468
ಇ-mail : basavaballur@yahoo.com

ನಿಜಕ್ಕೂ ನಿಮ್ಮ ಕಾಳಜಿ ಮೆಚ್ಚಬೇಕಾಗಿದೆ. ಲಲಿತ ಕಲೆಯ ಮಹತ್ವ ಕನ್ನಡಿಗರಿಗೆ ತಿಳಿಯುತ್ತಿಲ್ಲ
ReplyDelete