ಡಾ. ಜಯದೇವಿತಾಯಿ ಲಿಗಾಡೆ
ಗಡಿನಾಡವೆಂದರು ಕನ್ನಡಕ್ಕೆ ಕಡಿಮಿಲ್ಲ
ಕನ್ನಡ ತಾಯಿಗೆ ಪದಗಳ | ಒಡವೆಯ
ಇಡಿಸುವೆ ನಾ ||
ಕನ್ನಡದಲ್ಲಿ ಇಂಥ ಸಾವಿರದ ಪದಗಳನ್ನು ಬರೆಯುತ್ತ ಭಾವ, ಭಾಷೆ, ಸಂಸ್ಕೃತಿಗೆ ಗಡಿಗಳಿಲ್ಲವೆಂಬುದನ್ನು ಸಾಬೀತುಗೊಳಿಸಿ ಕನ್ನಡ, ಮರಾಠಿ ಭಾಷೆಯಲ್ಲಿ ಮೌಲಿಕ ಕೃತಿಗಳನ್ನು ಬರೆದ ಡಾ. ಜಯದೇವಿ ತಾಯಿ ಲಿಗಾಡೆ ಕನ್ನಡದ ವಚನ, ಶೂನ್ಯ ಸಂಪಾದನೆಯನ್ನು ಮರಾಠಿಗೆ ಅನುವಾದ ಮಾಡಿದ ಕನರ್ಾಟಕದ ಸಾಂಸ್ಕೃತಿಕ ರಾಯಭಾರಿಗಳು.
ಇಡೀ ಭಾರತೀಯ ದೇಶಿ ಸಂಸ್ಕೃತಿಯ ಚಿಂತನೆಯಲ್ಲಿ ಅನನ್ಯವಾದ ಸಾಂಸ್ಕೃತಿಕ ವ್ಯಕ್ತಿತ್ವ ಹೊಂದಿರುವ ಡಾ.ಜಯದೇವಿತಾಯಿ ಲಿಗಾಡೆ ಕನ್ನಡ ನಾಡು ಕಂಡ ಅಪರೂಪದ ವ್ಯಕ್ತಿತ್ವ, ನೆಲಮೂಲ ಸಂಸ್ಕೃತಿಯ ಪ್ರತಿಪಾದಕರು. ಅನುಭವವೇ ಮನುಷ್ಯರ ನಿಜವಾದ ಶಾಲೆ ಎಂಬ ಬಕರ್್ನ ಮಾತುಗಳಿಗೆ ವ್ಯಾಖ್ಯಾನ ಬರೆದಂತೆ ಬದುಕಿದವರು.ಅದಕ್ಕಾಗಿ ಮೌಲ್ಯವನ್ನು ಸಾಹಿತ್ಯಿಕವಾಗಿ ಬರೆದು, ವೈಯಕ್ತಿಕವಾಗಿ ಬದುಕಿ ಸಾಮಾಜಿಕವಾಗಿ ಆಚರಣೆಯಲ್ಲಿ ತಂದವರಲ್ಲಿ ಡಾ.ಜಯದೇವಿ ತಾಯಿ ಲಿಗಾಡೆ ಕೂಡ ಒಬ್ಬರು.
ಮೂಲತಃ ಜಯದೇವಿ ತಾಯಿಯವರು ಮಹಾರಾಷ್ಟ್ರದ ಇಂದಿನ ಸೋಲಾಪೂರದವರು. ಭಾಷಾವಾರು ಪ್ರಾಂತ ರಚನೆಗೆ ಮೊದಲು ಕನ್ನಡದ ಮಹತ್ವದ ನಾಡಾಗಿದ್ದ ಇದು 12ನೆಯ ಶತಮಾನದ ಸಿದ್ಧರಾಮನ ಸೊನ್ನಲಿಗೆ. ಹಾಗಾಗಿ ಈ ನೆಲದ ಭೌಗೊಳಿಕ ಪರಸರಕ್ಕೆ ಚಾರಿತ್ರಿಕ, ಸಾಂಸ್ಕೃತಿಕ ಮಹತ್ವವಿದೆ.
ಮುಂದೆ 19ನೇ ಶತಮಾನಕ್ಕೆ ಸೋಲಾಪೂರದ ಸಾಂಸ್ಕೃತಿಕ ವಾರಸುದಾರಿಕೆ ಬಂದದ್ದು ಅಲ್ಲಿನ ಮಡಕಿ ವಾರದ ಹಾಗೂ ಲಿಗಾಡೆ ಮನೆತನಗಳಿಗೆ. ಇವರ ಅಜ್ಜ (ತಾಯಿಯತಂದೆ) ವಾರದ ಮಲ್ಲಪ್ಪನವರು ಸೋಲಾಪೂರಕ್ಕೆ ಮೊದಲ ಬಟ್ಟೆ ಗಿರಣಿ ತಂದು ಔದ್ಯೋಗಿಕ ಕ್ರಾಂತಿ ಮಾಡಿದರು. ಐದು ಸಾವಿರ ಜನರಿಗೆ ಕೆಲಸ ನೀಡುವ ಮೂಲಕ ಐದು ಸಾವಿರ ಕುಟುಂಬಗಳಿಗೆ ಆಶ್ರಯ ನೀಡಿದ ಕೀತರ್ಿಶೇಷರು. ಇವರಿಗೆ 500 ಎಕರೆ ಜಮೀನಿತ್ತು. ಹೀಗಾಗಿ ಕೃಷಿ ಮತ್ತು ಔದ್ಯೋಗಿಕರಣದಿಂದ ಇಡೀ ನಾಡಿಗೆ ಹೆಸರಾದ ಮನೆತನ.
ಜಯದೇವಿಯವರ ತಂದೆ ಚನ್ನಬಸವ ಮಡಕಿ, ಸಮಾಜೋಧಾಮರ್ಿಕ, ಶೈಕ್ಷಣಿಕ ಕಾಳಜಿಗಳ ಮೂಲಕ ಸುತ್ತಲಿನ ಜನರ ಬದುಕು ಕಟ್ಟಲು ನೆರವಾದವರು.
ಈ ವಾರದ ಮತ್ತು ಮಡಕಿ ಮನೆತನಗಳೆರಡಾದರೂ ಇರಲು ಸೂರು (ಮನೆ) ಒಂದೆ. ಅವಿಭಕ್ತ ಕುಟುಂಬದ ಮೂಲಕ ಆದರ್ಶ ಮೆರೆದವರು. ತಾಯಿ ಸಂಗವ್ವ ಶಿವಭಕ್ತೆ, ಹಾಡುಗಾರಿಕೆ, ಸೇವಾ ಮನೋಭಾವ, ಮಾತೃ ಹೃದಯದ ಕರುಣಾಮಯಿ.
ಅಜ್ಜನ ಶ್ರೀಮಂತಿಕೆಯಲ್ಲಿಯೂ ತೋರಿದ ಔದಾರ್ಯತೆ, ತಂದೆಂ ಜನಪರ ಕಾಳಜಿ, ತಾಯಿಯ ಕರುಣೆ ಮೈಗೂಡಿಸಿಕೊಂಡು ಬೆಳೆದ ಜಯದೇವಿತಾಯಿ ಲಿಗಾಡೆ ಜನಿಸಿದ್ದು 1912 ಜೂನ್ 23 ರಂದು.
ಅಜ್ಜನವರ ಕಾಯಕನಿಷ್ಟತೆ, ತಂದೆಯವರ ದಾಸೋಹಭಾವದ ಸೇವೆ, ತಾಯಿಯ ದೈವ ಭಕ್ತಿಯ ತ್ರಿವೇಣಿ ಸಂಗಮದಲ್ಲಿ ಅರಳಿದ ಜಯದೇವಿ ತಾಯಿ 3-4 ನೆಯ ವಯಸ್ಸಿನಲ್ಲಿ ಭಕ್ತಿಗೀತೆ ಕಲಿತು ಹಾಡಿದರಿಂದ ಅವರಲ್ಲಿ ಮಹಾಕಾವ್ಯ ಹುಟ್ಟಿತು.
ಮಾತೃ ಭಾಷೆ ಕನ್ನಡವಾಗಿದ್ದರೂ, ಆಡಳಿತ ಭಾಷೆ ಮರಾಠಿಯಾಗಿದ್ದು, ಸೋಲಾಪೂರದಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಲ್ಲದಿದ್ದರಿಂದ ಜಯದೇವಿ ತಾಯಿಯವರು ಅನಿವಾರ್ಯವಾಗಿ ತಮ್ಮ ಆರನೆಯ ವಯಸ್ಸಿಗೆ ಮರಾಠಿ ಶಾಲೆ ಸೇರಬೇಕಾಯಿತು. ಅಸಕ್ತಿಯಿಂದ ಜಯದೇವಿ ತಾಯಿಯವರು ಕನ್ನಡ ಕಲಿತದ್ದು ಮೂರು ಮಕ್ಕಳ ತಾಯಿ ಆದ ಮೇಲೆ.
ಜೀವನಾನುಭವವು ಅವರಿಗೆ ಬಾಲ್ಯದಿಂದಲೇ ಬಂದ ಬಳುವಳಿ ಅವರು ಬಹುದೊಡ್ಡ ಜಮೀನ್ದಾರರಾಗಿದ್ದರಿಂದ ವರ್ಷದ ಆರು ತಿಂಗಳು ಊರಲ್ಲಿನ ಮನೆ ಇಂದ್ರ ಭವನದಲ್ಲಿ (ಇಂದು ಈ ಮನೆ ಸೋಲಾಪೂರದ ನಗರ ಪಾಲಿಕೆ ಆಗಿದೆ) ಕಾಲ ಕಳೆದರೆ ಉಳಿದ ಆರು ತಿಂಗಳು ತೋಟದ ಮನೆ (ಈಠಡಿಟ ಠಣಜ) ಯಲ್ಲಿ ಕಾಲ ಕಳೆಯುತ್ತಿದ್ದರು.
ಆದ್ದರಿಂದ ಎಲ್ಲ (ಕಾಮರ್ಿಕರೊಂದಿಗೆ) ಕಾಯಕ ಜೀವಿಗಳೊಂದಿಗೆ ಬೆರೆಯುವುದು ಜಯದೇವಿ ತಾಯಿಯವರಿಗೆ ಒಂದು ಹೊಸ ಪ್ರಪಂಚದ ದರ್ಶನಾಗುತ್ತಿತ್ತು. ಅವರ ಆಚಾರ, ವಿಚಾರ, ನಡೆನುಡಿ, ಸಂಪ್ರದಾಯ ವೈವಿಧ್ಯಮಯವಾದ ಜೀವನ ಮುಖಗಳ ಪರಿಚಯವಾಗುತ್ತಿತ್ತು. ಜೊತೆಗೆ 'ಕೃಷಿ' ಅನುಭವ ಕೂಡ ದಕ್ಕುತ್ತಿತ್ತು. ಹೀಗೆ ಬಾಲ್ಯದ ದಿನಗಳನ್ನು, ಬದುಕಿನ ಸುಖದುಃಖಗಳನ್ನು ನೈಜ ಅನುಭವದೊಂದಿಗೆ ಕಳೆದದ್ದು ಅವರಲ್ಲಿ ದೊಡ್ಡ 'ಕವಿ' ಹೃದಯ, ಅದಮ್ಯ ಜೀವನ ಪ್ರೀತಿ ಬೆಳೆಯಲು ಕಾರಣವಾಯಿತು.
ಕುಟುಂಬ ಜೀವನ:
ಜೀವ ಜಗತ್ತಿನ ಮೂಲ ಧಾತು ಪ್ರೀತಿಯಾದರೆ, ಪ್ರೀತಿಯ ತವರು ಕುಟುಂಬ. ಪ್ರಪಂಚದಲ್ಲಿದ್ದೂ ಪಾರಮಾರ್ಥ ಗೆದೆಯಬಹುದೆಂಬ ಬಸವಾದಿ ಶರಣರ ಚಿಂತನೆ ಮೈಗೂಡಿಸಿಕೊಂಡ ವಾರದ ಹಾಗೂ ಮಡಕೆ ಮನೆತನದವರು ಜಯದೇವಿತಾಯಿಯು 14ನೆಯ ವರ್ಷಕ್ಕೆ ಕಾಲಿಡಲು ಲಿಗಾಡೆ ಮನೆತನದ 16 ವರ್ಷದ ಚನ್ನಮಲ್ಲಪ್ಪನವರೊಂದಿಗೆ 1926ರಲ್ಲಿ ವ್ಮದುವೆ ಮಾಡಿದರು. ಇದರಿಂದ ಆದ ಹಾನಿ ಎಂದರೆ ಜಯದೇವಿತಾಯಿಯ ಓದಿಗೆ ಪೂರ್ಣವಿರಾಮ ಬಂತು. ಜೊತೆಗೆ ಅವರಿಗೆ ಎದುರಾದ ಅಘಾತವೆಂದರೆ ತವರಿನಲ್ಲಿದ್ದಷ್ಟು ಸ್ವಾತಂತ್ರ್ಯವಾಗಲಿ, ಸಾಮಾಜಿಕ ಕಳಕಳಿಯಾಗಲಿ, ಪ್ರಗತಿಪರ ವಿಚಾರವಾಗಲಿ, ಸಮಾನತೆ ತತ್ವವಾಗಲಿ ಗಂಡನ ಮನೆಯಲ್ಲಿ ಇರಲಿಲ್ಲ. ಬದಲಿಗೆ ಸನಾತನ ಮನಸ್ಸುಳ್ಳ ಐದು ಜನ ಅತ್ತೆಯಂದಿರು. ಇದರಿಂದ ಅನೇಕ ರೀತಿಯ ಕಷ್ಟದ ದಿನಗಳು ಎದುರಾದವು ಆದರೂ ಎನ್ನ ಪಾಡೆನೆಗಿರಲಿ ಅದರ ಹಾಡನಷ್ಟೆ ನೀಡುವೆನು ರಸಿಕ ನಿನಗೆ, ಕಲ್ಲು ಸಕ್ಕರೆಯಂಥ ನಿನ್ನೆದೆಯ ಕರಗಿದರೆ ಅದ ಸವಿಯ ಹಣಸು ಎನಗೆ ಎಂದ ವರಕವಿ ಬೇಂದ್ರೆಯವರು ನುಡಿದಂತೆ
ಮೊಟ್ಟ ಮೊದಲ ಹೆಜ್ಜೆ ಇಟ್ಟೀದ ಸಂಸಾರದಿ
ಚಟ್ಟಂತ ಸುಟ್ಟೀತ ನನಕಾಲ - ಸಿದ್ಧರಾಮ
ಕೊಟ್ಟದ್ದು ಅಟ್ಟುಂಡ ಅಕ್ಕರದಿ
ಹೀಗೆ ನೋವನುಂಗುವ ತನ್ನ ಬೇಗುದಿಯ ಒಡಲನುಡಿಯ ಈ ಮೂರು ಸಾಲುಗಳಲ್ಲಿ ನೂರಾರು ಸಂವೇದನೆಗಳಿವೆ.
ನನ್ನ ನೆತ್ತರದಿಂದ ಜೀವನದಿಂದ ಕನರ್ಾಟಕ ಏಕೀಕರಣ ಸಾಧ್ಯವಾಗುತ್ತಿದ್ದರೆ, ಇಗೋ ಇಂದೇ ಕೊಡಲು ಸಿದ್ದಳಿದ್ದೇನೆ ಎಂದು ಸಿಂಹ ಗರ್ಜನೆ ಮಾಡಿ ಮಾತನಾಡಿದವರು ಸಾಹಿತ್ಯ ಸಮಾಜ ಸೇವೆ ಮತ್ತು ಕನ್ನಡ ನಾಡು ನುಡಿಯ ಪ್ರೀತಿಯಿಂದ ಖ್ಯಾತಿ ಪಡೆದ ಧೀರ ಮಹಿಳೆ ಡಾ. ಜಯದೇವಿ ತಾಯಿ ಲಿಗಾಡೆ ತಾತ್ವಿಕವಾಗಿ ಬಸವಣ್ಣ, ಆಧ್ಯಾತ್ಮಿಕವಾಗಿ ಸಿದ್ಧರಾಮ, ರಾಷ್ಟ್ರೀಯತೆಗಾಗಿ ಮಹಾತ್ಮಾ ಗಾಂಧಿಜೀಯವರಿಂದ ಪ್ರಭಾವಿತವಾರಾಗಿ ವ್ಯಕ್ತಿತ್ವ ರೂಪಿಸಿಕೊಂಡು ದೀನ ದಲಿತರ, ಬಡವರ ಪರವಾಗಿ ಧ್ವನಿ ಎತ್ತಿದವರು, ಜೊತೆಗೆ ಅವರು ಕಂಕಣ ಬದ್ಧರಾಗಿ ನಿಂತಿದ್ದು, ಕನ್ನಡ ಸೇವೆಗಾಗಿ.
ಗಡಿಯಲ್ಲಿ ಕಟ್ಟಿ ಕನ್ನಡದ ಕೋಟೆ, ಉಡಿಯಲ್ಲಿ
ಇಡಿಯ ನಾಡಕ್ಕರೆಯ ಮಕ್ಕಳಾಡುಂಬೊಲವೆ
ಒಡವೆಗಳನುಳಿದ ರುದ್ರಾಕ್ಷಿ ಕಂಕಣ ಬಲವೆ
ಇದ್ದಲ್ಲೇ ಮರಳಿ ಗೆದ್ದಿರಿ ತುತ್ತತುದಿಯಲ್ಲಿ....
ಎಂದ ಖ್ಯಾತಕವಿ ಚನ್ನವೀರ ಕಣವಿಯವರ ಈ ಸಾಲುಗಳು ಜಯದೇವಿ ತಾಯಿಯವರ ಕನರ್ಾಟಕ ಸಂರಕ್ಷಣೆ, ಕನ್ನಡತ್ವದ ಪ್ರೀತಿ, ಜನಪರ ಕಾಳಜಿ, ಅವರ ಸರಳತೆ-ಸೌಜನ್ಯತೆ ಅನುಭಾವದ ಎತ್ತರ ತೋರಿಸಿಕೊಡುತ್ತವೆ. ಡಾ. ಜಯದೇವಿ ತಾಯಿ ಕನ್ನಡ ಕಲಿಯದಿದ್ದರೆ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಹಾನಿಯಾಗುತ್ತಿತ್ತು ಎಂಬ ಎಚ್.ಎಸ್.ಮುಕ್ತಾಯಕ್ಕರ (ಜಯದೇವಿ:ಅಭಿನಂದನ ಗ್ರಂಥ) ಮಾತು ಅರ್ಥಪೂರ್ಣ. ಏಕೆಂದರೆ ಜಯದೇವಿ ತಾಯಿ ಲಿಗಾಡೆಯವರ ತಾಯಿಯ ಪದಗಳು ಜಯಗೀತೆ ಸಾವಿರ ಪದಗಳು ತಾರಕ ತಂಬೂರಿ ಬಂದೇವ ಕಲ್ಯಾಣಕೆ, ಅರಿವಿನಾಗರ ಮೊದಲಾದ ಕೃತಿಗಳು ಪ್ರಕಟವಾಗಿದ್ದು ಕನ್ನಡದಲ್ಲೆ. ಸಂಕೀರ್ಣ ತ್ರಿಪದಿಗಳು, ದಾನಮ್ಮದೇವಿಯ ತ್ರಿಪದಿಗಳು ಮೊದಲಾದವು ಉಳಿದಿದೆ. ಇನ್ನೂ ವಿಶೇಷವೆಂದರೆ, ಕನ್ನಡ ಕಾವ್ಯದ ಗಂಗೋತ್ರಿಯೆಂದು ಕರೆಸಿಕೊಳ್ಳುವ ಅಚ್ಚ ದೇಶಿ ಛಂದಸ್ಸು ತ್ರಿಪದಿಯಲ್ಲಿ ಶ್ರೀ ಸಿದ್ಧರಾಮೇಶ್ವರ ಪುರಾಣವೆಂಬ ಮಹಾಕಾವ್ಯ ಬರೆದದ್ದು ಸಹ ಕನ್ನಡದಲ್ಲಿ.
ಬಹುಮುಖ್ಯವಾಗಿ ನಮ್ಮಲ್ಲಿ ಅನೇಕ ಕನ್ನಡ ಮಹಾಕಾವ್ಯಗಳು ಪ್ರಾಚೀನ ಕಾಲದಿಂದ ಅಧುನಿಕದವರೆಗೆ ಬಂದಿದ್ದು ಮಹಾಕಾವ್ಯಗಳ ನಾಯಕತ್ವ ಪೌರಾಣಿಕ ಅಥವಾ ಆರಸೂತ್ತಿಗೆಯ ವ್ಯಕ್ತಿಗಳಿಗೆ ಮೀಸಲಾಗಿದೆ. ಆದರೆ ಸಿದ್ಧರಾಮ ಒಬ್ಬ ದ್ರಾವಿಡ ಸಂಸ್ಕೃತಿಯ, ಶ್ರಮಮೂಲ ಕಾಯಕ ತತ್ವದ ಪ್ರತಿಪಾದಕ, ದೇಶಿ ಭಾಷೆಯ ಸೊಗಡಿನಲ್ಲಿ ವಚನ ಬರೆದ ಹನ್ನೆರಡನೆ ಶತಮಾನದ ಸಿದ್ಧರಾಮ. ಜಯದೇವಿ ತಾಯಿಯವರ ಮಹಾಕಾವ್ಯದ ನಾಯಕನಾಗಿರುವುದು, ಈ ನೆಲದ ಬಹುಸಂಸ್ಕೃತಿ ಪ್ರತಿಫಲಿಸಿ ಈ ಕೃತಿಗೆ ಸಾಂಸ್ಕೃತಿಕ ಮಹತ್ವ ಬಂದಿದೆ.
ಜಯದೇವಿತಾಯಿಯವರಿಗೆ ಕನ್ನಡದೊಂದಿಗೆ ಮರಾಠಿ ಭಾಷೆಯ ಮೇಲೂ ಉತ್ತಮ ಪ್ರಭುತ್ವವಿತ್ತು, ಹಾಗಾಗಿ ಸಮೃದ್ಧ ಕನರ್ಾಟಕಾಂಚಿ ರೂಪ ರೇಷ (1954) ಕೃತಿ ಬರೆದು ಮರಾಠಿಗರಿಗೆ ಕನರ್ಾಟಕದ ಸಾಂಸ್ಕೃತಿಕ ಚರಿತ್ರೆಯನ್ನು ಪರಿಚಯಿಸಿದರು. ಸಿದ್ಧವಾಣಿ (1952), ಬಸವ ದರ್ಶನ (1954) ಮಹಾಯೋಗಿನಿ ಅಕ್ಕಮಹಾದೇವಿ ಸಿದ್ಧರಾಮಾಂಚಿ ತ್ರಿವಿಧಿ (1958) ಬಸವ ವಚನಾಮೃತ (1966) ಸಿದ್ಧಲಿಂಗ (1962) ಶೂನ್ಯ ಸಂಪಾದನೆ, ಸಿದ್ದರಾಮನ ತ್ರಿವಿಧಿಗಳನ್ನು ಮರಾಠಿ ಭಾಷೆಗೆ ಅನುವಾದ ಮಾಡಿ, ಮರಾಠಿ ಮತ್ತು ಕನ್ನಡದ ಮಧ್ಯ ಸಾಂಸ್ಕೃತಿಕ ಸಾಮರಸ್ಯ-ಭಾಷಿಕ ಸಮನ್ವಯ ತಂದರು.
ಹೀಗೆ ಕನ್ನಡದ ಜೊತೆಗಿನ ಭಾವನಾತ್ಮಕ ಸಂಬಂಧವೇ ಅವರನ್ನು ಕನರ್ಾಟಕ ಏಕೀಕರಣಕ್ಕೆ ಮುಂದು ಮಾಡಿತು. ಅವರು ಏಕೀಕೃತ ಕನರ್ಾಟಕದ ಶಿಲ್ಪಿಗಳಾದರು.
ಕಾವೇರಿಯಿಂದ ಗೋದಾವರಿವರೆಗಿದ್ದ ಕನ್ನಡ ನಾಡು ಪರಕೀಯ ಆಳ್ವಿಕೆಗೆ ಒಳಪಟ್ಟು ಜರ್ಜರಿತವಾಗಿ ವಸಾಹತು ಶಾಹಿಗಳ ಕಾಲಕ್ಕೆ ಹಂಚಿ ಹರಿದು ಹೋಯಿತು. ಹೀಗೆ ಪರಕೀಯರಿಂದ ಸ್ವಾಂತಂತ್ರ್ಯ ಪಡೆಯುವುದು, ಕನರ್ಾಟಕ ಏಕೀಕರಣ ಮಾಡುವುದು ಜಯದೇವಿ ತಾಯಿಯವರಿಗೆ ಮುಖ್ಯವಾಗಿತ್ತು. ಗಾಂಧಿಯವರ ಪ್ರಭಾವಕ್ಕೊಳಗಾಗಿ ರಾಷ್ಟ್ರೀಯತೆ ಬೆಳೆಸಿಕೊಂಡ ಅವರು ಅತ್ಯಂತ ಸಂಘಟನಾಶೀಲರಾಗಿದ್ದರು. ಹೈದ್ರಾಬಾದ ಕನರ್ಾಟಕ ವಿಮೋಚನೆಗೆ ದುಡಿದ ತಾಯಿಯವರು ಮುಂದೆ ಕನರ್ಾಟಕ ಏಕೀಕರಣಕ್ಕಾಗಿ ಪಣತೊಟ್ಟರು. ಆಗ ಕನ್ನಡ ನಾಡಿನ ಮಕ್ಕಳು, ನಮ್ಮ ತಾಯಿ ಅನೇಕ ಪ್ರಾಂತಗಳಲ್ಲಿ ಹಂಚಿ ಹೋದಾಗ ನಾವು ನೆಮ್ಮದಿಯಿಂದ ಇರುವುದು ಹೇಗೆ? ಒಡೆದು ಹೋದ ಕನರ್ಾಟಕ ಒಂದಾಗಬೇಕು. ಎಂದು ಬಲವಾಗಿ ಪ್ರತಿಪಾದಿಸಿದರು. ಅನೇಕರ ಅವಿರತ ಹೋರಾಟದ ಫಲವಾಗಿ ಕನರ್ಾಟಕ ಏಕೀಕರಣವಾಯಿತು. ಆದರೆ ಆಡಳಿತ ಭಾಷೆ ಕನ್ನಡವಾಗದಿದ್ದಾಗ ಭಾರತದ ಹೆಬ್ಬಾಗಿಲಾದ ಮುಂಬಯಿಯಂತಹ ನಗರದಲ್ಲಿ ಮೊದಲ ಆಂಗ್ಲ ಗವರ್ನರಿಗೆ ಕೊಡಮಾಡಿದ ನಾಗರಿಕ ಸನ್ಮಾನ ಪತ್ರ ಕನ್ನಡದಲ್ಲಿದ್ದುದನ್ನು ನೆನಪಿಸಿದ ತಾಯಿಯವರು ನಮ್ಮ ಸಕರ್ಾರವು ಅದಷ್ಟು ಬೇಗ ಕನ್ನಡವನ್ನು ಆಡಳಿತ ಭಾಷೆಯೆಂದು ಸಾರಬೇಕು. ಅದಕ್ಕೆ ಅನುಗುಣವಾಗಿ ವಿಶ್ವವಿದ್ಯಾಲಯಗಳು ಕನ್ನಡ ಮಾಧ್ಯಮವನ್ನು ಸ್ವೀಕರಿಸಬೇಕು ಎಂದು 1972ರಲ್ಲಿ ಮಂಡ್ಯದಲ್ಲಿ ನಡೆದ 48ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಮಾತುಗಳ ಮೂಲಕ ಕರೆ ನೀಡುತ್ತ ಗಡಿಭಾಗದ ಹಲವಾರು ಸಮಸ್ಯೆಗಳನ್ನು ಎತ್ತಿ ಹಿಡಿದು ಪರಿಹಾರ ಸೂತ್ರಗಳನ್ನು ಸೂಚಿಸಿದರು.
ಜಯದೇವಿ ತಾಯಿಯವರ ಘನವ್ಯಕ್ತಿತ್ವ ಕನ್ನಡ ನಾಡು-ನುಡಿ ಕುರಿತ ಕಾಳಜಿ ಮತ್ತು ಅವರ ಪ್ರತಿಫಲಾಪೇಕ್ಷೆ ಇಲ್ಲದ ನಿರಂತರ ಹೋರಾಟಗಳನ್ನು ಗಮನಿಸಿ, ಕನರ್ಾಟಕ ವಿಶ್ವವಿದ್ಯಾಲಯವು 1976ರಲ್ಲಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು. ನಾಡಿನ ಅಭಿಮಾನಿಗಳು 1972ರಲ್ಲಿಯೆ ಜಯದೇವಿ ಅಭಿನಂದನ ಗ್ರಂಥ ಅಪರ್ಿಸಿದರು. ಆದರೂ ಅವರಲ್ಲಿ ಯಾವುದೇ ಅಹಂ ಸುಳಿಯಲಿಲ್ಲ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಂತಹ ಮಹತ್ವದ ಕನ್ನಡ ಜಾತ್ರೆಯ ಅಧ್ಯಕ್ಷರಾಗಿದ್ದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಜಯದೇವಿ ತಾಯಿಯವರದ್ದು ಕನ್ನಡತ್ವ ಕುರಿತು ಒಣಸಹಾನುಭೂತಿ ಇರಲಿಲ್ಲ. ಬದಲಾಗಿ ಅಂತಃಕರಣದಿಂದ ಪ್ರೀತಿಸಿದರು. ನನ್ನ ಜೀವಮಾನದ ಕೊನೆಯುಸಿರಿರುವವರೆಗೂ ಕನ್ನಡಕ್ಕಾಗಿಯೇ ದುಡಿಯುವೆ. ಕನ್ನಡಕ್ಕಾಗಿಯೆ ಬದುಕುವೆ. ಕನ್ನಡವೇ ನನ್ನ ಧರ್ಮ ಎಂದು (ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಭಾಷಣ) ಸಾರುವ ಮೂಲಕ ಅಖಂಡ ಕನರ್ಾಟಕ್ಕಾಗಿ ಹೋರಾಡಿದ ಧೀಮಂತ ಮಹಿಳೆ ಜಯದೇವಿ ತಾಯಿ ಲಿಗಾಡೆ.
ಸಾಮಾಜಿಕ ಸಂಘéರ್ಷ : ಜಯದೇವಿ ತಾಯಿ ಲಿಗಾಡೆಯವರಿಗೆ ಸಮಾಜ ಸೇವೆ ಮತ್ತು ಲಿಂಗ ಪೂಜೆ ಬದುಕಿನ ಎರಡು ಕಣ್ಣುಗಳಾಗಿದ್ದವು. ಧರ್ಮ ಸಮಾಜವನ್ನು ಅವರೆಂದೂ ಖಂಡ ಸ್ವರೂಪವಾಗಿ ನೋಡಲೇ ಇಲ್ಲ. ಮದುವೆಯ ಆರಂಭದ ದಿನಗಳು ಒತ್ತಡ ಸಂದ್ಗಿತೆಗಳನ್ನು ಬದಿಗಿರಿಸಿ ಮೂರ್ನಾಲ್ಕು ವರ್ಷಗಳ ನಂತರ ಸಮಾಜ ಸೇವೆಗೆ ತೊಡಗಿಸಿಕೊಂಡರು. ಕಷ್ಟಗಳು ಸಾಲಾಗಿ ಬರುತ್ತವೆ ಎಂಬುದು ಎಲ್ಲರಿಗೂ ಅನ್ವಯಿಸುವ ಮಾತೇ ಸರಿ. ಅನಾರೋಗ್ಯದಿಂದ ಬಳಲುತಿದ್ದ ಗಂಡ, ವಯೋವೃದ್ದ ಅತ್ತೆಯರು ಎಳೆಯ ಐದು ಮಕ್ಕಳ ಪಾಲನೆಯೊಂದಿಗೆ ಸಮಾಜ ಸೇವೆಗೆ ತೊಡಗಿಸಿಕೊಂಡಿರುವಾಗ ತನ್ನ 20 ವರ್ಷದ ದಾಂಪತ್ಯ ಮುಗಿದು (1946) ಪತಿವಿಯೋಗವಾಗುತ್ತದೆ .ನೋವಲ್ಲಿ ಅದ್ದಿದ ಕುಂಚದಂತೆ ಬಿಡದೆ ತಮ್ಮನ್ನು ಸಮಾಜ ಸೇವೆಗೆ ತೊಡಗಿಸಿಕೊಂಡ ಲಿಗಾಡೆಯವರ ಸಹನಶೀಲತೆ ಆತ್ಮಸ್ಥೈರ್ಯ ಮೆಚ್ಚತಕ್ಕದ್ದು.
ಸ್ತ್ರೀ ಜಾಗೃತಿಯಿಂದ ಮಾತ್ರ ವಿಚಾರವಾದ ಬಿತ್ತಬಹುದೆಂದು ನಂಬಿರುವ ತಾಯಿಯವರು ಅಕ್ಕನ ಬಳಗ ಕಟ್ಟಿದರು. 1934ರಲ್ಲಿ ವೀರಶೈವ ಸಾಹಿತ್ಯ ಸಭೆಯ ಅಧ್ಯಕ್ಷತೆ ವಹಿಸುವ ಮೂಲಕ ಮಹಿಳಾ ಲೋಕಕ್ಕೆ ಗೌರವ ತಂದು ಕೊಟ್ಟರು. ಕನರ್ಾಟಕ, ಆಂಧ್ರ, ಮಹಾರಾಷ್ಟ್ರಗಳಲ್ಲಿ ಸ್ತ್ರೀ ಜಾಗೃತಿ ಹಾಗೂ ವೈಚಾರಿಕತೆ ನೆಲೆಗೊಳಿಸಲು ಹೋರಾಟ ಮಾಡಿದರು.
ಈ ಸಂದರ್ಭಕ್ಕೆ ಅಥಣಿ ಶಿವಯೋಗಿಗಳು, ಹಾನಗಲ್ ಕುಮಾರಸ್ವಾಮಿಗಳು, ಚಿತ್ರದುರ್ಗದ ಶ್ರೀ ಜಯದೇವಪ್ಪಗಳು, ಘ.ಗು. ಹಳಕಟ್ಟಿಯವರು, ಹಡರ್ೆಕರ ಮಂಜಪ್ಪನವರು, ಉತ್ತಂಗಿ ಚನ್ನಪ್ಪನವರು, ಡಾ. ಚೆನ್ನಬಸವಪಟ್ಟದೇವರು ಮೊದಲಾದವರ ಒಡನಾಟದಿಂದ ತಮ್ಮ ಸಮಾಜ ಸೇವೆಗೆ ಒಂದು ಪರಿಪೂರ್ಣತೆ ತಂದು ಕೊಂಡರು. ಅಂತರ್ರಾಷ್ಟ್ರೀಯ ಖ್ಯಾತಿವೆತ್ತ ನೇತ್ರತಜ್ಞ ಡಾ. ಎಂ.ಎಸ್.ಮೋದಿ ಅವರ ಬೃಹತ್ ಶಿಬಿರವೊಂದಕ್ಕೆ ರೋಗಿಗಳಿಗೆ ಪ್ರಸಾದ ವ್ಯವಸ್ಥೆಯೊಂದಿಗೆ ಉದಾರ ನೆರವು-ಸೇವೆ ಸಲ್ಲಿಸಿದ ಕೀತರ್ಿ ಇವರದಾಗಿದೆ. ಹೀಗೆ ಸಮಾಜ ಸೇವೆಗೆ ಕಾಯ, ವಾಚ, ಮನಸಾ ತೊಡಗಿಸಿಕೊಂಡವರು.
ನ್ಯಾಯ ನಿಷ್ಠುರಿ ದಾಕ್ಷಿಣ್ಯ ಪರನಾನಲ್ಲ, ಲೋಕ ವಿರೋಧಿ ಶರಣನಾರಿಗಂಜುವವನಲ್ಲ... ಎಂಬ ಬಸವಣ್ಣನವರ ವಚನದಂತೆ ನಾಡು, ನುಡಿ, ನೆಲ, ಜಲ, ಸಂಬಂಧಿ ಯಾವುದೇ ಸಾಂಸ್ಕೃತಿಕ ವಿಷಯಗಳು ಬಂದಾಗ ಅತ್ಯಂತ ನಿಷ್ಠುರರಾಗಿ ಛಲದಿಂದ ಪ್ರತಿಭಟಿಸುತ್ತಿದ್ದರು, ನಿಜಾಂ ಆಳ್ವಿಕೆಯ ದಮನಕಾರ ನೀತಿಯಿಂದ ತತ್ತರಿಸಿದ ಜನರಿಗಾಗಿ ಜಹೀರಾಬಾದಿನಲ್ಲಿ ಹೈದ್ರಾಬಾದ ಪ್ರಾಂತೀಯ ಸಭೆ ಆಯೋಜಿಸಲಾಗಿತ್ತು. ಜಯದೇವಿತಾಯಿಯವರ ಭಾಷಣವೆಂದರೆ ಜನಸಾಗರವೇ ಸೇರಿರುತ್ತಿತ್ತು. ರಾಜ್ಯ ಗಡಿಯೊಳಗೆ ಬಂದರೆ ಬಂಧಿಸಬೇಕು ಎಂಬುದು ನಿಜಾಮನ ಫರಮಾನು (ಕಟ್ಟಾಜ್ಞೆ) ಇರುತ್ತದೆ. ಇದಾವುದಕ್ಕೂ ಬಗ್ಗದೆ ತಾಯಿಯವರು ನಿಜಾಮನ ವ್ಯವಸ್ಥೆ ವಿರುದ್ಧವೆ ಭಾಷಣ ಮಾಡಿದರು.
ಕಲ್ಯಾಣದ ಭೂಮಿಯ ಸೀಮೆಯೊಳಗೆ
ಕಾಲಿಡಕೂಡದು ಕಾಯ್ದೆ ತೆಗೆದಾನು - ನಿಜಾಮ
ಅಲಿಸದೇ ಸೀಮೆ ದಾಟಿದೆ,
ಎಂದು ಹೇಳಿ ನೆರೆದವರಲ್ಲಿ ಅತ್ಮಬಲ ತುಂಬಿದರು. ಅವರ ಈ ಮಾತುಗಳೇ ಅವರಿಗಿದ್ದ ಧೈರ್ಯವನ್ನು ಹೇಳುತ್ತದೆ.
ಲಿಗಾಡೆಯವರ ಕೆಚ್ಚು, ಸಾಹಸ, ಸಂಘಟನಾ ಶಕ್ತಿ ನೋಡಿ ಎರಡನೇ ಜಾಗತಿಕ ಮಹಾಯುದ್ಧದ ಕಾಲದಲ್ಲಿ ಬ್ರಿಟೀಷರು ಸೈನ್ಯದಲ್ಲಿ ವೀರಶೈವ ಫಟಕವೊಂದನ್ನು ರಚಿಸಲು ಯೋಚಿಸಿ ಇವರ ನೆರವು ಕೇಳಿದರು. ಜಯದೇವಿತಾಯಿ ಒಪ್ಪಲಿಲ್ಲ. ಇದಾವುದಕ್ಕೂ ಸೊಪ್ಪು ಹಾಕದಾಗ ಜಯದೇವಿ ತಾಯಿಯವರಿಗೆ ಬ್ರಿಟೀಷರು ಕೈಸರ್ ಇ-ಹಿಂದ್ ಅನ್ನುವ ಪದವಿಯನ್ನು ಘೋಷಿಸುತ್ತಾರೆ. ದಾರಿ ಬದಲು ಮಾಡಿಕೊಂಡ ಬ್ರಿಟಿಷ್ ನೀತಿಯನ್ನರಿತು ತಾಯಿಯವರು ಆ ಪದವಿಯನ್ನು ನಿರಾಕರಿಸುತ್ತಾರೆ. ಬ್ರಿಟಿಷ್ ಸರಕಾರ ಕೊಡಮಾಡುವ ಈ ಪದವಿಯ ನಿರಾಕರಣೆ ಅಂದರೆ ಅದು ಪ್ರಭುತ್ವದ ನಿರಾಕರಣೆಯೇ ಸರಿ. ಪದವಿ ಪುರಸ್ಕಾರಕ್ಕಾಗಿ ಲಾಬಿ ನಡೆಸುತ್ತ ತನ್ನತನ ಕಳೆಯುತ್ತಿರುವ ಇಂದಿನ ಕಾಲದಲ್ಲಿ ಲಿಗಾಡೆಯವರ ನಿಷ್ಕಾಮ ಸೇವೆ ಅನುಕರಣೀಯ ಅವರ ಪ್ರತಿಭಟನೆ ಪ್ರತಿಫಲಾಪೇಕ್ಷೆ ಇಲ್ಲದ ಸಾತ್ವಿಕತೆಯ, ಸತ್ಯದ ಪರವಾಗಿತ್ತೆಂಬುದು ತಿಳಿದು ಬರುತ್ತದೆ.
ಕಾಯಕ ನಿಷ್ಟೆ : ಜಾಗತಿಕ ಪರಂಪರೆಯಲ್ಲಿ 'ಜ್ಞಾನವೇ ತತ್ವಜ್ಞಾನ'ವೆಂದು ಹೇಳುತ್ತ ಬಂದಿರುವಾಗ ಬಸವಾದಿ ಶರಣರು ಕಾಯಕ (ಶ್ರಮ)ವೇ ತತ್ವಜ್ಞಾನವೆಂದು ಹೇಳಿದರು. ಅದಕ್ಕಾಗಿ ಕಾಯಕಯೋಗಿ ಸಿದ್ದರಾಮನ ಪ್ರಭಾವಕ್ಕೊಳಗಾಗಿದ್ದ ಜಯದೇವಿ ತಾಯಿಯವರು ಕಾಯಕ ಜೀವಿಗಳ ಪರ ನಿಂತರು. 1951ರಲ್ಲಿ ಕಾಮರ್ಿಕ ಸಾಕ್ಷರ ಮಂಡಳಿಗೆ ಸದಸ್ಯರಾಗಿ ನೇಮಕವಾದಾಗ ಕಾಂಗ್ರೇಸ್ ಪಕ್ಷಕ್ಕೆ ರಾಜಿನಾಮೆ ನೀಡಿದರು. ಆ ಕಾಲಕ್ಕೆ ಸೋಲಾಪೂರ ದಕ್ಷಿಣ ಭಾರತದಲ್ಲೇ ಅತಿ ದೊಡ್ಡ ಔದ್ಯೋಗಿಕರಣಕ್ಕೆ ಹೆಸರಾಗಿತ್ತು. ಹಾಗಾಗಿ 30 ಸಾವಿರ ಕಾಮರ್ಿಕರು ದುಡಿಯುತ್ತಿದ್ದರು. ಕಾಮರ್ಿಕರ ಮಕ್ಕಳು ಕಾಮರ್ಿಕರಾಗಬಾರದೆಂಬುದು ಜಯದೇವಿ ತಾಯಿಯವರ ನಿಲುವಾಗಿತ್ತು. ಶಿಕ್ಷಣದ ಮೂಲಕ ಮಾತ್ರ ತಮ್ಮ ಎಲ್ಲಾ ಸಮಸ್ಯೆಗಳು ಪರಿಹಾರವೆಂಬುದನ್ನು ಅರಿತ ಅವರು ಕಾಮರ್ಿಕರ ಮಕ್ಕಳಿಗಾಗಿ ಕನ್ನಡ ಶಾಲೆ ತೆರೆದು ಸಾಕ್ಷರತೆಗೆ ನಾಂದಿ ಹಾಡಿದರು. ಎರಡನೇ ವರ್ಷದಲ್ಲಿ 25 ವರ್ಗಗಳ ಬೇಡಿಕೆ ಬಂತು. ಹೀಗೆ ಕಾಮರ್ಿಕರ ಪರ ನಿಲ್ಲುವ ಮೂಲಕ ಅನೇಕ ಅಭ್ಯುದಯ ಕಾರ್ಯ ಚಟುವಟಿಕೆ ಹಮ್ಮಿಕೊಂಡರು.
ಸ್ತ್ರೀವಾದ : ಜಗತ್ತಿನ ಮನುಕುಲದ ಚರಿತ್ರೆಯಲ್ಲಿ ಹೆಣ್ಣು ಎರಡನೇ ದಜರ್ೆಯ ಪ್ರಜೆಯಾಗಿ ಪರಿಗಣಿಸುತ್ತಲೆ ಎಲ್ಲಾ ಸವಲತ್ತುಗಳಿಂದ ವಂಚಿತಳಾಗಿ, ದುರಂತ ಕಥೆಯ ನಾಯಕಿಯಾಗಿರುವುದು ಶೋಚನೀಯ ಸಂಗತಿ. ಇದಕ್ಕೆ ವ್ಯತಿರಿಕ್ತವಾಗಿ ಮಧ್ಯಕಾಲದ ಶರಣರು ಮಹಿಳೆಗೆ ಧಾಮರ್ಿಕ ವೈಚಾರಿಕ ಸ್ವಾತಂತ್ರ್ಯ ನೀಡಿದರು. ಮುಂದೆಯೂ ಹೆಣ್ಣು ಅಡಿಗೆ ಮನೆ'ಗೆ ಸೀಮಿತವಾದಾಗ ಕೆಲ ಬುದ್ಧಜೀವಿಗಳು ಮಹಿಳಾಪರ ನಿಂತು ಸ್ತ್ರೀವಾದ ಮಂಡಿಸಿದ್ದಾರೆ. ಅಂಥವರಲ್ಲಿ ಡಾ. ಜಯದೇವಿ ತಾಯಿ ಲಿಗಾಡೆ ಕೂಡ ಒಬ್ಬರು.
ಸ್ತ್ರೀವಾದ ಕುರಿತು ಜಯದೇವಿ ತಾಯಿ ಲಿಗಾಡೆಯವರ ನಿಲುವು ತೀರ ಭಿನ್ನವಾಗಿದೆ. ಆಧುನಿಕ ಸ್ತ್ರೀವಾದವಂತು ಪುರುಷ ದ್ವೇಷಿ ಎಂದೇ ಬಿಂಬಿಸಲಾಗುತ್ತಿದೆ. ಸ್ತ್ರೀ-ಪುರುಷ ಪ್ರತ್ಯೇಕ ಘಟಕವಾಗಿ ವಿರುದ್ಧ ದಿಕ್ಕುಗಳಾಗಿದ್ದಾರೆ. ಆದರೆ ಜಯದೇವಿ ತಾಯಿ ಲಿಗಾಡೆಯವರ ಸ್ತ್ರೀವಾದ ಪುರುಷ ವಿರೋಧಿ ಅಲ್ಲ. ಬದಲಾಗಿ ಮಹಿಳೆಯರಿಗೂ ಸಮಾನ ಅವಕಾಶ ನೀಡುವ ಪುರುಷರಷ್ಟೇ ಪಾಲುಗಾರಿಕೆ ಒಪ್ಪಿಕೊಳ್ಳುವ ಸ್ತ್ರೀವಾದ ಮಾತ್ರ ಸ್ವಸ್ಥ ಸಮಾಜಕ್ಕೆ ಬುನಾದಿ ಎಂಬುದು ಅರಿತಿದ್ದರು. ಈ ಹಿನ್ನಲೆಯಲ್ಲಿ ಮಹಿಳಾ ಜಾಗೃತಿ ರೂಪಿಸಿದರು. ಮಹಿಳೆಗೆ ಶಿಕ್ಷಣ ನೀಡುವುದು ಅವರ ಮೊದಲ ಅದ್ಯತೆಯ ವಿಷಯವಾಗಿತ್ತು. ಅಖಿಲ ಭಾರತ ವೀರಶೈವ ಮಹಿಳಾ ಪರಿಷತ್ತಿನ ಅಧ್ಯಕ್ಷಿಯ ಭಾಷಣ ಹಲವಾರು ಜನರಿಗೆ ಸ್ಫ್ಫೂತರ್ಿಯಾಯಿತು.
ನಿರಾಶ್ರಿತರಿಗೆ ಆಶ್ರಯ : ಇಡೀ ದೇಶ ಸ್ವಾತಂತ್ರ್ಯವಾದರೂ ಹೈದ್ರಾಬಾದ ಕನರ್ಾಟಕ ಮಾತ್ರ ನಿಜಾಮನ ಆಳ್ವಿಕೆಗೆ ಒಳಪಟ್ಟಿತ್ತು. ವಾಸ್ತವವಾಗಿ ದೂರದೃಷ್ಟಿಯುಳ್ಳ ನಿಜಾಮ ಅಭಿವೃದ್ಧಿಪರ ಚಿಂತಕನಾಗಿದ್ದ. ಆದರೆ ಸ್ವಾತಂತ್ರ್ಯ ಬಿಟ್ಟುಕೊಡುವಲ್ಲಿ ವಿಫಲನಾಗಿ ರಜಾಕಾರ ಎಂಬ ಸಂಘಟನೆ ಮೂಲಕ ಆಡಳಿತ ನಡೆಸಲು ಮುಂದಾದ. ಅದು ರಜಾಕಾರ 'ಹಾವಳಿ' ರೂಪ ತಾಳಿ ಉಗ್ರವಾದ ದಮನಕಾರಿ ಅಡಳಿತಕ್ಕೆ ಇಳಿದಾಗ ಜನ ರೋಷಿ ಹೋಗಿ, ಹೆದರಿ ಸೋಲಾಪೂರಕ್ಕೆ ವಲಸೆ ಹೋದರು. ಅಲ್ಲಿ ಡಾ. ಜಯದೇವಿ ತಾಯಿ ಲಿಗಾಡೆಯವರು ಉದಾರ ಆಶ್ರಯ ನೀಡಿ ವಾತ್ಸಲ್ಯದ ಧಾರೆಯೆರೆದರು. ತಮ್ಮ ತೋಟದ ಮನೆಯಲ್ಲಿ ವಾಸ್ತವ್ಯ ನೀಡಿ ಅನ್ನ-ಬಟ್ಟೆ-ಹೊದಿಕೆಗಳನ್ನು ಪೂರೈಸಿದರು. ಇದರಲ್ಲಿ ವಯೋಭೇದ, ಲಿಂಗಭೇದ, ಜಾತಿಭೇದವಿಲ್ಲದೆ ಎಲ್ಲಾ ಕುಲ-ಕುಸುಬಿನ ಜನರಿದ್ದರು. ಅಬಾಲ ವೃದ್ಧರು ಮಹಿಳೆಯವರು, ಪುರುಷರು ಸೇರಿದ್ದರು. ಕೆಲ ಗಭರ್ಿಣಿಯರು ಅದರಲ್ಲಿದ್ದಾಗ ತಾಯಿಯವರು ಕೆಲವರ ಬಾಣಂತನ ಮಾಡಿ ತಾಯ್ತನ ಮೆರೆದರು. ಇದೇ ಸಂದರ್ಭಕ್ಕೆ ಭಾಲ್ಕಿ ಹೀರೆಮಠದ ಡಾ.ಚನ್ನಬಸವ ಪಟ್ಟದ್ದೇವರು ಸಹ ತಮ್ಮ ಕನ್ನಡ ಶಾಲೆಮಕ್ಕಳನ್ನು ಸೋಲಾಪೂರಕ್ಕೆ ಕಳುಹಿಸಿದರು. ಹೀಗೆ ಬಂದವರಿಗೆಲ್ಲಾ ಜಯದೇವಿ ತಾಯಿಯವರು ಆಶ್ರಯ ನೀಡಿದರು. ನೆನೆದ ಕವಿಯೊಬ್ಬರು
ಹೇಗೆ ತೀರಿಸಬೇಕು ತಾಯಿ
ನಿನ್ನ ಋಣವ ಒಟ್ಟು
ನೆನೆವೆವು ಹಡೆದ ಮಕ್ಕಳನೆ
ನಿನ್ನ ಹೆಸರಿಟ್ಟು
ಎಂದು ಮನದುಂಬಿ ನುಡಿದರು. ಬಹುಶಃ ಉಪಕಾರ ಸ್ಮರಣೆಗೆ ಇದಕ್ಕಿಂತ ದೊಡ್ಡ ಮಾತಿನ ಅಗತ್ಯವಿಲ್ಲ.
ದಲಿತಪರ ಕಾಳಜಿ : 19ನೇ ಶತಮಾನ ದಲಿತರ 'ಅಭಿವೃದ್ಧಿಪರ' ಚಿಂತನೆಯ ಕಾಲ, ಚಳವಳಿಯ ಕಾಲವೆಂದು ಹೇಳಬಹುದು. ಆ ಕಾಲದಲ್ಲಿ ಫುಲೆ, ಪೇರಿಯಾರ, ನಾರಾಯಣಗುರು ಮೊದಲಾದವರು ದಲಿತರನ್ನು ಮೇಲೆತ್ತುವ ಆಂದೋಲನ ಪ್ರಾರಂಭಿಸಿದರು. ನಿರ್ಲಕ್ಷ್ಯಕ್ಕೊಳಗಾದವರನ್ನು ಮುಖ್ಯ ವಾಹಿನಿಗೆ ತರುವ ಕೆಲಸ ಮಾಡಿದರು. ಅದೇ ಕೆಲಸವನ್ನು ಸೋಲಾಪೂರದಲ್ಲಿ ಡಾ. ಜಯದೇವಿ ತಾಯಿ ಲಿಗಾಡೆಯವರು ಯಾವುದೇ ಸದ್ದು-ಗದ್ದಲವಿಲ್ಲದೆ ಆರಂಭಿಸಿದ್ದು, ಅವರ ದಲಿತಪರ ಕಾಳಜಿ ತೋರಿಸುತ್ತದೆ. ಜಯದೇವಿ ತಾಯಿಯವರು ಸೋಲಾಪೂರದ ಬಾರಿ, ಹರಿಜನಕೇರಿ, ಹರಿಜನ ಬೋಡರ್ುಗಳಿಗೆ ನೆರವು ನೀಡಿದ್ದಾರೆ. ಶಿಕ್ಷಣ, ಸಂಘಟನೆ ಸ್ವಾಭಿಮಾನ ಹೋರಾಟವೆಂಬುದು ಅಂಬೇಡ್ಕರವರ ಘೋಷಣೆಯಾಗಿದ್ದರೆ, ಶಿಸ್ತು, ಸ್ವಚ್ಛತೆ, ಶಿಕ್ಷಣದಿಂದ ಮಾತ್ರ ದಲಿತರು ಮುಖ್ಯ ವಾಹಿನಿಗೆ ಬರಬಲ್ಲರೆಂಬುದು ಲಿಗಾಡೆಯವರ ಘೋಷಣೆ. ಇವರ ದಲಿತ ಪರ ಚಟುವಟಿಕೆಗಳನ್ನು ಗಮನಿಸಿದ ಇಳಿಕಲ್ಲಿನ ಮಹಾಂತಸ್ವಾಮಿಗಳು ಮೆಚ್ಚುಗೆ ಮಾತನಾಡಿರಿವುದು ಗಮನಾರ್ಹ.
ಸರಳತೆ : ವಸ್ತು ವ್ಯಾವೋಹದ ಆಧುನಿಕ ಜನರ ಮಧ್ಯ ಜಯದೇವಿ ತಾಯಿಯವರು ಶ್ರೀಮಂತಿಕೆಯಿದ್ದಾಗಲೂ ವಸ್ತು ನಿಮರ್ೋಹಿಗಳಾತದ್ದರು. ಆಗರ್ಭಶ್ರೀಮಂತರಾಗಿದ್ದರೂ ಬಂಗಾರದ ಒಡವೆಗಳನ್ನು ಹೊಂದಿರದೆ ಕೈ-ಕೊರಳಲ್ಲಿ ರುದ್ರಾಕ್ಷಿ ಸರ ಧರಿಸಿದ್ದರು.
ಅವರಲ್ಲಿ ಸಂಗ್ರಹ ರೂಪದ ಹಣ ಕೂಡ ಇರುತ್ತಿರಲಿಲ್ಲ. ಕಲ್ಯಾಣದಿಂದ ಸೋಲಾಪೂರ. ಮುಂಬೈ ಹೀಗೆ ಊರಿಂದೂರಿಗೆ ಹೋದಾಗ ಟಿಕೇಟು ತೆಗಿಸಿ ಆಟೋಗೆಂದು ಹಣ ನೀಡಿದರೆ, ಬಡವರು, ಭಿಕ್ಷುಕರು ಎದುರಾಗಿ ಭಿಕ್ಷೆ ಕೇಳಿದಾಗ ಇದ್ದ ಎಲ್ಲ ಹಣ ನೀಡಿ, ಬರಿಗೈಲಿ ಹೋಗಿ ಆಟೋದವನಿಗೆ ಮನೆ ಮುಂದೆ ನಿಲ್ಲಿಸಿ ಮನೆಯವರಿಂದ ಹಣ ಪಡೆದು ಕೊಟ್ಟ ಉದಾಹರಣೆಗೆ ಕೊರತೆಯಿಲ್ಲ. ಸರಳತೆ, ದಾಸೋಹ ಭಾವ ಅಹಂ ನಿರಸನ ಅವರ ಬದುಕಿನ ಮೂಲ ಸಿದ್ಧಾಂತವಾಗಿದ್ದವು.
ಭಾರತ ಸ್ವಾತಂತ್ರ್ಯ, ಹೈದ್ರಾಬಾದ ಕನರ್ಾಟಕದ ವಿಮೋಚನೆ ಮತ್ತು ಕನರ್ಾಟಕ ಏಕೀಕರಣ ಒಳಗೊಂಡಂತೆ ಸಮಗ್ರ ಕನರ್ಾಟಕದ ಅಭಿವೃದ್ಧಿಗೆ ದುಡಿದ ಜಯದೇವಿತಾಯಿಯವರಿಗೆ ಮಹಾರಾಷ್ಟ್ರದಲ್ಲಿ ಗುರುತಿಸುವುದಿಲ್ಲ. ಕನರ್ಾಟಕದಲ್ಲಿ ಅವರ ನೆನಪೇ ಇಲ್ಲ. ಅತ್ಯಂತ ಸಾಮಾನ್ಯ ಬರಹಗಾರರಿಗೆ ಸಂದ ಗೌರವ, ನೆರವು ಅವರಿಗೆ ಬಂದಿಲ್ಲ. ಸೋಲಾಪೂರ ಕನರ್ಾಟಕ್ಕೆ ಸೇರಬೇಕೆಂಬ ಜಯದೇವಿತಾಯಿ ಲಿಗಾಡೆಯವರ ಹೋರಾಟ ಫಲಪ್ರದವಾಗದಾಗ ತಾವೇ 1980ರಲ್ಲಿ ಸೋಲಾಪೂರ ತೊರೆದು ಕನರ್ಾಟಕದ ಗಡಿಭಾಗ, ಬಸವಾದಿ ಶರಣರ ಕಾಯಕಭೂಮಿ ಬಸವಕಲ್ಯಾಣದಲ್ಲಿ ಭಕ್ತಿಭವನ ಕಟ್ಟಿಕೊಂಡ ನೆಲೆಸಿದರು. ಕನ್ನಡ ಕೋಟೆ ಎಂಬ ಪ್ರಕಾಶನ ಸಂಸ್ಥೆ ತೆರೆದು, ಕನ್ನಡಕ್ಕಾಗಿ ದುಡಿಯುತ್ತ 1986ರ ಜುಲೈ 24ರಂದು ಕನ್ನಡ ನೆಲದಲ್ಲಿ ಕೊನೆಯುಸಿರೆಳೆದರು. ಬಸವಕಲ್ಯಾಣದಲ್ಲಿರುವ ಅವರ ಸಮಾಧಿ (ಗದ್ದುಗೆ)ಯನ್ನು ಸ್ಮಾರಕ ಮಾಡುವ ಸೌಜನ್ಯವನ್ನು ಕೂಡ ನಮ್ಮ ಸಕರ್ಾರ ತೋರಿಸಲಿಲ್ಲ.
-ಡಾ. ಬಸವರಾಜ ಬಲ್ಲೂರ ಬೀದರ
ದಿನಾಂಕ: ಮಾ. 7, 2013